ಕಾಂಗ್ರೆಸ್ ನೆಲಸಮ ಆಗ್ತಿದೆ.. ಬೆಳಗಾವಿಯಲ್ಲಿ ಜೆಡಿಎಸ್ ಅಡ್ರೆಸ್ ಇಲ್ಲ
ಮೈಸೂರು

ಕಾಂಗ್ರೆಸ್ ನೆಲಸಮ ಆಗ್ತಿದೆ.. ಬೆಳಗಾವಿಯಲ್ಲಿ ಜೆಡಿಎಸ್ ಅಡ್ರೆಸ್ ಇಲ್ಲ

January 18, 2021

ಬೆಳಗಾವಿ: ದಿವಂಗತ ಸುರೇಶ್ ಅಂಗಡಿ ಅವರಿಗೆ ನಾವೆಲ್ಲ ಋಣ ತೀರಿಸಬೇಕಂದ್ರೆ ಲೋಕ ಸಭೆಯ ಉಪ ಚುನಾ ವಣೆಯಲ್ಲಿ ನಮ್ಮ ಪಕ್ಷ ದಿಂದ ಯಾರೇ ಅಭ್ಯರ್ಥಿ ಯಾದರೂ 2.5 ಲಕ್ಷ ಲೀಡ್‍ನಲ್ಲಿ ಗೆಲ್ಲಿಸಬೇಕು ಅಂತಾ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಜನಸೇವಕ್ ಸಮಾವೇಶದಲ್ಲಿ ಮಾತ ನಾಡಿದ ಅವರು, ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಕಾಂಗ್ರೆಸ್, ಜೆಡಿಎಸ್ ನೆಲ ಸಮವಾಗಿ ಇಷ್ಟೊಂದು ದೊಡ್ಡ ಮಟ್ಟ ದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ನಿಮ್ಮೆಲ್ಲರ ಶ್ರಮದಿಂದ ಈ ಭಾಗದಲ್ಲಿ ಸಂಘಟನೆ ಬಲ ಆಗೋದಕ್ಕೆ ನೀವೆಲ್ಲರೂ ಶ್ರಮವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು. ಈ ದಿಕ್ಕಿನಲ್ಲಿ ಈಗಿನಿಂದಲೇ ಪ್ರಾಮಾಣಿಕ ಪ್ರಯತ್ನ ನೀವು ಮಾಡಬೇಕು. ಕಾಂಗ್ರೆಸ್ ನೆಲಸಮ ಆಗ್ತಿದೆ, ಜೆಡಿಎಸ್ ಈ ಭಾಗದಲ್ಲಿ ಅಡ್ರೆಸ್ ಇಲ್ಲ ಎಂದು ಯಡಿಯೂರಪ್ಪ ಟೀಕಿಸಿದರು. ಒಂದು ಕಾಲ ಇತ್ತು, ಹಣದ ಬಲದಿಂದ, ಹೆಂಡ, ತೋಳ್ಬಲ, ಅಧಿಕಾರದಿಂದ ಚುನಾವಣೆಯಲ್ಲಿ ಗೆಲ್ಲಬುದು ಎಂದು ಕಾಂಗ್ರೆಸ್‍ನವರು ಭ್ರಮೆಯಲ್ಲಿದ್ದರು. ಆದರೆ ಕಳೆದ ಉಪಚುನಾವಣೆಯಲ್ಲಿ ನಾವೇ ಜಾಸ್ತಿ ಗೆದ್ವಿ, ಕರ್ನಾಟಕದ ಬಗ್ಗೆ ಅಮಿತ್ ಶಾ ಹಾಗೂ ನರೇಂದ್ರ ಮೋದಿಗೆ ಹೆಮ್ಮೆ ಇದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ದಾಖಲೆ ಬರೆದಿದ್ದೇವೆ ಎಂದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದಲೇ ಗ್ರಾಮದ ಮುಖಂಡ ರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಿರಿ. ಭ್ರಷ್ಟಾಚಾರ ರಹಿತ ಕೆಲಸ ಮಾಡ್ತೀನಿ ಅಂತ ಗ್ರಾಮದ ಮುಖಂಡರಿಗೆ ತಿಳಿಸಿ. ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮಹಾಕಿ ಸಂಘಟನೆ ಬಲಪಡಿ ಸೋಣ. ದಿವಂಗತ ಸುರೇಶ್ ಅಂಗಡಿ ಅವರಿಗೆ ನಾವೆಲ್ಲ ಋಣ ತೀರಿಸಬೇಕಂದ್ರೆ, ಲೋಕ ಸಭೆ ಉಪ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ 2.5ಲಕ್ಷ ಲೀಡ್ ನಲ್ಲಿ ಗೆಲ್ಲಿಸಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸುರೇಶ್ ಅಂಗಡಿಯವ ಋಣ ತೀರಿಸೋಣ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಸರ್ಕಾರ ಅನೇಕ ಸಂಕಷ್ಟದಲ್ಲಿ ಸಿಲುಕಿದರೂ ಸಹ ಒಳ್ಳೆಯ ಕಾರ್ಯ ಮಾಡ್ತಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆಯೋದಕ್ಕೆ ಒಳ್ಳೆ ವಾತಾವರಣ ಇದೆ. ರಾಜ್ಯದಾದ್ಯಂತ ಆರೇಳು ಬಾರಿ ಸುತ್ತಿ ಗ್ರಾಪಂ ಅಭ್ಯರ್ಥಿಗಳನ್ನು ಗೆಲ್ಲಿಸಲು ನಳೀನ್‍ಕುಮಾರ್ ಕಟೀಲ್ ಕಾರಣಿಕರ್ತ ರಾಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

Translate »