ನಿರಾಶ್ರಿತರಿಗೆ ಊಟ ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ
ಮೈಸೂರು

ನಿರಾಶ್ರಿತರಿಗೆ ಊಟ ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ

April 25, 2020

ಮೈಸೂರು, ಏ.24- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಇಸ್ಕಾನ್ ಅಕ್ಷಯ ಪಾತ್ರೆಯ ನೆರವಿನೊಂದಿಗೆ ನಗರದ ವೃದ್ಧಾ ಶ್ರಮ ಹಾಗೂ ನಿರ್ಗತಿಕ ಕೇಂದ್ರಗಳಲ್ಲಿ ವಾಸಿಸುವ 1,200 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಶುಕ್ರವಾರ ಕಚೇರಿಯಲ್ಲಿ ಸಾಂಕೇತಿಕವಾಗಿ ದಾರಿಹೋಕರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ರಾಜ್ಯಾ ಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಹೆಚ್.ಕೆ.ರಾಮು ಮಾತನಾಡಿ, ಕೊರೊನಾ ಸೋಂಕು ಹರಡು ತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿ ಮಾಡಿ ರುವ ಲಾಕ್‍ಡೌನ್ ಕ್ರಮವನ್ನು ನಾವು ಪಾಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಿರಾಶ್ರಿ ತರು ಹಾಗೂ ಗಂಜಿಕೇಂದ್ರಗಳಲ್ಲಿ ವಾಸಿಸು ತ್ತಿರುವ ಜನರಿಗೆ ಸಂಘದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೆ.ಆರ್.ಆಸ್ಪತ್ರೆಯ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಗೆ ಅನುಕೂಲವಾಗುವಂತೆ ಸಂಘದ ವತಿ ಯಿಂದ ದಿನಸಿ ಪದಾರ್ಥಗಳನ್ನು ಆಸ್ಪತ್ರೆಯ ನಿರ್ದೇಶಕ ಡಾ.ನಂಜರಾಜು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಕೊರೊನಾ ಸೋಂಕು ಹರಡದಂತೆ ತಡೆ ಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮನೆ ಯಲ್ಲಿಯೇ ಇದ್ದು ಸಹಕರಿಸಬೇಕು. ಕೊರೊನಾ ವಿರುದ್ಧ ಹೋರಾಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಪೆÇಲೀಸರು ಅವಿರತ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಆದೇಶಿ ಸುವ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ದಲ್ಲಿ ಕೆ.ಆರ್.ಆಸ್ಪತ್ರೆ ಸೂಪಡೆಂಟ್ ಡಾ. ನಂಜುಂಡಸ್ವಾಮಿ, ಡಾ.ಶಶಿ, ಸಂಘದ ಗೌರ ವಾಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷ ಉದಯ್ ಕುಮಾರ್, ಆನಂದ್, ಕಾರ್ಯದರ್ಶಿ ಜೆ. ಗೋವಿಂದರಾಜ್, ಉಮೇಶ್, ಪದಾ ಧಿಕಾರಿಗಳು ಉಪಸ್ಥಿತರಿದ್ದರು.

Translate »