ಮೈಸೂರು, ಜು.4(ಪಿಎಂ)- ರಾವ್ ಬಹದ್ದೂರ್ ಧರ್ಮಪ್ರಕಾಶ ಡಿ.ಬನುಮಯ್ಯ ಅವರ 160ನೇ ಜಯಂತಿಯನ್ನು ಸತ್ಯ ಮೇವ ಜಯತೇ ಸಂಘಟನೆ ಹಾಗೂ ಡಿ.ಬನು ಮಯ್ಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಆಚರಿಸಲಾಯಿತು.
ಮೈಸೂರಿನ ಸಯ್ಯಾಜಿರಾವ್ ರಸ್ತೆ ಯಲ್ಲಿರುವ ಡಿ.ಬನುಮಯ್ಯ ಕಾಲೇಜು ಆವ ರಣದಲ್ಲಿರುವ ಡಿ.ಬನುಮಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಮಾಲಾರ್ಪಣೆ ಮಾಡಿದ ಬನುಮಯ್ಯ ಅವರ ಮೊಮ್ಮಗ ಜಯ ದೇವ್ ಮಾತನಾಡಿ, ನಮ್ಮ ತಾತ ಬನು ಮಯ್ಯನವರು ಹೆಚ್ಚು ಓದಿಲ್ಲದಿದ್ದರೂ ಓದಿನ ಮಹತ್ವ ಹಾಗೂ ಅಗತ್ಯವನ್ನು ಅರಿತಿದ್ದರು. ದೀನ-ದಲಿತ, ಬಡ-ಮಧ್ಯಮ ವರ್ಗದವರಿಗೆ ಯಾವುದೇ ತಾರತಮ್ಯ ವಿಲ್ಲದೆ ಸುಲಭವಾಗಿ ಶಿಕ್ಷಣ ದೊರೆಯ ಬೇಕೆಂಬುದು ಅವರ ಆಶಯವಾಗಿತ್ತು. ಆದ್ದರಿಂದಲೇ ಹಲವು ಶಾಲಾ-ಕಾಲೇಜು ಗಳನ್ನು ಮೈಸೂರು ನಗರದಲ್ಲಿ ಸ್ಥಾಪಿಸಿ, ತಮ್ಮ ಜೀವನದಲ್ಲಿ ದುಡಿದ ಹಣವ ನ್ನೆಲ್ಲಾ ಅದಕ್ಕಾಗಿಯೇ ವಿನಿಯೋಗಿಸಿದರು. ಅಂದು ಸ್ವಾತಂತ್ರ್ಯ ಹೋರಾಟ ಮಾಡು ತ್ತಿದ್ದವರಿಗೂ ಆರ್ಥಿಕ ನೆರವು ನೀಡಿ ದ್ದಾರೆ. ಇವರ ಸೇವೆ ಮೆಚ್ಚಿ ಅಂದಿನ ಮೈಸೂರು ಮಹಾರಾಜರು ಇವರಿಗೆ `ಧರ್ಮ ಪ್ರಕಾಶ’ ಬಿರುದು ನೀಡಿ ಸನ್ಮಾನಿಸಿದ್ದರು ಎಂದು ಸ್ಮರಿಸಿದರು.
ಸತ್ಯಮೇವ ಜಯತೇ ಸಂಘಟನೆ ಅಧ್ಯಕ್ಷ ರಾಕೇಶ್ ಕುಂಚಿಟಿಗ ಮಾತ ನಾಡಿ, ಈ ವಿದ್ಯಾಸಂಸ್ಥೆ ಮೈಸೂರು ನಗರ, ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯ ದಲ್ಲಿ ಪ್ರತಿಷ್ಠೆ ಹೊಂದಿದೆ. ಬನುಮಯ್ಯ ಕಾಲೇಜಿನಲ್ಲಿ ಓದಿದ 7 ಮಂದಿ ಮೈಸೂರು ಮೇಯರ್ ಆಗಿದ್ದಾರೆ ಎಂದರು.
ಪಾಲಿಕೆ ಮಾಜಿ ಸದಸ್ಯ ಕೆ.ಅಶೋಕ್, ಕುಂಚಿಟಿಗರ ಸಂಘದ ನಿರ್ದೇಶಕರಾದ ಎಂ.ಕೆ.ರವೀಶ್, ದೀಪಕ್, ಡಿ.ಬನು ಮಯ್ಯ ಶಿಕ್ಷಣ ಸಂಸ್ಥೆ ಹಳೆ ವಿದ್ಯಾರ್ಥಿ ಗಳಾದ ಅಜಯ್ ಶಾಸ್ತ್ರಿ, ಚಂದ್ರು, ಪುರುಷೋತ್ತಮ್, ಡಿಪೆÇೀ ಆನಂದ್, ಧನಪಾಲ್ ಮತ್ತಿತರರಿದ್ದರು.