ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಅಣಕು
ಮೈಸೂರು

ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಅಣಕು

March 2, 2021

ಮೈಸೂರು,ಮಾ.1(ಪಿಎಂ)- ಪೆಟ್ರೋಲ್ -ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಆವರಣ ದಲ್ಲಿ ಗ್ಯಾಸ್ ಸಿಲಿಂಡರ್‍ಗಳಿಗೆ `ಮೂರು ನಾಮ’ ಹಾಕಿ ಪ್ರದರ್ಶಿಸಿ, ಸೌದೆ ಒಲೆ ಯಲ್ಲಿ ಅಡುಗೆ ತಯಾರಿಸಿ, ಊಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಮತ್ತೆ ಹಿಂದಿನಂತೆ ಸೌದೆ ಒಲೆಯಲ್ಲಿ ಜನತೆ ಅಡುಗೆ ತಯಾರಿಸುವ ಪರಿಸ್ಥಿತಿ ಬರಲಿದೆ ಎಂದು ಅಣಕಿಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಯಿಂದ ಬಡವರು ಹಾಗೂ ಮಧ್ಯಮ ವರ್ಗ ದವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ನ ತಿನ್ನುವ ಬದಲು ಗಂಜಿ ಕುಡಿಯುವ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ಮೋದಿಯವರ ಮೇಲೆ ದೇಶದ ಜನತೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಸೇರಿದಂತೆ ಎಲ್ಲಾ ಭರವಸೆಗಳು ಹುಸಿಯಾಗುತ್ತಿವೆ. ಕೇಂದ್ರ ಸರ್ಕಾರ ಜನತೆಯನ್ನು ದಿವಾಳಿ ಮಾಡಲು ಹೊರಟಿದೆ. ಗ್ಯಾಸ್ ಬೆಲೆ ದುಬಾರಿಯಾದ ಹಿನ್ನೆಲೆಯಲ್ಲಿ ಇದೀಗ ಜನ ಈ ಹಿಂದಿ ನಂತೆ ಸೌದೆ ಒಲೆಗಳನ್ನು ಅವಲಂಬಿಸುವ ಅನಿವಾರ್ಯ ಎದುರಾಗಲಿದೆ. ಖಾಲಿ ಸಿಲಿಂ ಡರ್‍ಗಳನ್ನು ತೂಕಕ್ಕೆ ಹಾಕಿ ಸೌದೆ ಖರೀ ದಿಸುವಂತ ದುಸ್ಥಿತಿ ಬರಲಿದೆ. ಇನ್ನಾ ದರೂ ಮೋದಿಯವರು ಜನಸಾಮಾನ್ಯರ ಬದುಕು ಬೀದಿಪಾಲಾಗುವುದನ್ನು ತಡೆ ಯುವ ನಿಟ್ಟಿನಲ್ಲಿ ಬೆಲೆ ಏರಿಕೆ ಕ್ರಮ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಾಗೃತ ವೇದಿಕೆ ರಾಜ್ಯಾ ಧ್ಯಕ್ಷ ಕೆ.ಎಸ್.ಶಿವರಾಮು, ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರುತ್ತಿದೆ. ಇಂದೂ ಕೂಡ 25 ರೂ. ಹೆಚ್ಚಳ ಮಾಡ ಲಾಗಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಆಡಳಿತದಲ್ಲಿ ಅಚ್ಛೆ ದಿನ ಬರುತ್ತದೆ ಎಂದು ಹೇಳುತ್ತಿದ್ದರು. ಅವರ ಅಚ್ಛೆ ದಿನ ಬಂದಿರುವುದು ಅವರಿಗೆ ಮತ್ತು ಅವರ ತಂಡಕ್ಕೆ ಮಾತ್ರ. ಇವರ ಆಡಳಿತದಲ್ಲಿ ದೇಶದ ಜನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಬಡವ ಇಂದು ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಜನ ಗಂಜಿ ಕುಡಿಯುವ ದಿನ ಬಂದಿದೆ. ಜನರ ವಿಶ್ವಾಸಕ್ಕೆ ನರೇಂದ್ರ ಮೋದಿ ದ್ರೋಹ ಬಗೆದಿದ್ದಾರೆ ಎಂದು ಖಂಡಿಸಿದರು.

ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಮೂಗೂರು ನಂಜುಂಡ ಸ್ವಾಮಿ, ಎಂ.ಲೋಕೇಶ್‍ಕುಮಾರ್, ಆರ್.ಕೆ.ರವಿ, ಎಂ.ಮಹೇಂದ್ರ, ಪವನ್, ಸಿದ್ದರಾಜು, ರೋಹಿತ್, ಜಿ.ರವಿನಾಯಕ, ಸುನಿಲ್, ನಾರಾಯಣ್, ಶರತ್ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »