ಪ್ರಜಾ ಪಾರ್ಟಿ ವತಿಯಿಂದ ಪ್ರತಿಭಟನೆ 
ಮೈಸೂರು

ಪ್ರಜಾ ಪಾರ್ಟಿ ವತಿಯಿಂದ ಪ್ರತಿಭಟನೆ 

March 2, 2021

ಮೈಸೂರು,ಮಾ.1(ಪಿಎಂ)- ಪೆಟ್ರೋಲ್ -ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗಾಂಧಿಚೌಕದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೋವಿಡ್-19 ಮಾರಕ ರೋಗದಿಂದ ದೇಶ ಲಾಕ್ ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಜನಸಾಮಾ ನ್ಯರು ಜೀವನ ನಿರ್ವಹಣೆಗೆ ಇಂದಿಗೂ ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ ಮಾಡಿ ರುವುದು ಗಾಯದ ಮೇಲೆ ಬರೆ ಎಳೆ ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಲಿ ಕಾರ್ಮಿಕರಂತೂ ದುಡಿದ ಹಣ ವನ್ನೆಲ್ಲಾ ಪೆಟ್ರೋಲ್-ಡೀಸೆಲ್‍ಗೆ ಬಳಸಿ ಹಸಿವಿನಿಂದ ಮಲಗುವಂತಹ ಪರಿಸ್ಥಿತಿ ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸೃಷ್ಟಿ ಮಾಡಿವೆ. ಸರ್ಕಾರಗಳ ಈ ಅವೈಜ್ಞಾನಿಕ ಕ್ರಮದಿಂದ ಜನ ತತ್ತರಿಸಿದ್ದು, ಸರ್ಕಾರದ ಈ ನಡೆ ನಿಜಕ್ಕೂ ಖಂಡ ನೀಯ ಎಂದು ಕಿಡಿಕಾರಿದರು.

ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳನ್ನು ಇಳಿಸಿ ಸಾಮಾನ್ಯ ಜನರ ನೆಮ್ಮದಿ ಜೀವನಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು. ಪ್ರಜಾ ಪಾರ್ಟಿ ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್, ಮೈಸೂರು ನಗರಾ ಧ್ಯಕ್ಷ ಪಿ.ಉಮೇಶ್, ಪ್ರಧಾನ ಕಾರ್ಯ ದರ್ಶಿ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದ್ಬೂರು ಎಂ.ಚಂದ್ರ ಶೇಖರ್, ವಕೀಲರಾದ ಮಾಳಪ್ಪ ಕುರ್ಕಿ ಗೌಡ, ಗಿರೀಶ್, ಮಹದೇವಸ್ವಾಮಿ, ಹರೀಶ್‍ಗೌಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

Translate »