ಖಾಸಗಿ ಬಸ್ ಸಂಚಾರ: ಸರ್ಕಾರಿ ದರದಲ್ಲೇ ಟಿಕೆಟ್
ಮೈಸೂರು

ಖಾಸಗಿ ಬಸ್ ಸಂಚಾರ: ಸರ್ಕಾರಿ ದರದಲ್ಲೇ ಟಿಕೆಟ್

June 2, 2020

ಮೈಸೂರು, ಜೂ.1- ಜಿಲ್ಲೆಯಲ್ಲಿ ಸೋಮವಾರದಿಂದ ಖಾಸಗಿ ಬಸ್ ಸಂಚಾರ ಆರಂಭವಾಯಿತು. ಮೈಸೂರಿನಿಂದ ಕೊಳ್ಳೇ ಗಾಲ, ಚಾಮರಾಜನಗರ ಮುಂತಾದೆಡೆಗೆ ಸುಮಾರು 30 ಬಸ್‍ಗಳು ಸಂಚರಿಸಿದವು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಉಪಾ ಧ್ಯಕ್ಷರೂ ಆದ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ, ಕೊರೊನಾ ನಿಯಂತ್ರಣ ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್‍ಗಳು ಸಂಚರಿಸಿವೆ. ಈ ಸಂಬಂಧ ಖಾಸಗಿ ಬಸ್ ಮಾಲೀಕರ ಸಭೆ ನಡೆಸಿದ್ದ ಅಧಿಕಾರಿ ಗಳು, ಸಂಚಾರ ಹಾಗೂ ಪ್ರಯಾಣಿಕರ ಸಂಖ್ಯೆ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡಿದ್ದಾರೆ. ಅಧಿಕಾರಿಗಳು ಸೂಚಿಸಿರುವ ನಿಯಮಾನು ಸಾರ ಬಸ್‍ಗಳು ಸಂಚರಿಸಿವೆ ಎಂದಿ ದ್ದಾರೆ. ಕೆಎಸ್‍ಆರ್‍ಟಿಸಿ ಬಸ್‍ಗಳಂತೆ ಖಾಸಗಿ ಬಸ್‍ಗಳಲ್ಲಿಯೂ ಕೇವಲ 30 ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗಿತ್ತು. ಕೆಎಸ್‍ಆರ್‍ಟಿಸಿ ಬಸ್‍ಗಳ ದರವನ್ನೇ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.

Translate »