ಮಗನಾಗಿ ಮಮತೆಯ ಮಾತೆಯ ಅಂತಿಮ ವಿಧಿವಿಧಾನ ನೆರವೇರಿಸಿದ ಪ್ರಧಾನಿ ಮೋದಿ
News

ಮಗನಾಗಿ ಮಮತೆಯ ಮಾತೆಯ ಅಂತಿಮ ವಿಧಿವಿಧಾನ ನೆರವೇರಿಸಿದ ಪ್ರಧಾನಿ ಮೋದಿ

December 31, 2022

ಅಹಮದಾಬಾದ್, ಡಿ.30-`ನಾಡಿಗೆ ದೊರೆಯಾ ದರೂ ಹೆತ್ತ ತಾಯಿಗೆ ಕಂದನೇ’ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕರುಳಬಳ್ಳಿಯ ಅಂತಿಮ ಯಾತ್ರೆಯಲ್ಲಿ ಕಂಡುಬಂದರು.

ದೇವರಂತೆ ಆರಾಧಿಸುತ್ತಿದ್ದ ತಾಯಿ ಇನ್ನಿಲ್ಲವಾದ ರೆಂಬ ಸುದ್ದಿ ತಿಳಿದು ಅಹಮದಾಬಾದ್‍ಗೆ ದೌಡಾ ಯಿಸಿದ ಅವರು ಸುಮಾರು ಮೂರೂವರೆ ಗಂಟೆಗಳ ಕಾಲ ಎಲ್ಲವನ್ನೂ ಮರೆತು ಪಾರ್ಥಿವ ಶರೀರದ ಬಳಿಯೇ ಇದ್ದರು. ಮೋದಿಯವರ ತಾಯಿ ಶತಾ ಯುಷಿ ಹೀರಾಬೆನ್ ಅವರು ಶುಕ್ರವಾರ ಮುಂಜಾನೆ 3.39ರಲ್ಲಿ ಇಹಲೋಕ ತ್ಯಜಿಸಿದರು. ಅವರ ಪಾರ್ಥಿವ ಶರೀರವನ್ನು ಅಹಮದಾಬಾದ್‍ನ ಯು.ಎನ್.ಮೆಹ್ತಾ ಆಸ್ಪತ್ರೆಯಿಂದ ಮೋದಿ ಸಹೋದರ ಪ್ರಹ್ಲಾದ್ ಮೋದಿ ಯವರ ನಿವಾಸಕ್ಕೆ ತರಲಾಯಿತು. ತಾಯಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಹಮದಾಬಾದ್‍ಗೆ ಆಗಮಿಸಿದ ಪ್ರಧಾನಿ ಮೋದಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಅಂತಿಮ ವಿಧಿ-ವಿಧಾನಗಳನ್ನು ಓರ್ವ ಮಗನಾಗಿ ನಿರ್ವಹಿಸಿದರು. ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರ ಯಾತ್ರೆಗೆ ಹೆಗಲು ಕೊಟ್ಟು ಸಾಗಿದರು. ಪಾರ್ಥಿವ ಶರೀರವನ್ನು ರುದ್ರಭೂಮಿಗೆ ಕೊಂಡೊಯ್ದ ವಾಹನದಲ್ಲೇ ತಾವೂ ಪ್ರಯಾಣಿಸಿ ದರು. ಅಹಮದಾಬಾದ್‍ನ ಸೆಕ್ಟರ್-30ರ ರುದ್ರಭೂಮಿ ಯಲ್ಲಿ ತಾಯಿ ಹೀರಾಬೆನ್ ಅವರ ಅಂತಿಮ ವಿಧಿ-ವಿಧಾನಗಳನ್ನು ಸಹೋದರರೊಡಗೂಡಿ ನೆರವೇರಿಸಿ, ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಹೀರಾಬೆನ್ ಅವರು ದೇಶದ ಪ್ರಧಾನಿಯ ತಾಯಿಯಾದರೂ, ಅವರ ಅಂತಿಮ ವಿಧಿ-ವಿಧಾನಗಳು ಸರಳವಾಗಿ ಕೇವಲ ಮೂರೂವರೆ ಗಂಟೆಗಳ ಅವಧಿಯಲ್ಲಿ ಸನಾತನ ಹಿಂದೂ ಧರ್ಮದ ವಿಧಿ-ವಿಧಾನದಂತೆ ನೆರವೇರಿತು. ಮೋದಿಯವರ ತಾಯಿಯ ಅಗಲಿಕೆ ಸುದ್ದಿ ಹರಡು ವಷ್ಟರಲ್ಲಿ ಅವರ ಅಂತ್ಯಕ್ರಿಯೆ ಮುಗಿದಿತ್ತು. ಅಂತಿಮ ದರ್ಶನಕ್ಕಾಗಿ ಹೆಚ್ಚಿನ ಗಣ್ಯರು ಆಗಮಿಸಲು ಪ್ರಧಾನಿ ಮೋದಿ ಆಸ್ಪದ ನೀಡಲಿಲ್ಲ.

ಸಾಮಾನ್ಯರಂತೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಅಂತಿಮ ಸಂಸ್ಕಾರ ನೆರವೇರಿತು. ತಮ್ಮ ತಾಯಿಯ ನಿಧನದ ಕಾರಣದಿಂದ ಸರ್ಕಾರದ ಯಾವುದೇ ಕಾರ್ಯಕ್ರಮ ನಿಲ್ಲಬಾರದು. ಎಲ್ಲವೂ ಯಥಾಸ್ಥಿತಿಯಲ್ಲಿ ನಡೆಯಬೇಕು ಎಂದು ಮೋದಿ ತಿಳಿಸಿದ್ದ ರೆಂದು ರಾಜಾನಾಥ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀರಾಬೆನ್ ಅವರು ಪ್ರಧಾನಿ ಮೋದಿ ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದು, ದೇಶ-ವಿದೇಶದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಹೀರಾಬೆನ್ ಓರ್ವ ಆದರ್ಶ ತಾಯಿಯಾಗಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮೋದಿ ಮಾಡುತ್ತಿದ್ದ ಕೆಲಸದ ಹಿಂದೆ ತಾಯಿಯ ಮಾರ್ಗದರ್ಶನ ಇದ್ದೇ ಇತ್ತು. ಪರಿಶ್ರಮವೇ ಜೀವನದ ಮಂತ್ರ ಎಂದು ಮಗನಿಗೆ ಕಿವಿಮಾತು ಹೇಳುತ್ತಿದ್ದರು. ಪ್ರಾಮಾಣಿಕತೆ ಮತ್ತು ಸ್ವಾಭಿಮಾನದ ಜೊತೆಗೆ ನಿರಂತರ ಪರಿಶ್ರಮ ಇರಬೇಕೆಂದು ಸಲಹೆ ನೀಡುತ್ತಿದ್ದರು. ಪ್ರಭಾವಿ ನಾಯಕನಾಗಿದ್ದರೂ ತಾಯಿಯ ಬಳಿ ಮಗುವಾಗಿಬಿಡುತ್ತಿದ್ದರು. ನನ್ನ ಯಶಸ್ಸಿನ ಹಿಂದೆ ತಾಯಿ ಇದ್ದಾರೆ ಎಂದು ಮೋದಿ ಆಗಿಂದಾಗ್ಗೆ ಹೇಳುತ್ತಿದ್ದರು.

Translate »