ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ಫುಟ್‍ಪಾತ್ ಒತ್ತುವರಿ ತೆರವು
ಮೈಸೂರು

ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ಫುಟ್‍ಪಾತ್ ಒತ್ತುವರಿ ತೆರವು

September 14, 2021

ಮೈಸೂರು,ಸೆ.13(ಆರ್‍ಕೆ)-ಮೈಸೂರಿನ ರಾಘವೇಂದ್ರನಗರ ಬಳಿ ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ಫುಟ್‍ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಸಿದ್ಧಾರ್ಥನಗರ ಸಂಚಾರ ಠಾಣೆ ಪೊಲೀಸರು ಉದಯಗಿರಿ ಮತ್ತು ನಜರ್ ಬಾದ್ ಠಾಣೆ ಪೊಲೀಸರ ನೆರವಿನಿಂದ ಡಾ.ರಾಜ್‍ಕುಮಾರ್ ರಸ್ತೆಯ ಇಕ್ಕೆಲಗಳ ಫುಟ್‍ಪಾತ್‍ನಲ್ಲಿ ತಲೆ ಎತ್ತಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು.

ಪಾದಚಾರಿಗಳು ಓಡಾಡಲು ತೊಂದರೆ ಯಾಗುವ ರೀತಿ ಮತ್ತೆ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚ ರಿಕೆ ನೀಡಿದರು. ಅಂಗಡಿ, ಗ್ಯಾರೇಜ್‍ಗಳ ಮುಂದೆ ಶೀಟ್‍ಗಳನ್ನು ಅಳವಡಿಸಿ ಫುಟ್ ಪಾತ್ ಮೇಲೆ ವಾಹನ ನಿಲ್ಲಿಸಿ ರಿಪೇರಿ ಮಾಡುತ್ತಿದ್ದವರು, ಪೆಟ್ಟಿಗೆ ಅಂಗಡಿ, ಪ್ಲಾಸ್ಟಿಕ್ ಪದಾರ್ಥ ಮಾರುವವರ ಅಂಗಡಿಗಳನ್ನೂ ತೆರವುಗೊಳಿಸಿ ಪಾದ ಚಾರಿಗಳ ಓಡಾಟಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಗಂಗಾಧರ ಸ್ವಾಮಿ `ಮಿತ್ರ’ನಿಗೆ ತಿಳಿಸಿದ್ದಾರೆ.

Translate »