ಮೈಸೂರು

ಉದ್ದೇಶಿತ `ರೋಪ್ ವೇ’ ಚಾಮುಂಡಿಬೆಟ್ಟಕ್ಕೆ ಅಪಾಯ

March 10, 2022

ಬೆಟ್ಟ ಉಳಿಸಿ ಹೋರಾಟ ಸಮಿತಿಯಿಂದ ಹೋರಾಟ ನಿರ್ಧಾರ
`ರೋಪ್ ವೇ’ಯಿಂದ ಬೆಟ್ಟದ ಮಣ್ಣು ಮತ್ತಷ್ಟು ಸಡಿಲ

ಈ ಯೋಜನೆಗೆ ಅಗತ್ಯವಿರುವಷ್ಟು ದೊಡ್ಡದಾಗಿಲ್ಲ ಬೆಟ್ಟ

ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು

೫೦ ಸಾವಿರ ಸಹಿ ಸಂಗ್ರಹಕ್ಕೆ ಸಮಿತಿ ನಿರ್ಧಾರ

ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಸಹಕಾರ ಕೋರಿಕೆ

ಮೈಸೂರು, ಮಾ.೯(ಎಂಟಿವೈ)- ಮೈಸೂರು ಭಾಗದ ಪ್ರವಾಸೋ ದ್ಯಮ ಅಭಿವೃದ್ಧಿ ದೃಷ್ಟಿಯಿಂದ ಚಾಮುಂಡಿಬೆಟ್ಟಕ್ಕೆ ನಿರ್ಮಿಸಲು ಉದ್ದೇಶಿಸಿರುವ `ರೋಪ್ ವೇ’ಯಿಂದ ಚಾಮುಂಡಿಬೆಟ್ಟಕ್ಕೆ ಭಾರೀ ಹಾನಿಯಾಗಿ ಅಲ್ಲಿನ ನಿವಾಸಿಗಳು ನಿರಾಶ್ರಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಟ್ಟ ಮತ್ತು ಅಲ್ಲಿನ ನಿವಾಸಿಗಳ ಹಿತ ಕಾಪಾಡುವ ಸಲುವಾಗಿ ವಿವಿಧ ಹಂತದಲ್ಲಿ ಹೋರಾಟ ನಡೆಸಲು ಬೆಟ್ಟ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ.

ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಸಂಬAಧ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದರಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ `ಚಾಮುಂಡಿಬೆಟ್ಟ ಉಳಿಸಿ ಹೋರಾಟ ಸಮಿತಿ’ ಸದಸ್ಯರು ಬುಧವಾರ ಕರ್ಜನ್ ಪಾರ್ಕ್ ಆವರಣದಲ್ಲಿ ತುರ್ತು ಸಭೆ ನಡೆಸಿ, `ರೋಪ್ ವೇ’ ನಿರ್ಮಾಣ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿ ದ್ದಲ್ಲದೆ ಬೆಟ್ಟದ ನಿವಾಸಿಗಳು ಹಾಗೂ ಮೈಸೂರಿನ ಜನರ ಸಹಕಾರ ಪಡೆದು ವಿವಿಧ ಹಂತದಲ್ಲಿ ಹೋರಾಟ ನಡೆಸಲು ನಿರ್ಧರಿಸಿತು. ಸಾಹಿತಿ ಕಾಳೇಗೌಡ ನಾಗವಾರ ಅಧ್ಯಕ್ಷತೆಯಲ್ಲಿ ನಡೆದ ಚಾಮುಂಡಿ ಬೆಟ್ಟ ಉಳಿಸಿ ಹೋರಾಟ ಸಮಿತಿಯಲ್ಲಿ ೫೦ಕ್ಕೂ ಹೆಚ್ಚು ಮಂದಿ ಹಿರಿಯ ಹಾಗೂ ಯುವ ಪರಿಸರವಾದಿಗಳು ಪಾಲ್ಗೊಂಡು ಚಾಮುಂಡಿಬೆಟ್ಟ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊ ಳ್ಳುವುದಾಗಿ ಭರವಸೆ ನೀಡಿದರು.

೫೦ ಸಾವಿರ ಸಹಿ ಸಂಗ್ರಹ: ಚಾಮುಂಡಿಬೆಟ್ಟ ರಕ್ಷಣೆಗಾಗಿ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಚಾಮುಂಡಿಬೆಟ್ಟ ಉಳಿಸಿ ಹೋರಾಟ ಸಮಿತಿ ಆರಂಭಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾ ಗಲೇ ೪೦ ಸಾವಿರ ಮಂದಿ ಸಹಿ ಮಾಡಿರುವ ಮನವಿ ಪತ್ರ ಸಂಗ್ರಹವಾಗಿದೆ. ಇನ್ನೂ ೧೦ ಸಾವಿರಕ್ಕೂ ಹೆಚ್ಚು ಮನವಿ ಪತ್ರ ಪರಿಸರ ಬಳಗದ ಸದಸ್ಯರ ಬಳಿ ಇದೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸದಸ್ಯರ ಬಳಿಯಿರುವ ಮನವಿ ಪತ್ರವನ್ನು ಕಲೆ ಹಾಕಲಾಗುತ್ತದೆ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ಸಾಧ್ಯವಾದಷ್ಟು ಯುವ ಜನರಲ್ಲಿ ಬೆಟ್ಟ ಉಳಿಸಲೇಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಪರಿಸರ ಬಳಗದ ಪರಶುರಾಮೇಗೌಡ ತಿಳಿಸಿದರು.

ಅಷ್ಟೊಂದು ಎತ್ತರವಿಲ್ಲ: ಪರಿಸರ ಬಳಗದ ಸದಸ್ಯೆ ಲೀಲಾ ವೆಂಕಟೇಶ್ ಮಾತನಾಡಿ, ಚಾಮುಂಡಿಬೆಟ್ಟ ರೋಪ್ ವೇ ನಿರ್ಮಾಣ ಮಾಡುವಷ್ಟು ಎತ್ತರವಿಲ್ಲ. ಆದರೂ, ಕೆಲವು ಕಾರಣದಿಂದ ರೋಪ್ ವೇ ನಿರ್ಮಿಸಲು ಸರ್ಕಾರ ಮುಂದಾ ಗಿದೆ. ಇದರಿಂದ ಪ್ರವಾಸೋಧ್ಯಮ ಅಭಿವೃದ್ಧಿ ಹೊಂದು ತ್ತದೆ ಎಂದು ಹೇಳಲಾಗುತ್ತಿದೆ. ನಮಗೆ ಬೆಟ್ಟ ಉಳಿಸುವುದೇ ಪ್ರಮುಖ ಉದ್ದೇಶ. ಪ್ರವಾಸೋಧ್ಯಮ ಅಭಿವೃದ್ಧಿ ಮಾಡಲು ಹಲವು ಸ್ಥಳಗಳಿವೆ. ಅಲ್ಲಿ ಅಭಿವೃದ್ಧಿಗೆ ಮುಂದಾಗಲಿ. ಮೈಸೂರಿನ ಜನತೆ ರೋಪ್ ವೇ ವಿರೋಧಿಸಿ ಬೆಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಗತ್ಯ ದಾಖಲೆ ಕ್ರೋಢೀಕರಿಸಬೇಕು: ರೋಪ್ ವೇ ನಿರ್ಮಾಣ ವಿರೋಧಿಸಿ ಹೋರಾಟ ಮಾಡುವುದರೊಂ ದಿಗೆ ನ್ಯಾಯಾಲಯದ ಮೊರೆ ಹೋಗಬೇಕು. ಅದಕ್ಕೆ ಬೇಕಾದ ಅಗತ್ಯ ದಾಖಲೆ ಕ್ರೋಢೀಕರಿಸಿ ನ್ಯಾಯಾ ಲಯದಲ್ಲಿ ಬೆಟ್ಟದ ರಕ್ಷಣೆಗಾಗಿ ಹೋರಾಟ ಮಾಡಿದರೆ ನ್ಯಾಯ ಸಿಗಬಹುದು ಎಂದು ಗ್ರಾಹಕ ಪರಿಷತ್‌ನ ವೆಂಕಟೇಶ್ ಅಭಿಪ್ರಾಯಪಟ್ಟರು.
ಸ್ಥಳೀಯರಲ್ಲಿ ಭರವಸೆ ಮೂಡಿಸಬೇಕು: ಭುಗತಗಳ್ಳಿ ಜವರಪ್ಪÀ ಮಾತನಾಡಿ, ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ವಾಹನ ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಹಿಂದೆ ಪಾರ್ಕಿಂಗ್ ವ್ಯವಸ್ಥೆಯೇ ಬೇಡ ಎಂದು ಹೋರಾಟ ಮಾಡಿದ್ದೆವು. ಪಾರ್ಕಿಂಗ್‌ಗೆ ಸ್ಥಳವಿಲ್ಲದೇ ಜನರು ವಾಹನಗಳಲ್ಲಿ ಬರುವು ದನ್ನು ನಿಲ್ಲಿಸಲಿ ಎಂಬ ಉದ್ದೇಶ ನಮ್ಮದಾಗಿತ್ತು. ಆ ನಂತರ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ, ವಾಣ ಜ್ಯ ಮಳಿಗೆಗಳ ಕಟ್ಟಡದ ನಿರ್ಮಾಣವನ್ನೂ ವಿರೋಧಿಸಿ ಹೋರಾಟ ಮಾಡಿದ್ದರೂ, ಸರ್ಕಾರ ಆ ಎರಡೂ ಕಟ್ಟಡವನ್ನು ನಿರ್ಮಾಣ ಮಾಡಿತು. ಇದರಿಂದ ಸ್ಥಳೀಯರಲ್ಲಿ ಭ್ರಮನಿರಸನವಾಗಿದೆ. ಬೆಟ್ಟದ ನಿವಾಸಿಗಳು ಹಾಗೂ ಬೆಟ್ಟದ ತಪ್ಪಲಿನ ನಿವಾಸಿ ಗಳಿಗೆ ರೋಪ್ ವೇಯಿಂದಾಗುವ ಅನಾಹುತದ ಬಗ್ಗೆ ವಿವರಿಸಿ, ಅವರಲ್ಲಿ ಭರವಸೆ ಮೂಡಿಸಿ ಬೆಟ್ಟ ಉಳಿಸಿ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಜೀವ ವೈವಿದ್ಯತೆಯ ಬಗ್ಗೆ ಮಾಹಿತಿ ನೀಡಬೇಕು: ವೈಲ್ಡ್ ವಾರ‍್ಸ್ ಸಂಸ್ಥೆಯ ಪಿ.ಕೆ.ಅನಿಲ್ ಕುಮಾರ್ ಮಾತನಾಡಿ, ಬೆಟ್ಟದಲ್ಲಿ ೨೪೬ ಪ್ರಭೇದದ ಪಕ್ಷಿಗಳಿವೆ. ಇದರೊಂದಿಗೆ ಚಿರತೆ, ಮುಳ್ಳಂದಿ, ಕಾಡು ಹಂದಿ, ಸೀವೆಟ್ ಕ್ಯಾಟ್ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ಪ್ರಾಣ ಗಳೂ ಇವೆ. ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಮೈಸೂರಿ ಗರಿಗೂ ಹಾಗೂ ಚಾಮುಂಡಿಬೆಟ್ಟಕ್ಕೂ ಇರುವ ಸಂಬAಧ, ಜವಾಬ್ದಾರಿ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೆ ಹೋರಾಟ ಇನ್ನಷ್ಟು ಗಟ್ಟಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಸಾಮೂಹಿಕ ಹೊಣೆಗಾರಿಕೆ ಯಂತೆ ಹೋರಾಟ ನಡೆಸಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಅನುಕೂಲ ಸಿಂಧು ವ್ಯವಸ್ಥೆ ಇರುತ್ತದೆ. ಆದರೆ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಜಿಲ್ಲಾಡಳಿತ, ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಿಗೂ ವಿವರಿಸಬೇಕು. ಪರಿಸರ ಉಳಿಸುವ ನಿಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ. ಪರಿಸರ ಉಳಿಸುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳ ಬೇಕು ಎಂದರು.

ನಿರ್ಣಯ: ಸಹಿ ಸಂಗ್ರಹ ಮಾಡಿರುವ ಪತ್ರವನ್ನು ಡಿಜಿಟಲ್ ರೂಪದಲ್ಲಿ ಪರಿವರ್ತನೆ ಮಾಡಿ ಅದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಪಾಲಿಕೆ ಸದಸ್ಯರು, ಜಿಲ್ಲಾಡಳಿತ, ಪ್ರವಾಸೋ ದ್ಯಮ ಇಲಾಖೆ ಹಾಗೂ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಯಿತು.

ಬೆಟ್ಟ ಉಳಿಸಿ ಹೋರಾಟದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಅವರ ಸಹಕಾರವನ್ನು ಕೋರುವುದು. ಹೋರಾ ಟದ ರೂಪುರೇಷೆ ಹಾಗೂ ಬೆಳವಣ ಗೆ ಕರಿತು ಜನರಿಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸುವುದು. ಬೆಟ್ಟದ ಮೆಟ್ಟಿಲುಗಳಿಗೆ ರೇಲಿಂಗ್ ಅಳವಡಿಕೆ, ರೋಪ್ ವೇ, ಅನಾವಶ್ಯಕ ಕಟ್ಟಡ, ಬಫರ್ ಝೋನ್ ಇವುಗಳ ಅವಶ್ಯಕತೆ ಇಲ್ಲದಿರುವ ಬಗ್ಗೆ ಜನರಿಗೆ ತಿಳಿಸುವುದು ಸೇರಿದಂತೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಮದ್ರಾಸ್ ಹೈಕೋರ್ಟ್ ಆದೇಶದಂತೆ ಚಾಮರಾಜ ನಗರ ಸತ್ಯಮಂಗಲದ ದಿಂಬA ರಸ್ತೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಪೂರಕ ವಾಗಿ ಚಾಮುಂಡಿಬೆಟ್ಟದ ಸಂರಕ್ಷಣೆಗೆ ನಡೆಸುವ ಹೋರಾಟ ದಲ್ಲಿ ಬಳಸಿಕೊಳ್ಳಬಹುದು. ಬೆಟ್ಟ ಹಾಗೂ ಬೆಟ್ಟದ ತಪ್ಪಲಿನ ನಿವಾಸಿಗಳೊಂದಿಗೆ ಸಂವಾದ ನಡೆಸು ವುದು. ಕಾನೂನು ಹೋರಾಟ ಮಾಡುವುದಕ್ಕೆ ತಜ್ಞ ರೊಂದಿಗೆ ಚರ್ಚಿಸು ವುದು. ಸಾಹಿತಿಗಳು, ಜನಪ್ರತಿನಿಧಿ ಗಳು, ಚಿತ್ರನಟರು, ಕಲಾವಿದರೂ ಒಳಗೊಂಡAತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಬೆಟ್ಟದ ರಕ್ಷಣೆಯ ಹೋರಾಟದ ಬಗ್ಗೆ ಹಾಗೂ ಹೋರಾಟ ಬೆಂಬಲಕ್ಕಾಗಿ ವಿಡಿಯೋ ತುಣುಕು ಮಾಡಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪರಿಸರ ಬಳಗದ ಸದಸ್ಯರಾದ ಕುಸುಮ ಆಲನಹಳ್ಳಿ, ಬಾನು ಮೋಹನ್, ಕಿರಣ್, ಶೈಲಜೇಶ್, ಡಿ.ಪಿ.ಕೆ. ಸುರೇಶ್, ಸಿಕ್ರಂ ಪ್ರಸನ್ನ ಹಾಗೂ ಇನ್ನಿತರರು ಮಾತನಾಡಿದರು.

 

ರಸ್ತೆ ಕುಸಿತ ಎಚ್ಚರಿಕೆ ಸಂದೇಶ
ಪರಿಸರ ಬಳಗದ ಸದಸ್ಯೆ ಲೀಲಾ ಶಿವಕುಮಾರ್ ಮಾತನಾಡಿ, ಕಳೆದ ವರ್ಷ ಚಾಮುಂಡಿಬೆಟ್ಟದ ನಂದಿ ರಸ್ತೆಯಲ್ಲಿ ೪-೫ ಬಾರಿ ಭೂ ಕುಸಿತ ಸಂಭವಿಸಿ ರುವುದು ನಮಗೆ ಎಚ್ಚರಿಕೆ ಸಂದೇಶ. ಬೆಟ್ಟದ ಮಣ್ಣು ಸಡಿಲಗೊಂಡಿರುವುದೇ ಕುಸಿತಕ್ಕೆ ಕಾರಣ ಎಂದು ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಆದರೂ ಎಚ್ಚೆತ್ತು ಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಟ್ಟಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿ ಜನರು ಪಶ್ಚಾತಾಪ ಪಡುವಂತಹ ದುಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಯಿದೆ. ರೋಪ್ ವೇ ನಿರ್ಮಾಣಕ್ಕಾಗಿ ಪಿಲ್ಲರ್ ನಿರ್ಮಿಸಲು ಬೆಟ್ಟವನ್ನು ಅಗೆಯುವುದರಿಂದ ಮತ್ತೆ ಬೆಟ್ಟವನ್ನು ನಾವೇ ಸಡಿಲಗೊಳ್ಳುವಂತೆ ಮಾಡುವ ಮೂಲಕ ಅಪಾಯ ತಂದೊಡ್ಡಲು ಮುಂದಾಗು ತ್ತಿದ್ದೇವೆ ಎಂದು ವಿಷಾದಿಸಿದರು.

 

ಸಾಮಾಜಿಕ ಜಾಲತಾಣಗಳಲ್ಲೂ ಅರಿವು ಮೂಡಿಸಬೇಕು
ಉರಗ ಸಂರಕ್ಷಕ ಪ್ರದೀಪ್ ಮಾತನಾಡಿ, ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶ. ಅಲ್ಲಿರುವ ಜೀವ ವೈದ್ಯತೆಯ ಬಗ್ಗೆ ಅರಣ್ಯ ಇಲಾಖೆಗೆ ನಿಖರ ಮಾಹಿತಿ ಇದೆ. ಅರಣ್ಯ ಇಲಾಖೆ ಮನಸ್ಸು ಮಾಡಿದರೆ, ಚಾಮುಂಡಿಬೆಟ್ಟದ ಅರಣ್ಯ ಪ್ರದೇಶವನ್ನು ಉಳಿಸಲು ಕಷ್ಟವಾಗುವುದಿಲ್ಲ. ರೋಪ್ ವೇ ನಿರ್ಮಾಣಕ್ಕೆ ಅವಕಾಶ ನೀಡದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಇದರೊಂದಿಗೆ ರೋಪ್ ವೇ ನಿರ್ಮಾಣದಿಂದಾಗುವ ಅಪಾಯ, ಅನಾನೂಕೂಲದ ಬಗ್ಗೆ ಜನರಿಗೆ ಮಾಹಿತಿ ನೀಡುವುದರೊಂದಿಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.

Translate »