ನಾಗಮಂಗಲದಲ್ಲಿ ನಂಗಾನಾಚ್: ಮಹಿಳಾ ದಿನಾಚರಣೆ ವಿಶೇಷ
ಮೈಸೂರು

ನಾಗಮಂಗಲದಲ್ಲಿ ನಂಗಾನಾಚ್: ಮಹಿಳಾ ದಿನಾಚರಣೆ ವಿಶೇಷ

March 10, 2022

ಗ್ರಾಮದೇವತೆ ಹಬ್ಬದ ಹೆಸರಲ್ಲಿ ಯುವತಿಯರಿಂದ ಅರೆಬೆತ್ತಲೆ ನೃತ್ಯ

ಹಾಲಿ, ಮಾಜಿ ಶಾಸಕರ ಬೆಂಬಲಿಗರಿAದ ಒಂದೇ ಗ್ರಾಮದಲ್ಲಿ ಎರಡು ಕಾರ್ಯಕ್ರಮ

ಗ್ರಾಮದೇವತೆ ಹೆಸರಿನಲ್ಲಿ ತಡರಾತ್ರಿವರೆಗೂ ನಡೆದ ಮಾದಕ ನೃತ್ಯ

ಕಾರ್ಯಕ್ರಮ ನೋಡಲಾಗದೇ ಎದ್ದು ಹೋದ ಗ್ರಾಮದ ಮಹಿಳೆಯರು

ಪುರುಷರು, ಮಕ್ಕಳ ಜೊತೆಗೆ ಅಶ್ಲೀಲವಾಗಿ ನಡೆದುಕೊಂಡ ಯುವತಿಯರು

ನಾಗಮಂಗಲದ ತೊಳಸಿಕೊಂಬರಿ ಗ್ರಾಮದೇವರ ಹಬ್ಬದಲ್ಲಿ ಪ್ರಸಂಗ

ಸಾರ್ವಜನಿಕ ವಲಯದಲ್ಲಿ ರಾಜಕೀಯ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶ

ನಾಗಮಂಗಲ,ಮಾ.೯(ಮೋಹನ್‌ರಾಜ್)-ಕಳೆದ ಕೆಲ ವರ್ಷಗಳ ಹಿಂದೆ ನಂಗಾನಾಚ್ ಪ್ರಕರಣದಲ್ಲಿ ರಾಜ್ಯ ವ್ಯಾಪಿ ಸುದ್ದಿ ಮಾಡಿದ್ದ ನಾಗಮಂಗಲ ತಾಲೂಕು, ಇದೀಗ ಮತ್ತೆ ಅಂತಹದ್ದೇ ಅಶ್ಲೀಲ, ಅರೆಬರೆ ಹಾಗೂ ಮಾದಕ ನೃತ್ಯದ ಮೂಲಕ ಸುದ್ದಿಯಾಗಿದೆ. ಅದರಲ್ಲೂ ಗ್ರಾಮ ದೇವತೆ ಹಬ್ಬದ ಹೆಸರಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ದಿನದಂದೇ ಯುವತಿಯರ ಅಶ್ಲೀಲ ನೃತ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮದ ಗ್ರಾಮದೇವತೆ ಮಾರಮ್ಮ ದೇವಿ ಹಬ್ಬದ ಹೆಸರಿನಲ್ಲಿ ರಸ ಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಾಲಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಬೆಂಬಲಿಗರು ಪ್ರತ್ಯೇಕ ಎರಡು ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಕಾರ್ಯ ಕ್ರಮವನ್ನು ಆಯೋಜನೆ ಮಾಡಿದ್ದರು.

ಅಶ್ಲೀಲ ನೃತ್ಯದ ನಡುವೆ ರಾಜಕೀಯ ನಾಯಕರ ಭಾಷಣ: ಗ್ರಾಮದೇವತೆ ಮಾರಮ್ಮ ದೇವಿ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ರಾಜಕೀಯ ನಾಯಕರ ಬೆಂಬಲಿಗರಿಗೆ ಪ್ರತ್ಯೇಕ ಎರಡು ವೇದಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಗ್ರಾಮದ ಗೇಟ್ ಬಳಿ ಶಾಸಕ ಸುರೇಶ್‌ಗೌಡ ಬೆಂಬಲಿಗ ರಿಗೆ ಅವಕಾಶ ನೀಡಿದ್ದರೆ, ಗ್ರಾಮದ ಒಳಭಾಗದ ಮಾರಮ್ಮ ದೇಗುಲದ ಹತ್ತಿರ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಬೆಂಬಲಿಗರ ವೇದಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾರಮ್ಮ ದೇಗುಲದ ಹತ್ತಿರ ಬೆಂಬಲಿಗರು ನಿರ್ಮಿಸಿದ್ದ ವೇದಿಕೆಗೆ ಆಗಮಿಸಿದ ಮಾಜಿ ಶಾಸಕ ಎನ್.ಚಲುವ ರಾಯಸ್ವಾಮಿ ಕೆಲ ಹೊತ್ತು ಇದ್ದು, ನಂತರ ತೆರಳಿದರೆ, ಚಲುವರಾಯಸ್ವಾಮಿ ಪುತ್ರ, ನಟ ಸಚಿನ್, ಚಲುವರಾಯಸ್ವಾಮಿ ಅಣ್ಣನ ಮಗ ಸುನೀಲ್ ವೇದಿಕೆಗೆ ಆಗಮಿಸಿ, ತಮ್ಮ ತಂದೆಯ ಪರವಾಗಿ ಮತ ಪ್ರಚಾರ ಮಾಡಿದರು.

ಸುಮಾರು ೧೦ ಗಂಟೆ ಸಮಯಕ್ಕೆ ಮತ್ತೊಂದು ವೇದಿಕೆ ಬಳಿಗೆ ಆಗಮಿಸಿದ ಶಾಸಕ ಸುರೇಶ್‌ಗೌಡ, ವೇದಿಕೆ ಹಂಚಿಕೊAಡು ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಭಾಷಣ ಮಾಡಿ ಹೊರ ನಡೆದರು.

ರಾಜಕೀಯ ಭಾಷಣ ಮುಗಿದ ಬಳಿಕ ಶುರುವಾದ ನಂಗಾನಾಚ್: ಇಬ್ಬರು ನಾಯಕರು ಗ್ರಾಮದಿಂದ ಹೊರ ಹೋದ ಬಳಿಕ ಎರಡು ವೇದಿಕೆಯಲ್ಲಿ ಯುವತಿಯರ ಅರೆಬರೆ ನೃತ್ಯ ಆರಂಭವಾಯಿತು. ವಿಶ್ವ ಮಹಿಳಾ ದಿನಾಚರಣೆಯಂದೇ ಯುವತಿಯರು ಗ್ರಾಮದೇವತೆ ಹಬ್ಬದ ಹೆಸರಿನಲ್ಲಿ ತಡರಾತ್ರಿ ವರೆಗೂ ಅರೆಬರೆ ಬಟ್ಟೆಗಳಲ್ಲಿ ಮಾದಕ ನೃತ್ಯ ಪ್ರದರ್ಶಿಸಿ ಮಕ್ಕಳು, ಯುವಕರ ಜೊತೆಗೆ ಅಶ್ಲೀಲವಾಗಿ ವರ್ತನೆ ಮಾಡಿದರು. ಇದನ್ನು ಗಮನಿಸಿದ ಗ್ರಾಮದ ಮಹಿಳೆಯರು ಹಿಡಿಶಾಪ ಹಾಕುತ್ತಾ ವೇದಿಕೆಯಿಂದ ಹೊರ ನಡೆದರೆ, ಇತರರು ಎಂಜಾಯ್ ಮಾಡಿದರು. ಸುರೇಶ್‌ಗೌಡ ಬೆಂಬಲಿಗರು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಪಾನಮತ್ತ ವ್ಯಕ್ತಿಯೋರ್ವ ವೇದಿಕೆ ಬಳಿ ಮಾದಕ ನೃತ್ಯವನ್ನು ನೋಡುತ್ತಾ ಕುಣ ಯುತ್ತಿದ್ದರೆ, ಆತನ ಜತೆ ನೃತ್ಯಗಾರ್ತಿಯರು ಅಶ್ಲೀಲವಾಗಿ ವರ್ತಿಸಿದ ದೃಶ್ಯ ಕಂಡು ಬಂತು. ಚಲುವರಾಯಸ್ವಾಮಿ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಕಾಂಗ್ರೆಸ್ ಬಾವುಟವನ್ನು ತಲೆಗೆ ಕಟ್ಟಿಕೊಂಡು ನೃತ್ಯ ಮಾಡುತ್ತಿದ್ದ ದೃಶ್ಯ ಕಂಡುಬAತು. ವೇದಿಕೆಯಲ್ಲಿ ಅರೆಬರೆ ಬಟ್ಟೆ ತೊಟ್ಟು ಹಸಿಬಿಸಿಯಾಗಿ, ಅಶ್ಲೀಲವಾಗಿ ನೃತ್ಯ ಮಾಡಿದ ಡ್ಯಾನ್ಸರ್‌ಗಳು, ವೇದಿಕೆಯಿಂದ ಕೆಳಗಿಳಿದು ಜನರ ಬಳಿ ಬಂದು ಕುಣ ದು, ಮಾದಕತೆ ಪ್ರದರ್ಶಿಸಿದರು. ಅದರಲ್ಲೂ ೧೨ ವರ್ಷದ ಬಾಲಕನೊಬ್ಬನನ್ನು ವೇದಿಕೆ ಮೇಲೆ

ಕರೆದೊಯ್ದು ತಬ್ಬಿ ಮುತ್ತಿಟ್ಟು, ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯ ಅಸಹ್ಯಕರವಾಗಿತ್ತಲ್ಲದೆ, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಯಿತು.
ಕೆಲ ವರ್ಷಗಳ ಬಳಿಕ ಮರುಕಳಿಸಿದ ಅಶ್ಲೀಲ ನೃತ್ಯ: ಕೆಲ ವರ್ಷಗಳ ಹಿಂದೆ ಮಾಜಿ ಶಾಸಕರೊಬ್ಬರು ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದ ಗ್ರಾಮದೇವತೆ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಡ್ಯಾನ್ಸರ್‌ಗಳು ಮಾದಕ ನೃತ್ಯ ಮಾಡುವ ಜೊತೆಗೆ ನಂಗಾನಾಚ್ ನಡೆದಿತ್ತು. ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಇದೀಗ ಅಂತಹದ್ದೇ ಕಾರ್ಯಕ್ರಮವನ್ನು ರಾಜಕೀಯ ಮುಖಂಡರು ನಡೆಸುವ ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

Translate »