ಬೂಸ್ಟರ್ ಡೋಸ್ ಅಭಿಯಾನಕ್ಕೆ ತೊಡಕು
ಮೈಸೂರು

ಬೂಸ್ಟರ್ ಡೋಸ್ ಅಭಿಯಾನಕ್ಕೆ ತೊಡಕು

April 11, 2022

ಬೆಲೆ ಕಡಿತಗೊಳಿಸಿರುವುದರಿಂದ ಖಾಸಗಿ ಆಸ್ಪತ್ರೆಗಳು ಹಿಂದೇಟು
ಜಿಲ್ಲೆಯಲ್ಲಿ ೪,೭೮,೯೭೨ ಮಂದಿಗೆ ಬೂಸ್ಟರ್ ಡೋಸ್ ನೀಡುವ ಗುರಿ

ಮೈಸೂರು,ಏ.೧೦(ಎಂಟಿವೈ)- ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ೧೮ ವರ್ಷದ ಮೇಲ್ಪಟ್ಟವರಿಗೆ ಇಂದಿನಿAದ (ಭಾನು ವಾರ)ಖಾಸಗಿ ಆಸ್ಪತ್ರೆಗಳಲ್ಲಿ ಆರಂಭವಾಗಬೇಕಾಗಿದ್ದ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಬೆಲೆ ನಿಗದಿ ಸಮಸ್ಯೆ ಉಂಟಾ ಗಿದ್ದು, ಇದರಿಂದ ಮೈಸೂರಲ್ಲಿ ಇನ್ನು ಎರಡು ದಿನದವರೆಗೂ ಬೂಸ್ಟರ್ ಡೋಸ್ ನೀಡದಿರಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ.

೨ನೇ ಡೋಸ್ ಪಡೆದು ೯ ತಿಂಗಳಾ ಗಿದ್ದ ೧೮ ವರ್ಷದ ಮೇಲ್ಪಟ್ಟವರಿಗೆ ಇಂದಿ ನಿಂದ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಆರಂಭಿಕ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡಲು ನಿರ್ಧ ರಿಸಲಾಗಿತ್ತು. ಆದರೆ, ಸೀರಮ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಮತ್ತು ಭಾರತ್ ಬಯೋಟೆಕ್ ಈ ಹಿಂದೆ ನಿಗದಿ ಮಾಡಿದ್ದ ದರ ದಲ್ಲಿ ಕಡಿತಗೊಳಿಸಿರು ವುದೇ ಖಾಸಗಿ ಆಸ್ಪತ್ರೆಗ ಳಲ್ಲಿ ಅಭಿಯಾನ ಆರಂಭವಾಗುವುದು ತಡವಾಗುವ ಸಾಧ್ಯತೆ ಇದೆ.

ದರ ಕಡಿತ: ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಗೆ ೬೦೦ ರೂ., ಕೋವಾಕ್ಸಿನ್‌ಗೆ ೧೨೦೦ ರೂ. ನೀಡಿ ಖರೀದಿಸಿವೆ. ಆದರೆ ಸರ್ಕಾರ ಬೂಸ್ಟರ್ ಡೋಸ್‌ಗೆ ೨೨೫ ರೂ. ಮಾತ್ರ ದರ ನಿಗಧಿ ಮಾಡಿರುವುದರಿಂದ ಖಾಸಗಿ ಆಸ್ಪತ್ರೆಗಳು ಇಂದಿನಿAದ ಬೂಸ್ಟರ್ ಡೋಸ್ ನೀಡಲು ಹಿಂದೇಟು ಹಾಕಿವೆಯಲ್ಲದೆ, ಸರ್ಕಾರ ದರ ಪರಿಷ್ಟರಿಸುವಂತೆ ಮನವಿ ಮಾಡಿವೆ.

ಪೇಚಿಗೆ ಸಿಲುಕಿದ ಆಸ್ಪತ್ರೆಗಳು: ಸರ್ಕಾರಿ ಆಸ್ಪತ್ರೆಗಳಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಇನ್ನೂ ಬೂಸ್ಟರ್ ಡೋಸ್ ನೀಡಲು ಇನ್ನೂ ಮುಂದಾಗಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳು
ಬೂಸ್ಟರ್ ಡೋಸ್ ನೀಡುವುದಕ್ಕೆ ಅನುಮತಿ ನೀಡಲಾಗಿದೆ. ದೇಶದಾದ್ಯಂತ ಇಂದಿನಿAದ ಬೂಸ್ಟರ್ ಡೋಸ್ ನೀಡಲು ಖಾಸಗಿ ಆಸ್ಪತ್ರೆಗಳು ಸಜ್ಜಾಗಿದ್ದವು. ಆದರೆ, ಕಳೆದ ರಾತ್ರಿ ಸರ್ಕಾರ ಬೂಸ್ಟರ್ ಡೋಸ್‌ವೊಂದಕ್ಕೆ ೨೨೫ ರೂ. ಹಾಗೂ ಸೇವಾ ಶುಲ್ಕ ಮಾತ್ರ ತೆಗೆದು ಕೊಳ್ಳುವಂತೆ ಆದೇಶ ಹೊರಡಿಸಿದೆ. ಈಗಾಗಲೇ ದುಪ್ಪಟ್ಟು ಬೆಲೆ ನೀಡಿ ಬೂಸ್ಟರ್ ಡೋಸ್ ಖರೀದಿಸಿ ಅಭಿಯಾನ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದ ಖಾಸಗಿ ಆಸ್ಪತ್ರೆಗಳು ಕಳೆದ ರಾತ್ರಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಪೇಚಿಗೆ ಸಿಲುಕಿವೆ.

ಸರ್ಕಾರದ ಹೊಸ ಆದೇಶಕ್ಕಾಗಿ ಕಾಯುತ್ತೇವೆ: ಬೂಸ್ಟರ್ ಡೋಸ್ ದರ ನಿಗಧಿ ಮಾಡಿರುವುದಕ್ಕೆ ಸಂಬAಧಿಸಿದAತೆ `ಮೈಸೂರು ಮಿತ್ರ’ನೊಂದಿಗೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮಾತನಾಡಿ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶನ ಮೇರೆಗೆ ೧೮ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಇಂದಿನಿAದ (ಏ.೧೦) ಅಭಿಯಾನ ಆರಂಭಿಸಲು ಅದಕ್ಕಾಗಿ ಔಷಧ ಕಂಪನಿಗಳು ನಿಗದಿ ಮಾಡಿರುವ ದರದಲ್ಲೇ ಬೂಸ್ಟರ್ ಡೋಸ್ ಖರೀದಿಸಲಾಗಿತ್ತು. ಆದರೆ, ಸರ್ಕಾರ ಕಳೆದ ರಾತ್ರಿ ಬೂಸ್ಟರ್ ಡೋಸ್ ದರ ನಿಗದಿ ಮಾಡಿರು ವುದು ಆಸ್ಪತ್ರೆಗಳಿಗೆ ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡುತ್ತಿದೆ. ಹೆಚ್ಚು ದರ ಕೊಟ್ಟು ಬೂಸ್ಟರ್ ಡೋಸ್ ಖರೀದಿಸಿ, ಕಡಿಮೆ ದರಕ್ಕೆ ನೀಡುವುದು ಎಷ್ಟು ಸರಿ. ಈ ಹಿನ್ನೆಲೆ ಯಲ್ಲಿ ಸರ್ಕಾರ ಕೂಡಲೇ ದರ ಮರು ಪರಿಶೀಲನೆ ಮಾಡಿ, ಖಾಸಗಿ ಆಸ್ಪತ್ರೆಗಳು ಬೂಸ್ಟರ್ ಡೋಸ್ ಖರೀದಿಸಿರುವ ದರಕ್ಕೆ ಅನುಗುಣವಾಗಿ ಹೊಸ ದರ ನಿಗಧಿ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಕಳೆದ ೨ ದಿನಗಳಿಂದ ಸರ್ಕಾರಿ ರಜೆ ಇರುವು ದರಿಂದ ಕೋ-ವಿನ್ ಅಪ್ಲಿಕೇಶನ್ ಸ್ಥಗಿತಗೊಂಡಿದೆ. ನಾಳೆ(ಏ.೧೧) ಅಪ್ಲಿಕೇಶನ್ ಸರಿಯಾಗಲಿದೆ. ಆ ನಂತರ ೧೮ ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಹೆಸರು ನೋಂದಾಯಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ಜಿಲ್ಲೆಯಲ್ಲಿ ೪,೭೮,೯೭೨ ಮಂದಿಗೆ ಬೂಸ್ಟರ್ ಡೋಸ್ ಗುರಿ: ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ. ಸರ್ಕಾರದ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಇದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಿಗದಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣ ಕಾರ್ಯಕರ್ತರು ಹಾಗೂ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾ ಗುತ್ತಿದೆ. ಬೂಸ್ಟರ್ ಡೋಸ್ ಪಡೆಯಲು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದು ೯ ತಿಂಗಳಾಗಿರಬೇಕೆAಬ ಮಾನದಂಡವಿದೆ. ಮೈಸೂರು ಜಿಲ್ಲೆಯಲ್ಲಿ ೧೮ ವರ್ಷದ ಮೇಲ್ಪಟ್ಟ ೪,೭೮,೯೭೨ ಮಂದಿಗೆ ಬೂಸ್ಟರ್ ಡೋಸ್ ನೀಡುವ ಗುರಿ ಹೊಂದಲಾಗಿದೆ.

ಖಾಸಗಿ ಲಸಿಕಾ ಕೇಂದ್ರಗಳಿಗೆ ಸೆರಮ್ ಇನ್ಸಿ÷್ಟಟ್ಯೂಟ್‌ನಿಂದ ಉಚಿತ ಕೋವಿಶೀಲ್ಡ್ ಲಸಿಕೆ
ನವದೆಹಲಿ, ಏ. ೧೦- ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಡೋಸ್ ಲಸಿಕೆಯ ದರವನ್ನು ೨೨೫ ರೂಪಾಯಿಗಳಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಸೆರಮ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಬೆಲೆ ವ್ಯತ್ಯಾಸಕ್ಕೆ ಪರಿಹಾರ ನೀಡುವುದಾಗಿ ಹೇಳಿದೆ. ಖಾಸಗಿ ಕೇಂದ್ರಗಳಲ್ಲಿ ಕಾಲಮಿತಿ ಮುಗಿದಿರದ ಸರಕುಗಳಿಗೆ ಬದಲಾಗಿ ಉಚಿತವಾಗಿ ಹೊಸ ಸರಕುಗಳನ್ನು ನೀಡುವುದಾಗಿ ಸಂಸ್ಥೆ ಘೋಷಿಸಿದೆ.

ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಡೋಸ್ ಲಸಿಕೆಗಳಿಗೆ ರೂಪಾಯಿ ೨೨೫ ನ್ನು ನಿಗದಿಪಡಿಸುವುದಾಗಿ ಸೆರಮ್ ಇನ್ಸಿ÷್ಟಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಶನಿವಾರ ಹೇಳಿದ್ದವು. ಈಗಾಗಲೇ ಉಳಿದಿರುವ ಸರಕುಗಳಿಗೆ ಉಂಟಾಗುವ ಬೆಲೆ ವ್ಯತ್ಯಾಸಕ್ಕೆ ಪರಿಹಾರ ನೀಡುವುದಾಗಿ ಭಾರತ್ ಬಯೋಟೆಕ್ ಸಹ ಹೇಳಿಕೆ ನೀಡಿತ್ತು.

Translate »