ಮೈಸೂರು, ಜು.4(ವೈಡಿಎಸ್)- ಕೊರೊನಾ ಹರ ಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಿ ಸಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಅಪಾರ ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ವಾಪಸ್ಸಾಗು ತ್ತಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯ ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಬಳಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿಶ್ವಾದ್ಯಂತ ತಲ್ಲಣ ಉಂಟು ಮಾಡುತ್ತಿರುವ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಜನರನ್ನು ಭೀತಿಗೊಳಿಸಿದೆ. ಸೋಂಕು ಹರಡುವಿಕೆ ತಡೆಯಲು ಶನಿವಾರ ಸಂಜೆ 6ಗಂಟೆ ಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೂ (ಭಾನುವಾರ ಪೂರ್ಣ) ಲಾಕ್‍ಡೌನ್ ಘೋಷಿಸ ಲಾಗಿದೆ. ಉದ್ಯೋಗ ನಿಮಿತ್ತ ರಾಜಧಾನಿ ಬೆಂಗ ಳೂರಿನಲ್ಲಿ ನೆಲೆಸಿದ್ದ ಮೈಸೂರು ಮೂಲದವರು ಭಾನುವಾರ ಕುಟುಂಬದೊಂದಿಗೆ ಸೇರಿಕೊಳ್ಳಬೇಕೆಂದು ಯೋಚಿಸಿ ಮೈಸೂರಿನತ್ತ ಧಾವಿಸಿದರು. ಅದೇ ವೇಳೆ ಮೈಸೂರಿಂದಲೂ ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣಿಸಿದರು.
ಪರಿಣಾಮ ಬೆಂಗಳೂರು-ಮೈಸೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಬಳಿ ಶನಿವಾರ ಸಂಜೆ 4 ಗಂಟೆ ವೇಳೆಗೆ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ತಲೆದೋರಿತು.
ಸಂಚಾರ ನಿಯಂತ್ರಣ: ಅದುವರೆಗೂ ಸಮಯ ಮಿತಿ ಲೆಕ್ಕದಲ್ಲಿ ಯಾಂತ್ರೀಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಗ್ನಲ್ ಲೈಟ್‍ಗಳನ್ನು ಸ್ಥಗಿತ ಗೊಳಿಸಿದ ಗೃಹರಕ್ಷಕ ದಳದ ರಘುಕುಮಾರ್, ಮ್ಯಾನ್ಯುಯಲ್ ಸಿಸ್ಟಂಗೆ ಬದಲಿಸಿ ವಾಹನ ದಟ್ಟಣೆ ಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸಿದರು.
ಸೆಕೆಂಡ್‍ಗಳ ಲೆಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಗ್ನಲ್ ಲೈಟ್‍ಗಳನ್ನು ಬಂದ್ ಮಾಡಿ, ವಾಹನ ದಟ್ಟಣೆ ಇರುವ ಮಾರ್ಗದಲ್ಲಿ ಹೆಚ್ಚು ಸಮಯ ವಾಹನ ಸಂಚಾರಕ್ಕೆ ಅವಕಾಶ ನೀಡಿ ವಾಹನ ದಟ್ಟಣೆ ತಗ್ಗಿಸಿದರು.