ಅಹಮದಾಬಾದ್,ಏ.೧೦-ಕೊರೊನಾ ವೈರಸ್ ಹೋಗಿಲ್ಲ. ರೂಪ ಬದಲಾಯಿಸುತ್ತಾ ಮತ್ತೆ ಮರುಕಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ವಿರು ದ್ಧದ ಹೋರಾಟವನ್ನು ಕೈಬಿಡಬೇಡಿ ಎಂದು ಎಚ್ಚರಿಸಿದ್ದಾರೆ.
‘ಬಹುರುಪಿಯಾ’ (ರೂಪವನ್ನು ಬದಲಾಯಿಸುವ) ಕೋವಿಡ್-೧೯ ಯಾವಾಗ ಪುನರುಜ್ಜೀವನಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಅದರ ಹರಡುವಿಕೆಯನ್ನು ನಿಯಂ ತ್ರಿಸಲು ಸುಮಾರು ೧೮೫ ಕೋಟಿ ಡೋಸ್ ಲಸಿಕೆಗಳನ್ನು ನೀಡುವುದು ಸಾರ್ವಜನಿಕ ಬೆಂಬಲದಿAದಾಗಿ ಸಾಧ್ಯ ವಾಯಿತು ಎಂದು ನರೇಂದ್ರ ಮೋದಿ ಹೇಳಿದರು.
ಗುಜರಾತಿನ ಜುನಾಗಢ್ ಜಿಲ್ಲೆಯಲ್ಲಿ ಮಾ ಉಮಿಯಾ ಧಾಮ್ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ರಾಸಾಯನಿಕ ಗೊಬ್ಬರ ಗಳ ಹಾವಳಿಯಿಂದ ಭೂಮಿ ತಾಯಿಯನ್ನು ಉಳಿಸುವ ಉದ್ದೇಶದಿಂದ ನೈಸರ್ಗಿಕ ಕೃಷಿಯತ್ತ ಮುಖಮಾಡುವಂತೆ ಮಾ ಉಮಿಯಾ ಭಕ್ತರನ್ನು ಒತ್ತಾಯಿ ಸಿದರು. ಕೊರೊನಾ ಒಂದು ದೊಡ್ಡ ಬಿಕ್ಕಟ್ಟು, ಮತ್ತು ಬಿಕ್ಕಟ್ಟು ಮುಗಿದಿದೆ ಎಂದು ನಾನು ಹೇಳುತ್ತಿಲ್ಲ. ಇದು ವಿರಾಮ ತೆಗೆದುಕೊಂಡಿರಬಹುದು. ಆದರೆ ಅದು ಯಾವಾಗ ಮರುಕಳಿಸು ತ್ತದೆ ಎಂದು ನಮಗೆ ತಿಳಿದಿಲ್ಲ. ಇದು ‘ಬಹುರೂಪಿ’ ಸಾಂಕ್ರಾಮಿಕವಾಗಿದೆ. ಇದನ್ನು ನಿಲ್ಲಿಸಲು, ಸುಮಾರು ೧೮೫ ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು, ಇದು ಜಗತ್ತನ್ನು ಅಚ್ಚರಿಗೊಳಿಸಿದೆ. ನಿಮ್ಮ ಬೆಂಬಲದಿAದ ಇದು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು. ಭೂಮಿ ತಾಯಿಯನ್ನು ಉಳಿಸುವ ಅಗತ್ಯವಿದೆ. ಹೀಗಾಗಿ ಗುಜರಾತ್‌ನ ಪ್ರತಿಯೊಂದು ಹಳ್ಳಿಯ ರೈತರು ನೈಸರ್ಗಿಕ ಕೃಷಿಗೆ ಮುಂದಾಗಬೇಕು ಎಂದರು. ಭಾರತದ ಸ್ವಾತಂತ್ರ÷್ಯದ ೭೫ನೇ ವರ್ಷದಲ್ಲಿ ಆಯೋಜಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ೭೫ ಅಮೃತ ಸರೋವರಗಳನ್ನು (ಕೆರೆಗಳು) ರಚಿಸುವಲ್ಲಿ ಭಾಗವಹಿಸುವಂತೆ ಅವರು ಕೇಳಿಕೊಂಡರು.
ರೈತರು ಬಲಿಷ್ಠವಾದಷ್ಟು ಭಾರತ ಹೆಚ್ಚು ಸಮೃದ್ಧವಾಗುತ್ತದೆ: ರೈತರು ಎಷ್ಟು ಬಲಿಷ್ಠರಾಗುತ್ತಾ ಹೋಗುತ್ತಾರೋ, ಹಾಗೇ ನವ ಭಾರತವು ಹೆಚ್ಚು ಸಮೃದ್ಧವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರೆ ಕೃಷಿ ಸಂಬAಧಿತ ಯೋಜನೆಗಳ ಕುರಿತು ಟ್ವೀಟ್ ಮಾಡಿದ ಅವರು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬAಧಿತ ಯೋಜನೆಗಳು ಕೋಟಿಗಟ್ಟಲೆ ಉಳುಮೆದಾರರಿಗೆ ಹೊಸ ಶಕ್ತಿಯನ್ನು ನೀಡುತ್ತಿವೆ ಎಂದು ಮಾಹಿತಿ ನೀಡಿದರು. ನಮ್ಮ ರೈತ ಸಹೋದರ ಸಹೋದರಿಯರ ಬಗ್ಗೆ ದೇಶ ಹೆಮ್ಮೆಪಡುತ್ತದೆ. ಅವರು ಬಲಿಷ್ಠರಾಗಿದಷ್ಟು, ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬAಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ೧೧.೩ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ೧.೮೨ ಲಕ್ಷ ಕೋಟಿ ರೂ.ವನ್ನು ನೇರವಾಗಿ ವರ್ಗಾ ಯಿಸಲಾಗಿದೆ ಎಂದು ಹೇಳುವ ಗ್ರಾಫಿಕ್ ಅನ್ನು ಪ್ರಧಾನಿ ಟ್ವಿಟ್ಟರ್‌ನಲ್ಲಿ ಹಂಚಿಕೊAಡಿದ್ದಾರೆ.