ಏಕತಾ ಪ್ರತಿಮೆ ಸಂಪರ್ಕಿಸುವ 8 ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಮೈಸೂರು

ಏಕತಾ ಪ್ರತಿಮೆ ಸಂಪರ್ಕಿಸುವ 8 ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

January 18, 2021

ನವದೆಹಲಿ, ಜ.17-ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಈಗ ದೇಶದ ಪ್ರಮುಖ ಪ್ರವಾಸಿತಾಣ ವಾಗಿ ಮಾರ್ಪಟ್ಟಿದ್ದು, ದೇಶದ ವಿವಿಧ ಪ್ರದೇಶ ಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.

ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್‍ಪ್ರೆಸ್ (ವಾರದಲ್ಲಿ ಒಂದು ದಿನ), ದಾದರ್-ಕೆವಾಡಿಯಾ ಎಕ್ಸ್‍ಪ್ರೆಸ್ (ದೈನಂದಿನ), ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್‍ಪ್ರೆಸ್ (ಪ್ರತಿದಿನ) ನಿಜಾಮುದ್ದೀನ್-ಕೆವಾಡಿಯಾ ಎಕ್ಸ್‍ಪ್ರೆಸ್ (ವಾರಕ್ಕೆ 2 ಬಾರಿ) ಕೆವಾಡಿಯಾ-ರೇವಾ ಎಕ್ಸ್‍ಪ್ರೆಸ್ (ವಾರದಲ್ಲಿ ಒಂದು ದಿನ), ಚೆನ್ನೈ-ಕೆವಾಡಿಯಾ ಎಕ್ಸ್‍ಪ್ರೆಸ್ (ವಾರದಲ್ಲಿ ಒಂದು ದಿನ), ಪ್ರತಾಪ ನಗರ-ಕೆವಾಡಿಯಾ ಎಂಇ ಎಂಯು ರೈಲು (ದೈನಂದಿನ) ಮತ್ತು ಕೆವಾಡಿಯಾ-ಪ್ರತಾಪನಗರ ಎಂಇ ಎಂಯು ರೈಲು (ದೈನಂದಿನ) ಗಳಿಗೆ ಮೋದಿಯವರು ಚಾಲನೆ ನೀಡಿದರು. ಬಳಿಕ ಮಾತನಾಡಿ ರುವ ಮೋದಿಯವರು, ಜನ್ ಶತಾಬ್ದಿ ಎಕ್ಸ್‍ಪ್ರೆಸ್ ರೈಲಿಗೆ ಇತ್ತೀಚಿನ “ವಿಸ್ಟಾ ಡೂಮ್ ಪ್ರವಾಸಿಗರ ಕೋಚ್” ಒದಗಿಸಲಾಗಿದ್ದು, ಇದು ಆಕಾಶದ ವಿಹಂಗಮ ನೋಟ ನೀಡುತ್ತದೆ. ಚೆನ್ನೈನ ಪುರುಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಒಂದು ರೈಲು ಕೇವಾಡಿಯಾ ತಲುಪಲಿದೆ. ಇಂದು ಎಂಜಿಆರ್ ಜನ್ಮವಾರ್ಷಿಕೋತ್ಸವ ದಿನವಾಗಿರುವುದು ವಿಶೇಷ ಎಂದರು.

Translate »