ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಶತಮಾನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

March 10, 2022

೨೦೨೪ರ ಆಗಸ್ಟ್ನಲ್ಲಿ ಅದ್ಧೂರಿ ಸಮಾರಂಭ

ಸುಮಾರು ೧೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆ.ಆರ್., ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆ ಅಭಿವೃದ್ಧಿ

ಸಂಸದ ಪ್ರತಾಪ್‌ಸಿಂಹರಿAದ ಪೂರ್ವಭಾವಿ ಸಭೆ, ಆಗಸ್ಟ್ ಮಾಹೆಯಿಂದ ಪುನರುಜ್ಜೀವನ ಕಾಮಗಾರಿ ಆರಂಭಿಸಲು ಸೂಚನೆ

ಮೈಸೂರು,ಮಾ.೯(ಆರ್‌ಕೆ)- ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಆಸ್ಪತ್ರೆ (ಒಒಅ &ಖI)ಗೆ ಶತಮಾ ನೋತ್ಸವದ ಸಂಭ್ರಮ.

೧೯೨೪ರಲ್ಲಿ ಆರಂಭವಾದ ರಾಜ್ಯದ ಮೊದಲ ಹಾಗೂ ಹಳೆಯ ವೈದ್ಯಕೀಯ ಕಾಲೇಜಿಗೆ ೨೦೨೪ರ ಆಗಸ್ಟ್ನಲ್ಲಿ ೧೦೦ ವರ್ಷ ತುಂಬು ತ್ತದೆ. ದೇಶದ ೨ನೇ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ, ಶತಮಾನೋತ್ಸವದ ಹೊಸ್ತಿ ಲಲ್ಲಿರುವ ಹಿನ್ನೆಲೆಯಲ್ಲಿ ಇದರ ಅಧೀನ ದಲ್ಲಿ ಬರುವ ಕೆ.ಆರ್., ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆ, ವಿದ್ಯಾರ್ಥಿನಿಲಯಗಳನ್ನು ಪುನರುಜ್ಜೀವನಗೊಳಿಸಿ ಮೂಲಭೂತ ಸೌಲಭ್ಯಗಳೊಂದಿಗೆ ಸಮಗ್ರ ಅಭಿವೃದ್ಧಿ ಗೊಳಿಸಲು ಜನಪ್ರತಿನಿಧಿಗಳು ಮುಂದಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಬುಧವಾರ ಕಾಲೇಜು ಸಭಾಂಗಣ ದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಡಿಪಿಆರ್ ತಯಾರಿ: ಶತಮಾನೋತ್ಸ ವದ ಹಿನ್ನೆಲೆಯಲ್ಲಿ ಕಾಲೇಜಿನ ಅಧೀನದಲ್ಲಿ ರುವ ಬೋಧನಾ ಆಸ್ಪತ್ರೆಗಳಾದ ಕೆ.ಆರ್., ಚೆಲುವಾಂಬ ಹಾಗೂ ಪಿಕೆಟಿಬಿ ಆಸ್ಪತ್ರೆ ಗಳನ್ನು ಆಧುನೀಕರಣಗೊಳಿಸಲು ಸಮಗ್ರ ಯೋಜನಾ ವರದಿ(ಡಿಪಿಆರ್) ಹಾಗೂ ಲೈನ್ ಎಸ್ಟಿಮೇಟ್ ತಯಾರಿಸುವಂತೆ ಸಂಸ ದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೋಗಿಗಳ ಸ್ಥಳಾಂತರ: ಕೆ.ಆರ್.ಆಸ್ಪತ್ರೆ ಕಟ್ಟಡದ ದುರಸ್ತಿ ಮಾಡಬೇಕಾದರೆ ಅಲ್ಲಿನ ಒಳ ರೋಗಿಗಳನ್ನು ಕೆಆರ್‌ಎಸ್ ರಸ್ತೆಯ ಲ್ಲಿರುವ ಪಿಕೆಟಿಬಿ ಆಸ್ಪತ್ರೆ ಆವರಣದ ರಾಜ ಮಾತೆ ಕೃಷ್ಣಾಜಮ್ಮಣ ್ಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರ‍್ರೆಗೆ ಸ್ಥಳಾಂತರಿಸಬೇಕು. ಅದಕ್ಕಾಗಿ ವೈದ್ಯರು, ವೈದ್ಯಕೇತರ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಬೇಕು, ವೈದ್ಯಕೀಯ ಉಪಕರಣ ಗಳನ್ನು ಅಳವಡಿಸಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವಂತೆ ಎಂಎAಸಿ ಅಂಡ್ ಆರ್‌ಐ ಡೀನ್ ಅಂಡ್ ಡೈರೆಕ್ಟರ್ ಡಾ. ಹೆಚ್.ಎನ್.ದಿನೇಶ್ ಅವರಿಗೆ ಸೂಚಿಸಿದರು.
ಸಂಪನ್ಮೂಲ ಕ್ರೋಢೀಕರಣ: ಆಸ್ಪತ್ರೆಗಳ ನವೀಕರಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ಗಳಿಗೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ಚಿಕಿತ್ಸೆಗೆ ಸಜ್ಜುಗೊಳಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಗೊಳಿಸಬೇಕಿದೆ.

ಈಗಾಗಲೇ ರಾಜ್ಯ ಸರ್ಕಾರವು ಕೆ.ಆರ್. ಆಸ್ಪತ್ರೆ ಅಭಿವೃದ್ಧಿಗೆ ೮೯ ಕೋಟಿ ಅನುದಾನ ವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮೀಸಲಿ ರಿಸಿದೆ. ಉಳಿದಂತೆ ಖಾಸಗಿ ಕಂಪನಿಗಳಿAದ ನೀಡುವ ಸಿಎಸ್‌ಆರ್ (ಕಾರ್ಪೊರೇಟ್ ಕಂಪನಿ ಗಳ ಸಾಮಾಜಿಕ ಹೊಣೆಗಾರಿಕೆೆ) ಅನು ದಾನ ಹಾಗೂ ಮೈಸೂರು ಮೆಡಿಕಲ್ ಕಾಲೇಜಲ್ಲಿ ಓದಿ, ವೈದ್ಯಕೀಯ ವೃತ್ತಿಯಲ್ಲಿ ರುವ ಹಳೇ ವಿದ್ಯಾರ್ಥಿಗಳಿಂದ ಸಂಪನ್ಮೂಲ ಕ್ರೋಢೀಕರಿಸುವಂತೆ ಸಲಹೆ ನೀಡಿದರು.
ಪುನರುಜ್ಜೀವನ: ಆಸ್ಪತ್ರೆ ಕಟ್ಟಡಗಳ ದುರಸ್ತಿ, ಶೌಚಾಲಯ, ಕಿಟಕಿ, ಬಾಗಿಲು ಗಳ ರಿಪೇರಿ, ಒಳಚರಂಡಿ, ಕುಡಿಯುವ ನೀರು, ಲ್ಯಾಂಡ್ ಸ್ಕೇಪಿಂಗ್, ಸ್ವಚ್ಛತೆ, ಫುಟ್‌ಪಾತ್ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ಆಸ್ಪತ್ರೆ ಸುತ್ತ ಸುಸಜ್ಜಿತ ಕಾಂಪೌAಡ್ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡುವಂತೆಯೂ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಯಾಲಿಸಿಸ್ ಸೆಂಟರ್: ಕೆ.ಆರ್. ಆಸ್ಪತ್ರೆಯ ಒಂದು ಬ್ಲಾಕ್‌ನಲ್ಲಿ ೫೦ ಹಾಸಿಗೆ ಸಾಮರ್ಥ್ಯದ ಡಯಾಲಿಸಿಸ್ ಸೆಂಟರ್ ಮಾಡಿ ನಿತ್ಯ ರೋಗಿಗಳಿಗೆ ಡಯಾಲಿಸಿಸ್ ಮಾಡುವ ಮೂಲಕ ಬಡವರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸದAತೆ ಕ್ರಮ ವಹಿಸಿ ಎಂದು ಪ್ರತಾಪ್ ಸಿಂಹ ನುಡಿದರು.

ಕಾಮಗಾರಿ ಆರಂಭಿಸಿ: ಪ್ರಸಕ್ತ ಸಾಲಿನ ಮೇ ತಿಂಗಳೊಳಗೆ ಅಂದಾಜು ತಯಾ ರಿಸಿ ಸರ್ಕಾರದ ಅನುಮೋದನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಆಗಸ್ಟ್ ಮಾಹೆ ಯಿಂದಲೇ ಸಿವಿಲ್ ಕಾಮಗಾರಿ ಆರಂಭಿ ಸಲು ಸರ್ವ ಸಿದ್ಧತೆ ಮಾಡುವಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಧಾನಿ ಮೋದಿಗೆ ಆಹ್ವಾನ: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭವನ್ನು ಪ್ರಧಾನಮಂತ್ರಿಗಳೇ ಉದ್ಘಾಟನೆ ಮಾಡಿರುವುದರಿಂದ ವೈದ್ಯ ಕೀಯ ಕಾಲೇಜಿನ ೧೦೦ನೇ ವರ್ಷದ ಕಾರ್ಯ ಕ್ರಮವನ್ನು ಮೋದಿ ಅವರಿಂದಲೇ ಉದ್ಘಾ ಟಿಸಬೇಕೆಂಬ ಉದ್ದೇಶವಿರುವ ಕಾರಣ ಅಭಿವೃದ್ಧಿ ಕಾರ್ಯವನ್ನು ಸಮರೋಪಾದಿ ಯಲ್ಲಿ ನಡೆಸುವಂತೆಯೂ ತಿಳಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆ ಕ್ಟರ್ ಡಾ.ಹೆಚ್.ಎನ್.ದಿನೇಶ್, ಪ್ರಾಂಶು ಪಾಲರಾದ ಡಾ.ಕೆ.ಆರ್.ದಾಕ್ಷಾಯಿಣ , ಮುಖ್ಯ ಆಡಳಿತಾಧಿಕಾರಿ ಬಿ.ಎನ್.ವೀಣಾ, ಕೆ.ಆರ್. ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್, ಲೋಕೋಪಯೋಗಿ ಇಲಾಖೆ ಇಂಜಿನಿ ಯರ್‌ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕೈಗೆತ್ತಿಕೊಳ್ಳಲುದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಗಳು
ಮೈಸೂರು, ಮಾ.೯(ಆರ್‌ಕೆ)- ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶತಮಾನೋತ್ಸವದ ನೆನಪಿಗಾಗಿ ಕಾಲೇಜು, ಕೆ.ಆರ್., ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗಾಗಿ ಹಲವು ಅಭಿ ವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಾಲೇಜಿನ ಪ್ರಿ ಅಂಡ್ ಪ್ಯಾರಾ ಕ್ಲಿನಿಕಲ್ ಬ್ಲಾಕ್‌ಗಳ ನವೀಕರಣ ಮತ್ತು ಸಂರಕ್ಷಣೆ, ಜೆಎಲ್‌ಬಿ ರಸ್ತೆಯಲ್ಲಿರುವ ಯುಜಿ ಬಾಯ್ಸ್ ಹಾಸ್ಟೆಲ್ ವಿಸ್ತರಣೆ, ದಿವಾನ್ಸ್ ರಸ್ತೆಯ ಲ್ಲಿರುವ ಪಿಜಿ ಗರ್ಲ್ಸ್ ಹಾಸ್ಟೆಲ್ ನವೀಕರಣ, ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಹೊಸ ಒಪಿಡಿ ಬ್ಲಾಕ್ ನಿರ್ಮಾಣ, ಕಣ ್ಣನ ವಿಭಾಗ ವಿಸ್ತರಣೆ, ಪಿಕೆಟಿಬಿ ಆಸ್ಪತ್ರೆ ಕ್ಯಾಂಪಸ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ಗೆ ವೈದ್ಯರು, ಸಿಬ್ಬಂದಿ ನೇಮಕ, ಎಂಡೋಕ್ರೆöÊನಾಲಜಿ ವಿಭಾಗ ಆರಂಭ, ಜೆ.ಕೆ. ಮೈದಾನ ಅಭಿವೃದ್ಧಿ, ಪ್ಲಾಟಿನಂ ಜ್ಯೂಬಿಲಿ ಆಡಿಟೋರಿಯಂ ನವೀಕರಣ, ಸರ್ಜರಿ ವಿಭಾಗ ಪುನರುಜ್ಜೀವನ, ಅನಾಟಮಿ, ಫಿಜಿಯಾಲಜಿ, ಬಯೋ ಕೆಮಿಸ್ಟಿç, ಮೈಕ್ರೋ ಬಯಾಲಜಿ, ಫೋರೆನ್ಸಿಕ್ ಲ್ಯಾಬ್ ಪುನಶ್ಚೇತನ, ಕಾಲೇಜು ಆವರಣದಲ್ಲಿ ಲ್ಯಾಂಡ್ ಸ್ಕೇಪಿಂಗ್, ಉದ್ಯಾನ ಅಭಿವೃದ್ಧಿ, ರೇಡಿಯಾಲಜಿ, ಪೆಥಾಲಜಿ ಬ್ಲಾಕ್ ನವೀಕರಣ, ನ್ಯೂ ಸರ್ಜಿಕಲ್ ಬ್ಲಾಕ್, ಆಡಳಿತ ವಿಭಾಗ, ಚೆಲುವಾಂಬ ಆಸ್ಪತ್ರೆ ವಾರ್ಡ್ ಸೇರಿದಂತೆ ಮೂರೂ ಆಸ್ಪತ್ರೆಗಳ ಎಲ್ಲಾ ವಿಭಾಗಗಳನ್ನು ನವೀಕರಿಸಲು ನಿರ್ಧರಿಸಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಚ್.ಎನ್.ದಿನೇಶ್ ತಿಳಿಸಿದ್ದಾರೆ.

Translate »