ಮೈಸೂರಲ್ಲಿ ಕೋವಿಡ್ ವಾರ್ ರೂಂ, ಹೆಲ್ಪ್‍ಲೈನ್ ಆರಂಭಕ್ಕೆ ಸಿದ್ಧತೆ
ಮೈಸೂರು

ಮೈಸೂರಲ್ಲಿ ಕೋವಿಡ್ ವಾರ್ ರೂಂ, ಹೆಲ್ಪ್‍ಲೈನ್ ಆರಂಭಕ್ಕೆ ಸಿದ್ಧತೆ

December 6, 2021

ಮೈಸೂರು,ಡಿ.5(ಎಂಟಿವೈ)- ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಕೋವಿಡ್ ವಾರ್ ರೂಂ ಹಾಗೂ ಹೆಲ್ಪ್‍ಲೈನ್ ಪುನರಾ ರಂಭಿಸಲು ಮುಂದಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಸಾವು -ನೋವು ಉಂಟಾದ ಹಿನ್ನೆಲೆಯಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದ ಕೋವಿಡ್ ವಾರ್ ರೂಂ ಮತ್ತು ಹೆಲ್ಪ್‍ಲೈನ್ ಆರಂಭಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಇದೀಗ ರೂಪಾಂತರಿ ವೈರಸ್ ಒಮಿ ಕ್ರಾನ್ ಸಂಖ್ಯೆ ಹೆಚ್ಚಾದರೆ ಅವರ ಮಾಹಿತಿ ಕಲೆ ಹಾಕಿ ಸೂಕ್ತ ಚಿಕಿತ್ಸೆ ಕೊಡಿಸುವುದ ರೊಂದಿಗೆ ಸೋಂಕಿತರು ಎಲ್ಲೆಂದರಲ್ಲಿ ಓಡಾಡಿ ಸೋಂಕು ಹರಡದಂತೆ ನೋಡಿ ಕೊಳ್ಳುವ ನಿಟ್ಟಿನಲ್ಲಿ ವಾರ್ ರೂಮ್ ಹಾಗೂ ಸಹಾಯವಾಣಿಗಳು ಕೆಲಸ ನಿರ್ವಹಿಸ ಬೇಕಾಗಿರುವುದರಿಂದ ಅದರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯೂ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ದಲ್ಲಿ ವಾರ್ ರೂಮ್, ಸಹಾಯವಾಣಿ ಕಾರ್ಯನಿರ್ವಹಿಸಲಿವೆ. ಬೆರಳ ತುದಿ ಯಲ್ಲೇ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಮತ್ತು ಒಮಿಕ್ರಾನ್ ಸೋಂಕಿತರ ಚಿಕಿತ್ಸೆ ಗಾಗಿ ಖಾಲಿಯಿರುವ ಹಾಸಿಗೆ, ಆಕ್ಸಿಜûನ್ ಬೆಡ್, ಐಸಿಯು, ವೆಂಟಿಲೇಟರ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕ್ರೋಢೀಕರಿಸುವ ವ್ಯವಸ್ಥೆ ವಾರ್ ರೂಮ್‍ನದ್ದಾಗಿರುವುದ ರಿಂದ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಅಪಾಯದಿಂದ ಪಾರು ಮಾಡಲು ಸಹಕಾರಿಯಾಗಲಿದೆ.

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ,
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ವಾರ್ ರೂಮ್, ಸಹಾಯ ವಾಣಿ, ಹೋಮ್ ಐಸೋಲೇಷನ್ ಟೀಮ್, ಕಾಂಟ್ಯಾಕ್ಟ್ ಟ್ರೇಸಿಂಗ್ ಟೀಮ್, ಟೆಲಿಮೆಡಿಸನ್ ಟೀಮ್ ಸೇರಿದಂತೆ ಇನ್ನಿತರ ತಂಡವನ್ನು ರಚಿಸಲಾಗುವುದು. ಈಗಾಗಲೇ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಪ್ರಸ್ತುತ ಮೈಸೂರಿನ ಕೊರೊನಾ ಪಾಸಿಟಿವಿಟಿ ರೇಟ್ ಶೇ.0.1ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಹಾಸಿಗೆಗಳು ಖಾಲಿ ಇದೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿಲ್ಲ. ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯೂ ಕಡಿಮೆಯಿರುವುದರಿಂದ ಸೋಂಕಿತರ ಟ್ರೇಸ್ ಮಾಡುವುದು ಸವಾಲಾಗಿಲ್ಲ. ದಿನಕ್ಕೆ 100ಕ್ಕಿಂತಲೂ ಹೆಚ್ಚಿನ ಸೋಂಕಿತರು ಪತ್ತೆಯಾದರೆ ಮಾತ್ರ ಟ್ರೇಸ್ ಮಾಡಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ವಾರ್ ರೂಮ್ ಅಗತ್ಯವಿಲ್ಲ. ಆದರೂ ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ವಾರ್ ರೂಮ್, ಸಹಾಯ ವಾಣಿ ಆರಂಭಿಸಲಾಗುತ್ತದೆ ಎಂದರು. 2ನೇ ಅಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸೇರಿದಂತೆ 8,000 ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ, ಮಂಡಕಳ್ಳಿ ಬಳಿ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‍ಒಯು) ಕೋವಿಡ್ ಕೇರ್ ಸೆಂಟರ್ 1,000 ಹಾಸಿಗೆಗಳನ್ನು ತೆರೆಯಲಾಗುವುದು. ಸೋಂಕಿತ ಗರ್ಭಿಣಿಯರಿ ಗಾಗಿ ಎಸ್‍ಎಂಟಿ ಆಸ್ಪತ್ರೆಯನ್ನು ಕಾಯ್ದಿರಿಸಲಾಗಿದೆ ಎಂದರು. ಈ ಸಾಲಿನಲ್ಲಿ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 10 ಆಮ್ಲಜನಕ ಉತ್ಪಾದಿಸುವ ಸ್ಥಾವರಗಳಿವೆ. ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆಯಲ್ಲಿ ಒಂದು ವಾರದೊಳಗೆ ಆಮ್ಲಜನಕ ಉತ್ಫಾದನಾ ಸ್ಥಾವರ ಕಾರ್ಯಾರಂಭಿಸಲಿದೆ. ಇದರಿಂದ ಈ ಬಾರಿ ಆಮ್ಲಜನಕದ ಕೊರತೆ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

Translate »