ನವದೆಹಲಿ: ವಿಪಕ್ಷಗಳ ವಿರೋಧದ ನಡುವೆಯೂ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ಕೃಷಿ ಸಂಬಂಧಿತ 3 ಮಸೂದೆಗಳಿಗೆ ಸಹಿ ಹಾಕಿದ್ದು, ಇಂದಿನಿಂದ ಕಾನೂನಾಗಿ ಮಾರ್ಪಾಡಾಗಲಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಹಾಗೂ ರೈತರಿಗೆ ಗುತ್ತಿಗೆ ಕೃಷಿಗೆ ಪ್ರವೇಶಿ ಸಲು ಚೌಕಟ್ಟನ್ನು ಒದಗಿಸುವ ಮಸೂದೆ ಅಂಗೀಕರಿಸಲಾಗಿತ್ತು. ಈ ಮಸೂದೆ ರೈತರ ಡೆತ್ ವಾರೆಂಟ್, ಅದಕ್ಕೆ ಸಹಿ ಹಾಕು ವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದರೆ, ದೇಶದ ಒಟ್ಟು ಜಿಡಿಪಿಗೆ ಕನಿಷ್ಠ 20% ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡು ತ್ತವೆ ಎಂದು ಪ್ರತಿಪಕ್ಷಗಳು ಹೇಳಿದ್ದವು.