ಮೈಸೂರು, ಜು. 4(ಆರ್‍ಕೆ)- ಮೈಸೂರು ಜಿಲ್ಲೆಯಲ್ಲೂ ದಿನ ದಿಂದ ದಿನಕ್ಕೆ ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತವು ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಮತ್ತು ಎದೆ ರೋಗಗಳ ಆಸ್ಪತ್ರೆಯಲ್ಲೂ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ನಡೆಸುತ್ತಿದೆ.
ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಪ್ರಸ್ತುತ ಮೇಟ ಗಳ್ಳಿ ಬಳಿಯ ಕೋವಿಡ್ ಆಸ್ಪತ್ರೆ 250 ಹಾಸಿಗೆ ಸಾಮಥ್ರ್ಯ ಹೊಂದಿದ್ದು, ಆದರೆ ನಾವು 200 ಮಂದಿ ಮಿತಿಗೊಳಿಸಿದ್ದೇವೆ ಎಂದರು.
ಅಲ್ಲಿ ಉಸಿರಾಟದ ತೊಂದರೆ ಹಾಗೂ ವೆಂಟಿಲೇಟರ್ ಅಗತ್ಯ ವಿರುವ ಕೊರೊನಾ ಸೋಂಕಿತ ರೋಗಿಗಳನ್ನು ಮಾತ್ರ ದಾಖ ಲಿಸಿಕೊಂಡು ತುರ್ತು ಚಿಕಿತ್ಸೆ ನೀಡುತ್ತಿದ್ದೇವೆ. ಈಗಾಗಲೇ ಇಲ್ಲಿ 160 ಮಂದಿ ರೋಗಿಗಳು ಇದ್ದು, ಇನ್ನೆರಡು ದಿನಗಳಲ್ಲಿ 200 ಮಂದಿಯಾಗುವ ಸಾಧ್ಯತೆ ಇದೆ ಎಂದರು.
ಮುಂದೆ ಕೋವಿಡ್-19 ಪ್ರಕರಣಗಳು ಹೆಚ್ಚಾದಲ್ಲಿ ಈಗಾ ಗಲೇ ಸಜ್ಜುಗೊಳಿಸಿರುವ ಕೆಆರ್‍ಎಸ್ ರಸ್ತೆಯ ಇಎಸ್‍ಐ ನೂತನ ಕಟ್ಟಡ ಮತ್ತು ಮಂಡಕಳ್ಳಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಓಯು) ದವರು ನಿರ್ಮಿಸಿರುವ ಹೊಸ ವಿಸ್ತರಣಾ ಕಟ್ಟಡದಲ್ಲಿ ಕೊರೊನಾ ಪಾಸಿಟಿವ್ ರೋಗಿಗಳನ್ನಿರಿಸಿ, ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.
ಅಲ್ಲಿ 500 ಮಂದಿಗೆ ಚಿಕಿತ್ಸೆ ನೀಡಲು ಅವಕಾಶವಿರುವು ದರಿಂದ ಅಲ್ಲಿಯೂ ಹಾಸಿಗೆಗಳು ಭರ್ತಿಯಾದಲ್ಲಿ ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆಯನ್ನು ಕೋವಿಡ್ ರೋಗಿ ಗಳಿಗೆ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುವುದು. ಅದಕ್ಕಾಗಿ ಅಲ್ಲಿನ ವಾರ್ಡ್‍ಗಳನ್ನು ಸಿದ್ಧಗೊಳಿಸುವ ಕಾರ್ಯ ಆರಂಭವಾಗಿದೆ ಎಂದರು. ವಾರ್ಡ್‍ಗಳ ಕಟ್ಟಡಗಳ ನಡುವೆ ಅಂತರ ಇರು ವುದರಿಂದ ಪಿಕೆಟಿಬಿ ಆಸ್ಪತ್ರೆಯಲ್ಲಿ ಗಾಳಿ-ಬೆಳಕಿನ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಅಂತರದಲ್ಲಿ ರೋಗಿಗಳನ್ನಿರಿಸಿ ಚಿಕಿತ್ಸೆ ನೀಡಲು ಅನುಕೂಲ ವಾತಾವರಣವಿದ್ದು, ಸುಮಾರು 300 ಮಂದಿಗೆ ಇಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಲ್ಲಿಯೂ ಭರ್ತಿಯಾದಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆ ಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ವೈರಸ್ ಸೋಂಕಿ ತರಿಗೆ ಮೀಸಲಿರಿಸಬೇಕೆಂದು ಕೇಳಿಕೊಂಡಿದ್ದೇವೆ. ಸ್ಪಾಟ್ ಟೆಸ್ಟ್ ಮಾಡುತ್ತಿರುವ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದವರನ್ನು ಅಲ್ಲಿಯೇ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇ ಕೆಂದು ಮಾಡಿರುವ ಮನವಿಗೆ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಸೋಂಕಿತರು ಜಾಸ್ತಿಯಾದಂತೆ ಚಿಕಿತ್ಸೆ ನೀಡಲು ವೈದ್ಯರು, ಪ್ಯಾರಾಮೆಡಿಕಲ್ ಸ್ಟ್ಯಾಫ್, ಸ್ವಚ್ಛತೆ ‘ಡಿ’ ಗ್ರೂಪ್ ನೌಕರರು, ಪಿಪಿಇ ಕಿಟ್, ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗು ತ್ತಿದೆ. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗು ತ್ತದೆ ಎಂದು ಜಿಲ್ಲಾಧಿಕಾರಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.