ಪ್ರಧಾನಮಂತ್ರಿ ಮೋದಿಯವರ ನಿರ್ಧಾರಗಳು ವಿಶ್ವಕ್ಕೇ ಮಾದರಿ
ಮೈಸೂರು

ಪ್ರಧಾನಮಂತ್ರಿ ಮೋದಿಯವರ ನಿರ್ಧಾರಗಳು ವಿಶ್ವಕ್ಕೇ ಮಾದರಿ

June 9, 2020

ಮೈಸೂರು, ಜೂ.8- ಕೊರೊನಾ ಎಂಬ ವೈರಸ್‍ನಿಂದ ದೇಶವನ್ನು ರಕ್ಷಿ ಸಲು ಹೆಮ್ಮೆಯ ಪ್ರಧಾನಮಂತ್ರಿ ಅವರು ತೆಗೆದುಕೊಂಡ ನಿರ್ಧಾರಗಳು ಇತರೆ ದೇಶಗಳಿಗೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮಾತೃಮಂಡಳಿ ಸರ್ಕಲ್ ಹತ್ತಿರ ಸೋಮ ವಾರ ಮಧ್ಯಾಹ್ನ ಹೆಮ್ಮೆಯ ಪ್ರಧಾನ ಮಂತ್ರಿಗಳ ಒಂದು ವರ್ಷಗಳ ಸಾಧನೆಯ ಮಾಹಿತಿಯನ್ನು ಚಾಮರಾಜ ಕ್ಷೇತ್ರದಲ್ಲಿ ಮನೆಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ನರೇಂದ್ರ ಮೋದಿ ಯವರ ಸಾಧನೆಯ ಕರಪತ್ರಗಳನ್ನು ಚಾಮ ರಾಜ ಕ್ಷೇತ್ರದಲ್ಲಿ ಎಲ್ಲಾ ಮನೆಗೆ ತಲುಪಿಸಿ ಪ್ರಧಾನಮಂತ್ರಿಯ ಸಾಧನೆಯನ್ನು ಎಲ್ಲ ರಿಗೂ ಪರಿಚಯಿಸಬೇಕು ಎಂದರು.

ಮೋದಿಯವರು ಕಳೆದ 5 ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಯನ್ನು ನೆನಪಿಸಿಕೊಂಡು ದೇಶದ ಜನತೆ ಮೋದಿ ಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ದ್ದಾರೆ. ಪ್ರಧಾನಮಂತ್ರಿಯವರು ದೇಶದ ರಕ್ಷಣೆಗಾಗಿ ಇಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅಲ್ಲದೇ ಕೋವಿಡ್-19 ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಇದು ಅನೇಕ ಕಾರ್ಮಿ ಕರಿಗೆ, ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ಮನ್ರೇಗಾ ಯೋಜನೆಯಡಿಯಲ್ಲಿ ಬರುವ ಕೆಲಸ ವನ್ನು 100 ದಿನದಿಂದ 150 ದಿನಗಳವರೆಗೆ ಏರಿಕೆ ಮಾಡಿದ್ದಾರೆ. ರೈತರು ಬೆಳೆದ ಬೆಳೆ ಗಳಿಗೆ ಉಪಯುಕ್ತವಾದ ಬೆಲೆ ಸಿಗುವಂತೆ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಅದೇಶದ ಮೇರೆಗೆ ಕರ್ನಾಟಕದಲ್ಲಿ ಕಂಡುಬರುವ ಎಲ್ಲಾ ಧಾರ್ಮಿಕ ದೇವಾಲಯಗಳನ್ನು ತೆರೆಯ ಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯಬೇಕು ಎಂದು ಮನವಿ ಮಾಡಿ ಕೊಂಡರು.

ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಪ್ರಧಾನಮಂತ್ರಿ ಯವರು ತಾವೇ ಬರೆದ ಸಾಧನೆಯ ಮಾಹಿತಿಯ ಕರಪತ್ರಗಳನ್ನು ಇಂದು ದೇಶಾ ದ್ಯಂತ ಮನೆಮನೆಗೆ ಹಂಚುತ್ತಿದ್ದು, ಅದೇ ರೀತಿ ಇಂದು ನಮ್ಮ ಕ್ಷೇತ್ರದಲ್ಲಿ ಸಚಿವರ ಮುಖಾಂತರ ಕರಪತ್ರಗಳನ್ನು ಹಂಚು ವುದು ತುಂಬಾ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂವಿಧಾನದ ವಿಧಿ 370 ರಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿ ಸಿದ್ದು, ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ರಾಮಮಂದಿರ ನಿರ್ಮಾಣದ ವಿಚಾರ ದಲ್ಲಿ ಪ್ರಧಾನಮಂತ್ರಿಯವರ ಹೋರಾಟಕ್ಕೆ ಯಶಸ್ಸು ಲಭಿಸಿದೆ. ಲಾಕ್‍ಡೌನ್ ಸಮಯ ದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಅದೇಶವನ್ನು ನೀಡುತ್ತಿದ್ದರು. ಇದು ಇಂದು ಕೊರೊನಾ ತಡೆಗಟ್ಟಲು ಸಾಧ್ಯ ವಾಯಿತು ಎಂದು ಹೇಳಿದರು.

Translate »