ನ್ಯಾಟೋ ನಂಬಿ ಕೆಟ್ಟ ಝೆಲೆನ್ಸ್ಕಿ: ಸಂಧಾನಕ್ಕೆ ಸಜ್ಜಾಗುತ್ತಿದೆ ವೇದಿಕೆ
ಮೈಸೂರು

ನ್ಯಾಟೋ ನಂಬಿ ಕೆಟ್ಟ ಝೆಲೆನ್ಸ್ಕಿ: ಸಂಧಾನಕ್ಕೆ ಸಜ್ಜಾಗುತ್ತಿದೆ ವೇದಿಕೆ

March 10, 2022

ರಷ್ಯಾದ ನಾಲ್ಕು ಷರತ್ತಿನಲ್ಲಿ ಎರಡಕ್ಕೆ ಒಪ್ಪಿಗೆ

ನ್ಯಾಟೋ ಸೇರ್ಪಡೆ ಪ್ರಯತ್ನ ಕೈಬಿಟ್ಟ ಉಕ್ರೇನ್

ಸರ್ವನಾಶದ ನಂತರ ಉಕ್ರೇನ್‌ಗೆ ಜ್ಞಾನೋದಯ

ಕೀವ್, ಮಾ.೯-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಉಭಯ ರಾಷ್ಟçಗಳೂ ಮಹತ್ವದ ಹೆಜ್ಜೆ ಇಟ್ಟಿದ್ದು, ಸಂಧಾನಕ್ಕೆ ವೇದಿಕೆ ಕಲ್ಪಿಸಲು ಪೂರಕವಾಗು ವಂತಹ ವಾತಾವರಣ ನಿರ್ಮಾಣ ಮಾಡಲು ಮುಂದಾಗಿವೆ.

ರಷ್ಯಾ ಪಡೆಗಳು ಇಂದು ಉಕ್ರೇನ್‌ನ ಹಲವಾರು ಪ್ರದೇಶ ಗಳಲ್ಲಿ ಕದನ ವಿರಾಮ ಘೋಷಿಸಿದ್ದರೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಅವರು, ರಷ್ಯಾದ ೪ ಷರತ್ತುಗಳ ಪೈಕಿ ಎರಡಕ್ಕೆ ಒಪ್ಪಿ ಕೊಳ್ಳುವ ಮಾತನಾಡಿದ್ದಾರೆ. ಉಕ್ರೇನ್ ಮೇಲೆ ೧೪ನೇ ದಿನವಾದ ಬುಧವಾರ ರಷ್ಯಾ ಪಡೆಗಳು ಭೀಕರ ದಾಳಿ ನಡೆಸಿದ್ದು, ರಾಜ ಧಾನಿ ಕೀವ್ ಅನ್ನು ೬ ಕಡೆಗಳಿಂದ ಸುತ್ತುವರೆದು ರಾಜಧಾನಿ ಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿದೆ. ಉಕ್ರೇನ್ ಸೈನಿಕರು ಮತ್ತು ನಾಗರಿಕರು ರಷ್ಯಾಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಈ ಹಂತದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಅವರು, ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ರಷ್ಯಾದ ಷರತ್ತು ಗಳನ್ನು ಒಪ್ಪಿಕೊಳ್ಳುವ ಮಾತುಗಳನ್ನಾಡಿದ್ದಾರೆ.

ನ್ಯಾಟೋಗೆ ಸೇರ್ಪಡೆಗೊಳ್ಳಲು ಉಕ್ರೇನ್ ಪ್ರಯತ್ನಿಸಿದ್ದೇ ರಷ್ಯಾ ಯುದ್ಧ ಸಾರಲು ಪ್ರಮುಖ ಕಾರಣವಾಗಿತ್ತು. ಯುದ್ಧ ಆರಂಭ ವಾದ ನಂತರ ಝೆಲೆನ್ಸಿ÷್ಕ ವೀರಾವೇಶವಾಗಿ ಹೋರಾಟ ಮಾಡುತ್ತಿದ್ದರಾದರೂ, ಅವರಿಗೆ ನ್ಯಾಟೋ ದೇಶಗಳು ನಿರೀಕ್ಷಿತ ಬೆಂಬಲ ನೀಡಿಲ್ಲ. ಅವರ ಪ್ರಮುಖವಾದ ಮನವಿಗಳನ್ನು ಈಡೇರಿಸಲು ಮುಂದಾಗಿಲ್ಲ. ಮತ್ತೊಂದೆಡೆ ರಷ್ಯಾ ರಣಭೀಕರ ದಾಳಿಗಳನ್ನು ನಡೆಸಿ ಉಕ್ರೇನ್‌ನ ಪ್ರಮುಖ ನಗರಗಳನ್ನು ಸ್ಮಶಾನದಂತೆ ಮಾಡಿದೆ.

ಹೀಗಾಗಿ ರಷ್ಯಾ ಷರತ್ತುಗಳಿಗೆ ಒಪ್ಪಿ ಯುದ್ಧ ಕೊನೆಗಾಣ ಸ ಬೇಕು ಎಂಬ ನಿರ್ಧಾರಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಮುಂದಾ ದಂತೆ ಕಾಣುತ್ತಿದೆ. ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ನು ಮುಂದೆ ನಾನು ಯಾರ ಮುಂದೆಯೂ ಮಂಡಿಯೂರಲ್ಲ ಎಂದಿದ್ದಾರೆ. ಉಕ್ರೇನ್‌ಗೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧತೆ ಮಾಡಿಕೊಂಡಿರಲಿಲ್ಲ. ಸದಸ್ಯತ್ವ ಕೊಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿತ್ತು. ನ್ಯಾಟೋ ಒಕ್ಕೂ ಟಕ್ಕೆ ರಷ್ಯಾ ವಿರುದ್ಧ ಹೋರಾಡಲು ಹಾಗೂ ಆ ದೇಶವನ್ನು ಎದುರು ಹಾಕಿಕೊಳ್ಳಲು ಭಯ ಎಂದು ಝೆಲೆನ್ಸಿ÷್ಕ ಹೇಳಿದ್ದಾರೆ.

ನಾನು ಒಂದು ದೇಶದ ಅಧ್ಯಕ್ಷನಾಗಿ ಯಾವುದೇ ವಿಚಾರಕ್ಕೂ ಇನ್ನೊಬ್ಬರ ಎದುರು ಮೊಣಕಾಲೂರಿ ಕುಳಿತು ಬೇಡಿಕೊಳ್ಳಲಾರೆ ಎಂದಿರುವ ಅವರು, ರಷ್ಯಾ ಪರವಾಗಿರುವ ಪೂರ್ವ ಉಕ್ರೇನ್‌ನ ಡೊನೆಟ್ಸ್÷್ಕ ಮತ್ತು ಲುಗಾನ್ಸ್÷್ಕ ಬಗ್ಗೆ ಸಂಧಾನ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಎರಡೂ ಪ್ರದೇಶಗಳೂ ಉಕ್ರೇನ್‌ನಲ್ಲೇ ಇದ್ದರೂ ಕೂಡ ಅಲ್ಲಿರುವ ಬಂಡುಕೋರರು ರಷ್ಯಾ ಪರವಾಗಿದ್ದಾರೆ. ಅವರು ೨೦೧೪ರಿಂದಲೂ ಕೀವ್ ವಿರುದ್ಧ ಬಡಿದಾಡಿಕೊಂಡು ಬಂದಿದ್ದಾರೆ. ಫೆಬ್ರವರಿ ೨೪ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೊಷಿಸುವ ಮುನ್ನ ಎರಡೂ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ರಷ್ಯಾ ಘೋಷಿಸಿತ್ತು ಎಂದಿರುವ ಝೆಲೆನ್ಸಿ÷್ಕ, ಈ ಪ್ರದೇಶಗಳ ಕುರಿತಂತೆ ರಷ್ಯಾ ಜೊತೆ ಹೊಂದಾಣ ಕೆ ಮಾಡಿಕೊಳ್ಳಲು ಸಿದ್ಧನಿದ್ದೇನೆ ತಿಳಿಸಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಲು ಹಲವು ಕಾರಣಗಳಿರಬಹುದು. ಆದರೆ ನ್ಯಾಟೋ ಸದಸ್ಯತ್ವ ಪಡೆಯಲು ಉಕ್ರೇನ್ ಮುಂದಾಗಿದ್ದೇ ಯುದ್ಧಕ್ಕೆ ಬಹು ಮುಖ್ಯ ಕಾರಣ. ಹೀಗಾಗಿ ಪುಟ್ಟ ರಾಷ್ಟç ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿತು. ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿದ್ದಂತೆಯೇ ನಾನು ಬಹಿರಂಗವಾಗಿ ಸಹಾಯ ಕೇಳಿದರೂ ನ್ಯಾಟೋ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಝೆಲೆನ್ಸಿ÷್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೋಲೆಂಡ್‌ಗೆ ತಾವು ಪಲಾಯನ ಮಾಡಿರುವುದಾಗಿ ರಷ್ಯಾ ಹೇಳಿರುವುದನ್ನು ನಿರಾಕರಿಸಿದ ಅವರು, ಕೀವ್‌ನಲ್ಲಿರುವ ಅಧಿಕೃತ ಕಚೇರಿಯಲ್ಲೇ ತಾವು ಇರುವುದಾಗಿ ಹೇಳಿಕೊಂಡರ ಲ್ಲದೇ, ಇನ್ಸಾ÷್ಟçಗ್ರಾಮ್‌ನಲ್ಲಿ ಲೊಕೇಷನ್ ಷೇರ್ ಮಾಡಿದ್ದಾರೆ. ಮುಂದುವರೆದು ಮಾತನಾಡಿ ರುವ ಅವರು, ರಷ್ಯಾದ ಆಕ್ರಮಣವು ಕೇವಲ ಉಕ್ರೇನ್‌ನೊಂದಿಗೆ ಕೊನೆಗೊಳ್ಳುವುದಿಲ್ಲ. ವಿಶ್ವದ ಇತರ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ದಿನದಿಂದ ದಿನಕ್ಕೆ ಪ್ರಪಂಚದ ಇತರ ದೇಶಗಳ ಮೇಲೆ ದಾಳಿ ಮಾಡಲು ರಷ್ಯಾ ತಯಾರಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ರಷ್ಯಾದ ನಾಲ್ಕು ಷರತ್ತು
ಮಾಸ್ಕೋ, ಮಾ.೯-ಉಕ್ರೇನ್ ವಿರುದ್ಧ ತಾನು ಸಾರಿರುವ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ಪುಟಿನ್ ೪ ಷರತ್ತುಗಳನ್ನು ವಿಧಿಸಿದ್ದಾರೆ. ತನ್ನ ಷರತ್ತುಗಳನ್ನು ಉಕ್ರೇನ್ ಒಪ್ಪಿಕೊಂಡರೆ ಆ ಕ್ಷಣದಿಂದಲೇ ಒಂದು ಗುಂಡನ್ನೂ ಕೂಡ ಉಕ್ರೇನ್ ನೆಲದಲ್ಲಿ ಹಾರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲು ಉಕ್ರೇನ್ ತಾನು ನಡೆಸುತ್ತಿರುವ ಮಿಲಿಟರಿ ಕಾರ್ಯಾ ಚರಣೆಯನ್ನು ನಿಲ್ಲಿಸಬೇಕು ಎಂಬುದು ಮೊದಲನೇ ಷರತ್ತಾದರೆ, ಯಾವುದೇ ಬಣಕ್ಕೆ ಅಥವಾ ಸಂಘಟನೆಗೆ ಸೇರದಂತೆ ತಟಸ್ಥ ರಾಷ್ಟçವಾಗಿರಲು ಉಕ್ರೇನ್ ಸಂವಿಧಾನವನ್ನು ಬದಲಾಯಿಸಬೇಕು ಎಂಬುದು ೨ನೇ ಷರತ್ತು. ಕ್ರಿಮಿಯಾವನ್ನು ರಷ್ಯಾದ ಭಾಗ ಎಂದು ಒಪ್ಪಿಕೊಳ್ಳಬೇಕು ಎಂಬುದು ೩ನೇ ಷರತ್ತಾದರೆ, ಉಕ್ರೇನ್‌ನ ಡೊನೆಟ್ಸ್÷್ಕ ಮತ್ತು ಲುಗಾನ್ಸ್÷್ಕ ಪ್ರದೇಶಗಳನ್ನು ಸ್ವತಂತ್ರ ರಾಷ್ಟçಗಳೆಂದು ಒಪ್ಪಬೇಕು ಎಂಬುದು ೪ನೇ ಷರತ್ತಾಗಿದೆ.

 

 

 

Translate »