ದಿನೇ ದಿನೆ ಕುಸಿಯುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ: ಮಾಜಿ ಸಭಾಪತಿ ಸುದರ್ಶನ್
ಮೈಸೂರು

ದಿನೇ ದಿನೆ ಕುಸಿಯುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ: ಮಾಜಿ ಸಭಾಪತಿ ಸುದರ್ಶನ್

September 14, 2021

ಮೈಸೂರು, ಸೆ.13(ಆರ್‍ಕೆಬಿ)- ಜನರ ಭಾವನೆ, ನಾಡಿ ಮಿಡಿತ ಅರ್ಥ ಮಾಡಿಕೊಳ್ಳದಿದ್ದರ ಪರಿಣಾಮ ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು, ಬಡಜನರಿಗೆ, ಕಾರ್ಮಿಕರಿಗೆ ಸಿಕ್ಕಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಇನ್ನಿತರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲಾಗದ ಸರ್ಕಾರದ ವಿರುದ್ಧ ಜನ ಬೇಸರ ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೆ ಕುಸಿಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಮೈಸೂರು ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಂದು ಅಧೋಗತಿಗಿಳಿದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಮೋದಿಗೆ ಆಗುತ್ತಿಲ್ಲ. ತಮ್ಮ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರ ಜನವಿರೋಧಿ ಧೋರಣೆಗಳಿಂದ ಜನರು ಭ್ರಮನಿರಸನ ಗೊಂಡಿದ್ದಾರೆ. ಈ ಮಧ್ಯೆ ಮೂರು ರಾಜ್ಯಗಳ ಮುಖ್ಯಮಂತ್ರಿ ಗಳನ್ನು ಬದಲಾವಣೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ ಸರ್ಕಾರ ಜಿಪಂ, ತಾಪಂ ಚುನಾವಣೆಗಳನ್ನು ಮುಂದಕ್ಕೆ ಹಾಕು ತ್ತಿದೆ. ಸ್ಥಳೀಯ ನಾಯಕತ್ವದ ಮೂಲಕ ಸ್ಥಳೀಯ ಅಭಿವೃದ್ಧಿ ವೇಗವಾಗಿ ಆಗಬೇಕೆಂಬುದು ಆಡಳಿತ ವಿಕೇಂದ್ರೀಕರಣದ ಉದ್ದೇಶ. ಉತ್ತಮ ನಾಯಕರು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ಬರಬೇಕೆಂಬುದು ಸಹ ಇದರ ಲ್ಲಿದೆ. ಆದರೆ ತಮಗೆ ಅನುಕೂಲವಾಗುವುದಿಲ್ಲ. ತಮ್ಮ ಪಕ್ಷ ಗೆಲ್ಲುವು ದಿಲ್ಲ ಎಂಬ ಕಾರಣಕ್ಕೆ ಚುನಾವಣೆಗಳನ್ನೇ ಮುಂದೂಡಿಕೊಂಡು ಬರುತ್ತಿದ್ದಾರೆ. ಬಿಜೆಪಿ ಆಡಳಿತ ವಿಕೇಂದ್ರೀಕರಣವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.

ಇಂಡೋ- ಅಮೆರಿಕನ್ ಕಂಪನಿ ರೈತರಿಗೆ ನೀಡುವ ಬೀಜದಿಂದ ರೈತರು ಬೆಳೆ ನಷ್ಟ ಮಾಡಿಕೊಂಡು ಕಷ್ಟಕ್ಕೀ ಡಾಗಿದ್ದಾರೆ. ರೈತರಿಗೆ ಮೋಸ ಮಾಡುವ ಇಂತಹ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಶೇ.24ಕ್ಕೆ ಕುಸಿದ ಮೋದಿ ಜನಪ್ರಿಯತೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಸಮೀಕ್ಷೆಯೊಂದರ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ಶೇ.24ಕ್ಕೆ ಕುಸಿದಿದೆ. ಅವರ ಸ್ವಂತ ಬಲದಲ್ಲಿ ಮತಗಳನ್ನು ಪಡೆಯಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಜಾತಿ ಆಧಾರಿತ ಮತಗಳತ್ತ ಕಣ್ಣಿಟ್ಟಿದೆ ಬಿಜೆಪಿ ಎಂದು ಆರೋಪಿಸಿದರು. ಗ್ಯಾಸ್, ಪೆಟ್ರೋಲ್, ಡೀಸೆಲ್‍ಗಳ ಬಗ್ಗೆ ರಾಜ್ಯದ ಎಲ್ಲಾ ಸಂಸದರೂ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಕ್ರೂಡ್ ಆಯಿಲ್ ದರ ಕುಸಿದಿದೆ. ಈ ದೇಶ ಕಂಡ ಅತ್ಯಂತ ಸುಳ್ಳುಗಾರ, ಭ್ರಷ್ಟ ಪ್ರಧಾನಿ ಮೋದಿ ಎಂದು ವಾಗ್ದಾಳಿ ನಡೆಸಿದರು. ಕೇವಲ 21 ದಿನದಲ್ಲಿ ಕೋವಿಡ್ ನಿರ್ಮೂಲನಗೊಳಿಸುವು ದಾಗಿ 2020ರ ಮಾರ್ಚ್ 21ರಂದು ಘೋಷಿಸಿದ ಮೋದಿ, ಅಂದು 55 ಇದ್ದ ಕೋವಿಡ್ ಪ್ರಕರಣಗಳು ಇಂದು ಎಷ್ಟು ಕೋಟಿಯಾಗಿದೆ ತಿಳಿಸುವುದಿಲ್ಲವೇಕೆ ಎಂದು ಪ್ರಶ್ನಿಸಿದರು. ಇನ್ನಾದರೂ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಕಡಿಮೆ ಮಾಡಿ, ಜನರನ್ನು ರಕ್ಷಿಸುವ ಕೆಲಸ ಮಾಡಲಿ ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿ ದರು. ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಮಂಜುಳಾ ಮಾನಸ, ಎಚ್.ಎ.ವೆಂಕಟೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »