ಹುಳುಗಳ ಪಾಲಾಗುತ್ತಿರುವ ಹಾಸ್ಟೆಲ್ ಅಕ್ಕಿ, ಬೇಳೆಕಾಳು
ಮೈಸೂರು

ಹುಳುಗಳ ಪಾಲಾಗುತ್ತಿರುವ ಹಾಸ್ಟೆಲ್ ಅಕ್ಕಿ, ಬೇಳೆಕಾಳು

June 9, 2020

ಮೈಸೂರು, ಜೂ.8(ಆರ್‍ಕೆಬಿ)- ತಾಲೂಕಿನ ಹಾಸ್ಟೆಲ್‍ಗಳಲ್ಲಿ ಉಳಿದಿರುವ ಅಕ್ಕಿ, ಬೇಳೆಕಾಳುಗಳು ಹುಳುಗಳ ಪಾಲಾ ಗುತ್ತಿರುವ ಬಗ್ಗೆ ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಮೈಸೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಶ್ರೀರಾಂಪುರ ಕ್ಷೇತ್ರದ ಸದಸ್ಯ ಹನು ಮಂತು ಈ ಕುರಿತು ಸಭೆಯಲ್ಲಿ ಪ್ರಸ್ತಾ ಪಿಸಿದಾಗ ಲಾಕ್‍ಡೌನ್ ಸಂದರ್ಭದಲ್ಲಿ ಹುಳುಗಳ ಪಾಲಾಗುತ್ತಿರುವ ಆಹಾರ ಪದಾರ್ಥಗಳ ಮಾಹಿತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಬಿಸಿಎಂ ಅಧಿಕಾರಿ ಸುಜೇಂದ್ರಕುಮಾರ್, ಅಕ್ಕಿ, ಗೋಧಿ ಜಿಲ್ಲಾ ಡಳಿತಕ್ಕೆ ಒಪ್ಪಿಸಿದ್ದೇವೆ. ಕಾಳು, ಎಣ್ಣೆ ಇದೆ ಎಂದರು. ಜಿಲ್ಲಾಡಳಿತ ಮಾಹಿತಿ ಕೇಳಿ ದ್ದಾರೆ, ಕೊಟ್ಟಿದ್ದೇನೆ ಎಂದರು.

ಹುಳು ಬಂದು ಹಾಳಾಗಲು, ಈ ನಷ್ಟಕ್ಕೆ ಕಾರಣ ಯಾರು ಎಂದು ಸದಸ್ಯರು ಕೇಳುತ್ತಿ ದ್ದಾರೆ. ಮಾಹಿತಿ ನೀಡುವಂತೆ ಇಓ ಕೃಷ್ಣ ಕುಮಾರ್, ಬಿಸಿಎಂ ಅಧಿಕಾರಿಗೆ ಸೂಚಿಸಿ ದರು. ಇದಕ್ಕೆ ಉತ್ತರಿಸಿದ ಬಿಸಿಎಂ ಅಧಿ ಕಾರಿ, ಬೇಳೆಕಾಳುಗಳ ವಿವರ ನೀಡಿದರು.

ಇದಕ್ಕೆ ತೃಪ್ತರಾಗದ ಸದಸ್ಯ ಹನು ಮಂತು, ಈ ಪದಾರ್ಥಗಳು 2 ತಿಂಗಳಿಂ ದಲೂ ಹಾಸ್ಟೆಲ್‍ನಲ್ಲಿಯೇ ಹುಳು ತಿನ್ನುತ್ತಾ ಬಿದ್ದಿವೆ. ಇದನ್ನು ತಾಲೂಕಿನ ಬಡವರಿಗೆ ಹಂಚಿಕೆ ಮಾಡಬಾರದೇಕೆ? ಎಂಬ ಸಲಹೆ ನೀಡಿದರು. ಯಾವ ಭಾಗಕ್ಕೆ ಅದನ್ನು ಹಂಚೋಣ ಎಂಬ ಬಗ್ಗೆ ಸಭೆ ಚರ್ಚಿಸಿ ನಿರ್ಧರಿಸುವಂತೆ ಇಓ ತಿಳಿಸಿದರು. ಇದನ್ನು ನಾವೇ ನಮ್ಮ ತಾಲೂಕಿನ ನಿರ್ಗತಿಕರಿಗೆ ನೀಡಲು ಬಳಸಿಕೊಳ್ಳುವುದು ಸೂಕ್ತ ಎಂದು ಸದಸ್ಯರು ನೀಡಿದ ಸಲಹೆಯಂತೆ ನಿರ್ಣ ಯಿಸಲಾಯಿತು. ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಎನ್.ಬಿ.ಮಂಜು, ಸ್ಥಾಯಿ ಸಮಿತಿಯ ಶಂಕರ್ ಇನ್ನಿತರರಿದ್ದರು.

ಮಕ್ಕಳ ಹಿತದೃಷ್ಟಿಯಿಂದ ಈ ವರ್ಷ ಶಾಲೆ ಬೇಡ: ಸದಸ್ಯರ ಒತ್ತಾಯ
ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಪಾಸ್ ಮಾಡಿದ್ದೀರಿ. ಅದೇ ರೀತಿ ಈ ವರ್ಷವೂ ತರಗತಿಗಳಿಲ್ಲ ದಿದ್ದರೆ ಬೇಡ, ಎಲ್ಲ ಮಕ್ಕಳಿಗೂ ಪಾಸ್ ಮಾಡಿ. ಕೊರೊನಾ ಇರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಈ ಬಾರಿ ಶಾಲೆ ನಡೆಸುವುದು ಬೇಡ ಎಂದು ಸರ್ಕಾರಕ್ಕೆ ಬರೆಯುವಂತೆ ಕೂರ್ಗಳ್ಳಿ ಕ್ಷೇತ್ರದ ಸದಸ್ಯೆ ರಾಣಿ ಸತೀಶ್ ಸಲಹೆ ನೀಡಿದರು. ಈ ಸಲಹೆಗೆ ಸದಸ್ಯರು ದನಿ ಗೂಡಿಸಿದ ಬಳಿಕ ಇಓ ಕೃಷ್ಣಕುಮಾರ್ ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಹಾಲಿನ ದರದಲ್ಲಿ ರೈತರಿಗೆ ಅನ್ಯಾಯ: ಕೊರೊನಾ ಲಾಕ್ ಡೌನ್‍ಗೂ ಮುನ್ನ ಹಾಲು ಉತ್ಪಾದಕರಿಗೆ 30 ರೂ. ಜೊತೆಗೆ 5 ರೂ. ಪ್ರೋತ್ಸಾಹ ಧನ ಸೇರಿ 35.50 ನೀಡುತ್ತಿದ್ದ ಸರ್ಕಾರ, ಏಪ್ರಿಲ್ ತಿಂಗಳ ಆರಂಭದಲ್ಲಿ 27.50 ರೂ. ಜೊತೆಗೆ 5 ರೂ. ಪ್ರೋತ್ಸಾಹ ಧನ ಸೇರಿ 32.50 ರೂ. ನೀಡಿತು. ಮತ್ತೆ ಮೇ 16ರಂದು ರೈತರಿಗೆ ನೀಡುವ ಹಾಲಿನ ದರವನ್ನು 26.50ಗೆ ಇಳಿಸಿ, ಪ್ರೋತ್ಸಾಹ ಧನ 5 ರೂ. ಸೇರಿಸಿ 31.50 ರೂ. ನೀಡುತ್ತಿದೆ. ಇದು ರೈತರಿಗೆ ಅನ್ಯಾಯವಾ ದಂತಾಗಿದೆ. ಸರ್ಕಾರ ರೈತರಿಗೂ ಅನ್ಯಾಯ ಮಾಡಿದೆ. ಜೊತೆಗೆ ಸಾರ್ವಜನಿಕರಿಗೂ ಹಾಲಿನ ದರ ಕಡಿಮೆ ಮಾಡಿಲ್ಲ. ಇದರಿಂದಾಗಿ ರೈತರಿಗೆ ಪ್ರತಿ ಲೀಟರ್‍ಗೆ 3.50 ರೂ. ಕಡಿಮೆ ಯಾಗಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಕಷ್ಟಕರ ಪರಿಸ್ಥಿತಿ ಎದುರಾಗಿದೆ ಎಂದು ರಾಣಿ ಸತೀಶ್ ದೂರಿದರು.

ಕೊಳವೆ ಬಾವಿ ಪೈಪ್ ಬಿಲ್ ಹೆಚ್ಚು: ಪಂಚಾಯಿತಿ ಗಳಲ್ಲಿ ಕೊಳವೆ ಬಾವಿ ಪೈಪ್‍ಗಳ ಬಿಲ್ ಜಾಸ್ತಿಯಾಗು ತ್ತಿದೆ. ದೊಡ್ಡ ದಂಧೆಯೇ ನಡೆಯುತ್ತಿದೆ. ಇದನ್ನು ಪರಿ ಶೀಲಿಸುವಂತೆ ಶ್ರೀರಾಂಪುರ ಪಂಚಾಯಿತಿ ಸದಸ್ಯ ಹನುಮಂತು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿ ಕ್ರಿಯಿಸಿದ ತಾಪಂ ಇಓ ಕೃಷ್ಣಕುಮಾರ್ ಇದನ್ನು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ರೈತರಿಗೆ ಬೆಂಬಲ ಬೆಲೆ: ಲಾಕ್‍ಡೌನ್ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ್ದ ರೈತರು ದರ ಸಿಗದೆ ಬೆಳೆದ ಬೆಳೆಗಳು ಹಾಳಾಗಿದ್ದು, ನಷ್ಟಕ್ಕೊಳಗಾಗಿದ್ದಾರೆ. ಅವರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಹನುಮಂತು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಅಧಿಕಾರಿ, ಕರಬೂಜ, ಕಲ್ಲಂಗಡಿ, ಬದನೆ ಮತ್ತು ಟೊಮೆಟೊ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ ಎಂದು ತಿಳಿಸಿದರು.

Translate »