ಹಾಡಹಗಲೇ ಕಾರಿನ ಮೇಲೆ ಮುಸುಕುಧಾರಿಗಳ ದಾಳಿ
ಮೈಸೂರು

ಹಾಡಹಗಲೇ ಕಾರಿನ ಮೇಲೆ ಮುಸುಕುಧಾರಿಗಳ ದಾಳಿ

April 12, 2022

ಕಡಕೊಳ ಸಮೀಪ ನಂಜನಗೂಡು ಹೆದ್ದಾರಿಯಲ್ಲಿ ಸಿನಿಮೀಯ ಶೈಲಿ ಕೃತ್ಯ, ವಿಡಿಯೋ ವೈರಲ್, ಪ್ರಕರಣ ಭೇದಿಸಲು ಪೊಲೀಸರ ಪ್ರಯತ್ನ

ಮೈಸೂರು,ಏ.೧೧(ಆರ್‌ಕೆ)-ಹಾಡಹಗಲೇ ಮುಸುಕುಧಾರಿ ಗಳ ಗುಂಪೊAದು ಚಲಿಸುತ್ತಿದ್ದ ಕಾರು ತಡೆದು ಅದರಲ್ಲಿ ದ್ದವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆಗೆತ್ನಿಸಿ, ಕೊನೆಗೆ ಅದೇ ಕಾರಲ್ಲಿ ಪರಾರಿಯಾದರೆನ್ನಲಾದ ಘಟನೆ ಮೈಸೂರು -ನಂಜನಗೂಡು ಹೆದ್ದಾರಿಯಲ್ಲಿ ನಡೆದಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ.

ನಂಜನಗೂಡು ಕಡೆಯಿಂದ ಮೈಸೂರಿ ನತ್ತ ಬರುತ್ತಿದ್ದ ಕಾರನ್ನು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ಬಂದ ಮುಸುಕು ಧಾರಿ ಯುವಕರು, ಕಡಕೊಳ ಸಮೀಪ ಕಾರು ತಡೆದು ದೊಣ್ಣೆ, ಮಾರಕಾಸ್ತçಗಳಿಂದ ಹಲ್ಲೆ ನಡೆಸಿದ್ದಾರೆ. ಆ ವೇಳೆ ಕಾರಿ ನಿಂದಿಳಿದು ಪರಾರಿ ಯಾಗಲೆತ್ನಿಸಿದ ಚಾಲಕನನ್ನು ಹಿಡಿದು ಮತ್ತೆ ಕಾರಿಗೆ ದೂಡಿದ ದೃಶ್ಯ ವೈರಲ್ ಆಗಿದೆ. ಈ ವೇಳೆ ಆ ಮಾರ್ಗವಾಗಿ ಬಂದ ಬಸ್‌ನ ಪ್ರಯಾಣ ಕರು ಈ ದೃಶ್ಯ ವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗು ತ್ತಿದ್ದಂತೆಯೇ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರಲ್ಲದೆ, ಆ ಮಾರ್ಗದ ಅಂಗಡಿ-ಮುAಗಟ್ಟುಗಳವರನ್ನು ವಿಚಾರಿಸಿದ್ದರಾದರೂ, ಘಟನೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆ ವಿಡಿಯೋ ದೃಶ್ಯಾವಳಿ ಪ್ರಕಾರ, ನಂಜನಗೂಡು ರಸ್ತೆಯ
ಕಡಕೊಳ ಸಮೀಪ ಈ ಕೃತ್ಯ ನಡೆದಿದೆ ಎಂಬುದು ತಿಳಿಯುತ್ತದೆ. ಆದರೆ, ಯಾವ ದಿನ, ಯಾವ ಸಮಯದಲ್ಲಿ ಸಂಭವಿಸಿದೆ ಎಂಬ ನಿಖರ ಮಾಹಿತಿ ಸಿಗದ ಕಾರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ದಾಳಿಗೊಳಗಾದವರಾಗಲೀ, ಅದನ್ನು ನೋಡಿದವರಾಗಲೀ ಅಥವಾ ಮೊಬೈಲ್‌ನಲ್ಲಿ ವಿಡಿಯೋ ಮಾಡಿದವರಾಗಲೀ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಕೇರಳದಿಂದ ಬರುತ್ತಿದ್ದ ಕಾರನ್ನು ಬೆನ್ನತ್ತಿ ಬಂದು ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಘಟನೆ ಬಗ್ಗೆ ಒಂದೇ ಒಂದು ಸುಳಿವೂ ಸಿಗುತ್ತಿಲ್ಲ ಎಂದು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಶಶಿ ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಯಾರೂ ಸಹ ಈವರೆಗೂ ತಮಗೆ ಮಾಹಿತಿ ನೀಡಿಲ್ಲ, ನೊಂದವರು ಕೂಡ ಬಂದು ದೂರು ನೀಡದ
ಕಾರಣ ಪ್ರಕರಣದ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ. ಘಟನೆ ಯಾವ ದಿನ ಯಾವ ಸಮಯದಲ್ಲಿ ನಡೆಯಿತು ಎಂಬುದು ಗೊತ್ತಾದರೆ, ನಾವು ಆ ಮಾರ್ಗದ ಸಿಸಿ ಕ್ಯಾಮರಾಗಳ ಫುಟೇಜಸ್ ಚೆಕ್ ಮಾಡಬಹುದು. ಅದು ಹಳೇ ವಿಡಿಯೋ ಇರ ಬಹುದು ಎಂಬ ಅನುಮಾನವೂ ಇದೆ ಎಂದು ಶಶಿಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಎಸ್ಪಿ ಚೇತನ್, ವೈರಲ್ ಆಗಿರುವ ವೀಡಿಯೋ ಬಗ್ಗೆ ಗಮನ ಹರಿಸಿದ್ದೇವೆ. ಈ ಸಂಬAಧ ಯಾರೂ ದೂರು ದಾಖಲಿಸದಿ ದ್ದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾರಿನ ನೋಂದಣ ಸಂಖ್ಯೆ ದೊರೆತಿದ್ದು, ಅದರ ಮಾಲೀಕನನ್ನು ಪತ್ತೆ ಹಚ್ಚಿ ತನಿಖೆ ನಡೆಸಲಾಗುವುದು ಎಂದರು. ಆದರೆ, ವೈರಲ್ ಆಗಿರುವ ವಿಡಿಯೋ ದೃಶ್ಯವು ಜನರನ್ನು ಬೆಚ್ಚಿ ಬೀಳಿಸಿದೆ. ಕಾರನ್ನು ಬೆನ್ನತ್ತಿ ಬಂದು ಅಡ್ಡಗಟ್ಟಿ ಮಾರಕಾಸ್ತçಗಳಿಂದ ಹಾಡಹಗಲೇ ದಾಳಿ ಮಾಡಿ, ಅದೇ ಕಾರಿನೊಂದಿಗೆ ಮುಸುಕುಧಾರಿಗಳು ಪರಾರಿಯಾಗಿರುವುದು ಭಯ ಹುಟ್ಟಿಸುವಂತಿದೆ.

Translate »