ಮೈಸೂರು,ಸೆ.27(ಆರ್‍ಕೆಬಿ)- ಸೋಮ ವಾರ ನಡೆಯುವ ಕರ್ನಾಟಕ ಬಂದ್ ನಲ್ಲಿ ರೈತರು ಭಾಗಿಯಾಗುತ್ತಿಲ್ಲ. ರೈತರ ಹೆಸರಿನಲ್ಲಿ ಸಂಘಟನೆಗಳು ಭಾಗವಹಿ ಸುತ್ತಿವೆ ಅಷ್ಟೆ. ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ಹೇಳಿದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಕಾರ್ಯಕ್ರಮದಲ್ಲಿ ಭಾನುವಾರ ಭಾಗ ವಹಿಸುವ ಮುನ್ನ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, ಬಂದ್ ಮಾಡುವವರು ಅವರಿಗಾಗುವ ಲಾಭದ ಬಗೆಗಷ್ಟೇ ಯೋಚಿಸುತ್ತಾರೆ. ಅವರು ರೈತರ ಏಳಿಗೆ ಬಯಸುವವರಲ್ಲ. ಕಾಯ್ದೆ ಮೂಲಕ ದಳ್ಳಾಳಿ ವ್ಯವಸ್ಥೆಯಿಂದ ರೈತ ರನ್ನು ಮುಕ್ತ ಮಾಡುವುದು ತಪ್ಪಾ? ಎಂದು ಕಿಡಿಕಾರಿದರು. ತಿದ್ದುಪಡಿ ಕಾಯ್ದೆ ಗಳು ರೈತರಿಗೆ ಮಾರಕ ಎಂದು ಬೊಬ್ಬೆ ಹೊಡೆಯುವವರು ಈವರೆಗೆ ರೈತರು ಮತ್ತು ಗ್ರಾಹಕರಿಗೆ ಏನು ಮಾಡಿದ್ದಾರೆ? 70-80 ವರ್ಷಗಳಿಂದ ಇದ್ದ ತೊಂದರೆ ತಪ್ಪಿಸಿದರೇ? ರೈತರು ಮತ್ತು ಗ್ರಾಹಕ ರನ್ನು ಶೋಷಿಸುವ ದಲ್ಲಾಳಿ ವ್ಯವಸ್ಥೆ ತೆಗೆದು ರೈತರೇ ತಮ್ಮ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಅವಕಾಶ ಕೊಟ್ಟಿದ್ದರೇ? ಆ ಕೆಲಸವನ್ನು ಈಗ ಬಿಜೆಪಿ ಸರ್ಕಾರ ಮಾಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟದ್ದೇ ಕಾಂಗ್ರೆಸ್. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ ಎಂದು ವಾಗ್ದಾಳಿ ನಡೆಸಿದರು. ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವು ದಿಲ್ಲ. ಮಹಿಷ ದಸರಾ ಆಚರಿಸುವವರ ಬಗ್ಗೆ ಚಿಂತಿಸುವುದಿಲ್ಲ. ಸಾಂಪ್ರದಾಯಿಕ, ಸರಳ ದಸರಾ ಆಚರಣೆ ಮಾಡುವ ಬಗ್ಗೆ ಮಾತ್ರ ನಮ್ಮ ಯೋಚನೆ ಎಂದರು.