ಗಿಡ ನೆಟ್ಟು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನಾಚರಣೆ
ಮೈಸೂರು

ಗಿಡ ನೆಟ್ಟು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನಾಚರಣೆ

July 5, 2020

ಮೈಸೂರು, ಜು.4(ಪಿಎಂ)- ಕನ್ನಡದ ಖ್ಯಾತ ಕಾದಂಬರಿಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮದಿನವನ್ನು ಮೈಸೂರಿನ ಜಯಲಕ್ಷ್ಮಿಪುರಂನ ಥಂಡಿ ಪಾರ್ಕ್‍ನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಬೇರು ಫೌಂಡೇಷನ್‍ನವರು ವಿಶೇಷ ರೀತಿಯಲ್ಲಿ ಶನಿವಾರ ಆಚರಿಸಿದರು.

ಈ ಸಂದರ್ಭ ಮಾತನಾಡಿದ ಬೇರು ಫೌಂಡೇಷನ್ ಅಧ್ಯಕ್ಷ ಮಧು ಎನ್.ಪೂಜಾರ್, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಪ್ಪಟ ಗಾಂಧಿವಾದಿ. ಅವರು ಗಾಂಧಿ ಚಳವಳಿ ಹಾಗೂ ಹೋರಾಟಗಳಿಂದ ಪ್ರೇರಣೆ ಪಡೆದವರು. ಗುಜರಾತಿಗೂ ತೆರಳಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಗಾಂಧೀಜಿ ಜೊತೆ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಗುಜರಾತಿನಲ್ಲಿ ಪ್ರತಿಷ್ಠಿತ ಪತ್ರಿಕೆಗಳಲ್ಲಿ 2 ವರ್ಷಗಳು ಕೆಲಸ ಮಾಡಿದ್ದಾರೆ. ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶ ಹಾಗೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಫೌಂಡೇಷನ್ ಸದಸ್ಯರಾದ ಚಂದ್ರ ಕಲಾ, ಗೌತಮ್, ಗುರುರಾಜ್, ವಿಜಯ್, ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

Translate »