ಬಿಜೆಪಿ ಸರ್ಕಾರ ರೈತಪರ   ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು

ಬಿಜೆಪಿ ಸರ್ಕಾರ ರೈತಪರ  ಸಚಿವ ಎಸ್.ಟಿ.ಸೋಮಶೇಖರ್

September 28, 2020

ಮೈಸೂರು,ಸೆ.27(ಆರ್‍ಕೆಬಿ)-ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಗಳು ಯಾವತ್ತೂ ರೈತರ ಪರವೇ. ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಅಧಿವೇಶನದಲ್ಲಿ ಚರ್ಚೆಯಾದ ಬಳಿಕವೇ ಒಪ್ಪಿಗೆ ಪಡೆಯಲಾಗಿದೆ. ಹಾಗಾಗಿ ಇದಕ್ಕೆ ರೈತರ ವಿರೋಧವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ತೊಂದರೆಯಾಗುವ ಯಾವ ಕಾಯ್ದೆಯನ್ನೂ ಮಾಡಿಲ್ಲ. ರೈತರಿಗೆ

ಅನ್ಯಾಯವಾಗುವಂತಿದ್ದರೆ ಸಿಎಂ ಯಡಿಯೂರಪ್ಪ ಅದನ್ನು ಒಪ್ಪಿಕೊಳ್ಳುತ್ತಿಲಿಲ್ಲ ಎಂದರು. ರೈತಪರ ವಾದ ಒಳ್ಳೆಯ ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದು, ಇದರ ಬಗ್ಗೆ ಸದನ ದಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ಮಸೂದೆ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಕೊಡುತ್ತೇವೆ. ಸೋಮವಾರದ ಬಂದ್‍ಗೆ ರೈತರು ಬೆಂಬಲ ನೀಡುತ್ತಿಲ್ಲ. ಕಾಂಗ್ರೆಸ್‍ನವರು ಕಾಟಾಚಾರಕ್ಕೆ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಅವರು ರಾಜಕಾರಣಕ್ಕೋಸ್ಕರ ವಿರೋಧ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿ ಯೂರಪ್ಪ ಜನರಿಗೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

 

 

 

Translate »