ದೇವಸ್ಥಾನ, ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಿದ ಮಾಜಿ ಶಾಸಕ ವಾಸು
ಮೈಸೂರು

ದೇವಸ್ಥಾನ, ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣ ನೀಡಿದ ಮಾಜಿ ಶಾಸಕ ವಾಸು

June 9, 2020

ಮೈಸೂರು, ಜೂ.8(ಆರ್‍ಕೆ)-ಮಾಜಿ ಶಾಸಕ ವಾಸು ಅವರು ಮೈಸೂರಿನ ದೇವಸ್ಥಾನ ಹಾಗೂ ಮಸೀದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳನ್ನು ವಿತರಿಸಿದರು.

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತೆರಳಿ ತಿಲಕ್‍ನಗರ, ಬಿ.ಬಿ. ಕೇರಿ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಚಿಕ್ಕ ಮಾರ್ಕೆಟ್, ಅಶೋಕ ರಸ್ತೆ ಹಾಗೂ ಸುತ್ತಲಿನ ಪ್ರದೇಶದ ಚಿಕ್ಕ ಚಿಕ್ಕ ದೇವಸ್ಥಾನಗಳು ಹಾಗೂ ಮಸೀದಿಗಳಿಗೆ 28 ಥರ್ಮಲ್ ಸ್ಕ್ರೀನಿಂಗ್ ಉಪಕರಣಗಳನ್ನು ನೀಡಿದ ವಾಸು ಅವರು, ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.

ನಾಳೆ (ಜೂನ್ 9)ಯೂ ಚರ್ಚ್ ಹಾಗೂ ಕೆಲ ದೇವಸ್ಥಾನಗಳಿಗೆ ಉಪಕರಣ ನೀಡುವುದಾಗಿ ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಸುಹೇಲ್ ಬೇಗ್, ಸುಂದರ ಕುಮಾರ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Translate »