ಪ್ರಧಾನಿ ಮೋದಿ ಸ್ವಾಗತಕ್ಕೆಅಂದಗೊಳ್ಳುತ್ತಿದೆ ಅರಮನೆ ಆವರಣ
ಮೈಸೂರು

ಪ್ರಧಾನಿ ಮೋದಿ ಸ್ವಾಗತಕ್ಕೆಅಂದಗೊಳ್ಳುತ್ತಿದೆ ಅರಮನೆ ಆವರಣ

June 4, 2022

ಮೈಸೂರು, ಜೂ. 3 – ಅಂತರ ರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರು ಅರಮನೆ ಆವರಣ ಶೃಂಗಾರ ಗೊಳ್ಳುತ್ತಿದೆ. ಇಲ್ಲಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳ ಲಿದ್ದು, ಈ ಹಿನ್ನೆಲೆಯಲ್ಲಿ ಅರಮನೆ ಅಂದ ಇಮ್ಮಡಿಗೊಳಿ ಸುವ ಕಾರ್ಯ ಆರಂಭವಾಗಿದೆ.

ನಾಡಹಬ್ಬ ದಸರಾ ಮಹೋತ್ಸವ, ಹೊಸ ವರ್ಷದ ಸಂಭ್ರಮಾಚರಣೆಗೆ ಅರಮನೆಯ ಆವರಣದ ಪಾರ್ಕ್‍ಗಳು ನಳನಳಿಸುತ್ತಿ ದ್ದವು. ಉಳಿದ ದಿನಗಳಲ್ಲಿ ಪಾರ್ಕ್ ನಿರ್ವಹಣೆಗೆ ಹೆಚ್ಚಿನ ಗಮನ ನೀಡುತ್ತಿ ರಲಿಲ್ಲ. ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಯಾವುದೇ ಚಟುವಟಿಕೆಗಳಿಲ್ಲ. ಹಾಗಾಗಿ ಹುಲ್ಲು ಬೆಳೆದುಕೊಂಡಿದ್ದ ಅರಮನೆಯ ಉದ್ಯಾನವನ ಗಳು ಈಗ ಕಳೆ ಕಟ್ಟಲಾರಂಭಿ ಸಿವೆ. ಜೂ.21ರಂದು ಮೈಸೂರಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳು ತ್ತಿರುವುದರಿಂದ ಅರಮನೆ ಆವರಣದಲ್ಲಿ ಪೂರ್ವ ತಯಾರಿಗೆ ಭರದ ಸಿದ್ಧತೆ ನಡೆದಿದೆ.
ಅರಮನೆ ಆಡಳಿತ ಮಂಡಳಿಯಿಂದ ಉದ್ಯಾನವನದಲ್ಲಿ ಸ್ವಚ್ಛತೆ, ಅಲಂಕಾರ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಬಣ್ಣ ಬಳಿ ಯುವ ಕಾರ್ಯ ಬಿರುಸಿನಿಂದ ಸಾಗಿದೆ. ಜಂಬೂಸವಾರಿಯಂದು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳದ ಮುಂಭಾಗ ವಿರುವ ಉದ್ಯಾನದಲ್ಲಿ ಬೆಳೆದಿದ್ದ ಕಳೆಯನ್ನು ತೆರವುಗೊಳಿಸಲಾಗುತ್ತಿದೆ. ನಂತರ ಉದ್ಯಾನ, ಹೂವಿನ ಕುಂಡ ಹಾಗೂ ಅಲಂ ಕಾರಿಕ ಗಿಡಗಳಿಂದ ಶೃಂಗಾರಗೊಳ್ಳಲಿದೆ. ಅರಮನೆ ಮುಂಭಾಗದ ಪ್ರಾಂಗಣದಿಂದ ಜಯಮಾರ್ತಾಂಡ ದ್ವಾರದವರೆಗಿನ ಎರಡು ಬದಿಯ ಉದ್ಯಾನದಲ್ಲಿ ಕಳೆ ಗಿಡ ತೆಗೆದು, ಯೋಗ ಪ್ರದರ್ಶನಕ್ಕೂ
ಎರಡು ದಿನ ಮುನ್ನ ಬಗೆ ಬಗೆಯ ಬಣ್ಣದ ಗುಲಾಬಿಗಳಿಂದ ಅಲಂಕಾರ, ಯೋಗದ ವಿವಿಧ ಭಂಗಿ ಬಿಂಬಿಸುವ ಆಕೃತಿ ಪ್ರತಿಷ್ಠಾಪಿಸಲಾಗುತ್ತದೆ.
ಹುಲ್ಲಿನ ಹಾಸಿಗೆ: ಅರಮನೆ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ವೇದಿಕೆಯಲ್ಲಿ ಯೋಗ ಮಾಡಲಿದ್ದಾರೆ. ಪ್ರೋಟೊಕಾಲ್‍ನಂತೆ ಪ್ರಧಾನಿ ಇರುವ ವೇದಿಕೆಯಿಂದ ಅನತಿ ದೂರದಲ್ಲಿ ಗಣ್ಯರು ಯೋಗ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಯೋಗ ಮಾಡಲು ವರಹಾಸ್ವಾಮಿ ದೇವಾಲಯದ ಪಕ್ಕದ ಉದ್ಯಾನ, ತ್ರಿನೇಶ್ವರ ಸ್ವಾಮಿ ದೇವಾಲಯ ಪಕ್ಕದಲ್ಲಿರುವ ಖಾಲಿ ಜಾಗ, ಭುವನೇಶ್ವರಿ ದೇವಾಲಯದ ಪಕ್ಕದ ಎರಡೂ ಬದಿಯಲ್ಲಿರುವ ಉದ್ಯಾನ, ಖಾಲಿ ಜಾಗ ಮತ್ತು ದೇವಾಲಯದ ಎದುರು ಇರುವ ಉದ್ಯಾನದಲ್ಲಿ ಯೋಗ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈಗಾಗಲೇ ಈ ಸ್ಥಳದಲ್ಲಿ ಹುಲ್ಲು ಎತ್ತರಕ್ಕೆ ಬೆಳೆದುಕೊಂಡಿತ್ತು. ಯೋಗ ಮ್ಯಾಟ್ ಹಾಸಲು ಸಹಕಾರಿಯಾಗುವಂತೆ ಲೆವೆಲ್ ಟ್ರಿಮ್ಮರ್ ಸಾಧನದ ಮೂಲಕ ಹುಲ್ಲನ್ನು ಸಮತಟ್ಟು ಮಾಡಿ, ಹುಲ್ಲಿನ ಹಾಸಿಗೆ ನಿರ್ಮಿಸಲಾಗುತ್ತಿದೆ.

ಪಾರ್ಕ್‍ಗಳಲ್ಲಿ ವಿದ್ಯುತ್ ದೀಪ ಅಳವಡಿಕೆ:ನವರಾತ್ರಿ ವೇಳೆ ಅರಮನೆಯ ದೀಪಾಲಂಕಾರ ಹಾಗೂ ಆವರಣದಲ್ಲಿರುವ ಪಾರ್ಕ್‍ನಲ್ಲಿನ ವಿದ್ಯುತ್ ದೀಪದ ಕಂಬಗಳಲ್ಲಿ ಕೆಟ್ಟಿದ್ದ ಬಲ್ಬ್‍ಗಳನ್ನು ಬದಲಾಯಿಸಲಾಗುತ್ತಿತ್ತು. ಆದರೆ, ಮೋದಿ ಆಗಮನದ ಹಿನ್ನೆಲೆಯಲ್ಲಿ ಈಗ ಅರಮನೆ ಆವರಣ ಹಾಗೂ ಉದ್ಯಾನವನದ ವಿದ್ಯುತ್ ಬಲ್ಬ್‍ಗಳನ್ನು ಬದಲಿಸಲಾಗುತ್ತಿದೆ. ಜೂ.21 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗುವ ಯೋಗ ಪಟುಗಳನ್ನು ಅಂದು ಮುಂಜಾನೆ 4 ಗಂಟೆಯಿಂದಲೇ ನಿಗಧಿತ ಬ್ಲಾಕ್‍ನಲ್ಲಿ ಆಸೀನರಾಗಲು ಸೂಚಿಸುವುದರಿಂದ ಹಿಂದಿನ ದಿನವೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಅರಮನೆ ಆವರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಪಾರ್ಕ್‍ನಲ್ಲಿ ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ.

ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಇನ್ನು 18 ದಿನ ಮಾತ್ರ ಬಾಕಿ ಇರುವುದರಿಂದ ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಇನ್ನು ಒಂದು ವಾರದೊಳಗೆ ಅರಮನೆ ಆವರಣ ಕಂಗೊಳಿಸಲಿದೆ.

Translate »