ಮೈಸೂರು, ಸೆ.27(ಎಂಟಿವೈ)- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದು ಪಡಿ ತಂದು ಬಂಡವಾಳಶಾಹಿಗಳಿಗೆ ಮಣೆ ಹಾಕಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ, ಜನ ವಿರೋಧಿ ನೀತಿ ಖಂಡಿಸಿ ನಾಳೆ(ಸೆ.28) ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿಯ ಕರೆ ನೀಡಿರುವ `ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿವೆಯಾದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ.
ನಾಳಿನ ಕರ್ನಾಟಕ ಬಂದ್‍ಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐ(ಎಂ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿವೆ. ಇದರೊಂ ದಿಗೆ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆ, ರೈತ ಸಂಘಟನೆ, ಕಬ್ಬುಬೆಳೆಗಾರರ ಸಂಘ, ಎಪಿಎಂಸಿ ವರ್ತಕರ ಸಂಘ, ದೇವರಾಜ ಮಾರು ಕಟ್ಟೆ ವರ್ತಕರ್ತರ ಸಂಘ, ವಿವಿಧ ವ್ಯಾಪಾರಿಗಳ ಸಂಘ, ಆಟೋ ರಿಕ್ಷಾ, ಓಲಾ, ಊಬರ್ ಚಾಲಕರ ಸಂಘಟನೆ ಬಂದ್‍ಗೆ ಬೆಂಬಲ ನೀಡಿರುವುದರಿಂದ ಮೈಸೂರಲ್ಲಿ ಬಂದ್‍ಗೆ ಉತ್ತಮ ಸ್ಪಂದನೆ ದೊರೆಯಲಿದೆ ಎಂದು ಹೇಳಲಾಗಿದೆ. ಕರ್ನಾಟಕ ಬಂದ್‍ಗೆ
ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 6.30ರಿಂದಲೇ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ವಿವಿಧ ಸಂಘಟನೆ ಗಳ 600ಕ್ಕೂ ಹೆಚ್ಚು ಮಂದಿ ಸೇರಲು ನಿರ್ಧರಿಸಲಾಗಿದೆ. ಬಳಿಕ ವಿವಿಧ ತಂಡಗಳಾಗಿ ವಿಂಗಡಣೆಯಾಗಿ ಬೇರೆ ಬೇರೆ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ, ವರ್ತಕರಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ, ದಲಿತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ವಿರುದ್ದ ಈಗಾಗಲೇ ವಿವಿಧ ಸ್ವರೂಪದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಸರಣಿ ಪ್ರತಿಭಟನೆ ಮಾಡಿದರೂ ಎರಡೂ ಸರ್ಕಾರಗಳ ಬಂಡವಾಳಶಾಹಿಗಳ ಹಿತಕಾಯುವ ನಿರ್ಧಾರ ದಿಂದ ಹಿಂದೆ ಸರಿದಿಲ್ಲ. ಕೇವಲ ಉಳ್ಳವರು, ಮಲ್ಟಿನ್ಯಾಷನಲ್ ಕಂಪನಿಗಳ ಏಳಿಗೆಗೆ ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರು, ರೈತಾಪಿ ವರ್ಗ, ಶ್ರಮಿಕ ವರ್ಗಗಳಿಗೆ ಮರಣ ಶಾಸನವನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ಕೊರೊನಾ ಸಂಕಷ್ಟದಿಂದ ದೇಶದ ಜನತೆ ತತ್ತರಿಸಿದ್ದಾರೆ. ರಾಜ್ಯದಲ್ಲೂ ಪರಿಸ್ಥಿತಿ ಕೈ ಮೀರುತ್ತಿದೆ. ಸೋಂಕಿತರೊಂದಿಗೆ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇತಂಹ ಸಂಕಷ್ಟದ ಸಮಯವನ್ನೇ ಬಂಡವಾಳವನ್ನಾಗಿಸಿಕೊಂಡು ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಅಂಶಗಳನ್ನು ಸೇರಿಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ ಎಂದರು.
ಪರಿಸ್ಥಿತಿ ನೋಡಿ ಕ್ರಮ
ಮೈಸೂರು ನಗರ ವಿಭಾಗದ ಬಸ್ ಸಂಚಾರ ಎಂದಿನಂತೆ ಸೋಮವಾರವೂ ನಡೆಯಲಿದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಬಸ್ ಸಂಚಾರ ನಡೆಸಬೇಕೋ ಅಥವಾ ಸ್ಥಗಿತಗೊಳಿಸಬೇಕೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಭಾನುವಾರ ರಾತ್ರಿ ವಿವಿಧ ಗ್ರಾಮಗಳಲ್ಲಿ ತಂಗುವ ಬಸ್ ಸಂಚಾರ ಎಂದಿನಂತಿರುತ್ತದೆ. ನಗರ ಬಸ್ ನಿಲ್ದಾಣ ಮತ್ತು ಬಸ್ ಡಿಪೋಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
-ಎಸ್.ಪಿ.ನಾಗರಾಜು, ವಿಭಾಗೀಯ ನಿಯಂತ್ರಣಾಧಿಕಾರಿ
ಸಾರ್ವಜನಿಕ ಆಸ್ತಿ,ಪಾಸ್ತಿಗೆ ನಷ್ಟ ಮಾಡಿದರೆ ಕ್ರಮ
ಮೈಸೂರು, ಸೆ.27(ಎಸ್‍ಬಿಡಿ)- ಬಂದ್ ಹಿನ್ನೆಲೆ ಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮೈಸೂ ರಿನ ಡಿಸಿಪಿ ಎ.ಎನ್.ಪ್ರಕಾಶ್‍ಗೌಡ ಎಚ್ಚರಿಸಿದ್ದಾರೆ.
ವಿವಿಧ ಸಂಘಟನೆಗಳು ರಾಜ್ಯ ಬಂದ್‍ಗೆ ಕರೆ ನೀಡಿ ರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ. ರ್ಯಾಲಿ, ಮೆರವಣಿಗೆಗೆ ಅವಕಾಶ ವಿಲ್ಲ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡುವಂತಿಲ್ಲ. ನಿಯಮ ಉಲ್ಲಂಘಿ ಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಗಿ ಬಂದೋಬಸ್ತ್: ಸೋಮವಾರ ಮುಂಜಾನೆ 5 ಗಂಟೆಯಿಂದಲೇ ಪೊಲೀಸರು ಬಂದೋಬಸ್ತ್ ಕೈಗೊಳ್ಳಲಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಲ್ಲಿ 24 ಇನ್‍ಸ್ಪೆಕ್ಟರ್‍ಗಳು, 30ಕ್ಕೂ ಹೆಚ್ಚು ಸಬ್‍ಇನ್‍ಸ್ಪೆಕ್ಟರ್‍ಗಳು, 2 ಕೆಎಸ್‍ಆರ್‍ಪಿ, 16 ಸಿಆರ್ ತುಕಡಿ, 2 ಕಮಾಂಡೋ ಪಡೆ ಸೇರಿದಂತೆ 800ಕ್ಕೂ ಹೆಚ್ಚು ಪೊಲೀಸರು ನಿಗಾ ವಹಿಸಲಿದ್ದಾರೆ ಎಂದರು.