ಕಾಂಗ್ರೆಸ್ ಮುಖಂಡ ಬಿ.ರೇವಣ್ಣರಿಂದ ಸಾವಿರಾರು ಬೀದಿಬದಿ ವ್ಯಾಪಾರಿಗಳು, ಬಡವರಿಗೆ ದಿನಸಿ ಕಿಟ್ ವಿತರಣೆ
ಮಂಡ್ಯ

ಕಾಂಗ್ರೆಸ್ ಮುಖಂಡ ಬಿ.ರೇವಣ್ಣರಿಂದ ಸಾವಿರಾರು ಬೀದಿಬದಿ ವ್ಯಾಪಾರಿಗಳು, ಬಡವರಿಗೆ ದಿನಸಿ ಕಿಟ್ ವಿತರಣೆ

June 2, 2020

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ

ಮಂಡ್ಯ, ಜೂ.1(ನಾಗಯ್ಯ)- ಪಾಂಡವಪುರ ಪಟ್ಟಣ ದಲ್ಲಿ ಸೋಮವಾರ ಮಾಜಿ ಸಚಿವ ಎನ್. ಚಲುವ ರಾಯಸ್ವಾಮಿ ಅವರ ಹುಟ್ಟುಹಬ್ಬವನ್ನು ಸಮಾಜ ಸೇವಕ, ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಅವರು ಸಾವಿರಾರು ಬೀದಿಬದಿ ವ್ಯಾಪಾರಿಗಳು ಹಾಗೂ ಬಡವರಿಗೆ ಸುಮಾರು 3200 ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕ ಸಾರ್ಥಕ ರೀತಿ ಆಚರಿಸಿದರು.

ಪಾಂಡವಪುರ ಪಟ್ಟಣದ ಫೈಲೈಟ್ ಸರ್ಕಲ್‍ನಲ್ಲಿ ಎನ್.ಚಲುವರಾಯಸ್ವಾಮಿ ಅವರ ಪ್ಲೆಕ್ಸ್ ನಿಲ್ಲಿಸಿ ಕೇಕ್ ಕಟ್ ಮಾಡಿದ ಅಭಿಮಾನಿಗಳು, ಸಾರ್ವಜನಿಕರಿಗೆ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ವ್ಯಾಪಾರಿಗಳು ಹಾಗೂ ಬಡವರಿಗೆ ಸುಮಾರು 3200 ಕಿಟ್‍ಗಳನ್ನು ಬಿ.ರೇವಣ್ಣ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದರು.

ಬಳಿಕ ಮಾತನಾಡಿದ ಬಿ.ರೇವಣ್ಣ ಅವರು, ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರೂ ಆದ ಎನ್.ಚಲುವ ರಾಯಸ್ವಾಮಿ ಅವರು ನಮ್ಮ ನಾಯಕರು. ಅವರ ಹುಟ್ಟು ಹಬ್ಬವನ್ನು ಸಮಾಜದಲ್ಲಿ ನೊಂದವರಿಗೆ, ಬಡವರಿಗೆ, ಅಸಹಾಯಕರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಲಾಕ್‍ಡೌನ್ ಬಳಿಕ 6ನೇ ಹಂತದಲ್ಲಿ ಕಿಟ್ ವಿತ ರಣೆ ಮಾಡುತ್ತಿರುವ ಕಾರ್ಯಕ್ರಮ ಇದಾಗಿದ್ದು, ಇದು ವರೆಗೂ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಕಿಟ್ ವಿತರಣೆ ಮಾಡಲಾಗಿದೆ. ಈಗಾಗಲೆ ಕ್ಷೇತ್ರದಲ್ಲಿ 25 ಸಾವಿರ ಮಾಸ್ಕ್ ಹಾಗೂ 35 ಸಾವಿರ ಸ್ಯಾನಿಟೈಸರ್ ಗಳನ್ನು ತಾಲೂಕು ಆಡಳಿತಕ್ಕೂ ನೀಡಲಾಗಿದೆ. ಅಲ್ಲದೆ ಬಡವರು, ದುರ್ಬಲರು, ಶೋಷಿತರು, ಮಂಗಳಮುಖಿ ಯರು, ಸವಿತಾಸಮಾಜ, ಆಟೋ ಚಾಲಕರು, ಪೌರಕಾರ್ಮಿಕರು, ಪತ್ರಕರ್ತರು, ಛಾಯಾಗ್ರಾಹಕರು ಸೇರಿದಂತೆ ಸಾವಿರಾರು ಮಂದಿಗೆ ವೈಯಕ್ತಿಕವಾಗಿ ಕಿಟ್ ವಿತರಣೆ ಮಾಡಿದ್ದೇನೆ. ಇದೀಗ ಬೀದಿಬದಿಯ ವ್ಯಾಪಾರಿಗಳಿಗೆ ಕಿಟ್ ವಿತರಣೆ ಮಾಡಿದ್ದೇನೆ ಎಂದರು.

ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ನನ್ನ ಕ್ಷೇತ್ರದ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶ ದಿಂದ ಈವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಕಿಟ್ ವಿತರಣೆ ಮಾಡಿದ್ದೇನೆ. ಜನತೆ ಕಣ್ಣಿಗೆ ಕಾಣದ ಕೊರೊನಾ ವಿರುದ್ದ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಜನರು ಈ ಹೋರಾಟಕ್ಕೆ ಸಿದ್ಧ ರಾಗಬೇಕು. ನಿಮ್ಮ ಕಷ್ಟಗಳಿಗೆ ಸ್ಪಂದಿಸಿ ನೆರವಾಗಲಿ ದ್ದೇನೆ. ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ತುಂಬಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕ್ಷೇತ್ರದಲ್ಲಿ ಇಷ್ಟು ದಿನಗಳ ಕಾಲ ಅಧಿಕಾರಕ್ಕೇರಿದವರು ಜನರ ಕಷ್ಟಗಳಿಗೆ ಸ್ಪಂದಿಸದೆ ಮೌನವಾಗಿದ್ದಾರೆ. ಆದರೆ, ಸಮಾಜಸೇವಕ ಬಿ.ರೇವಣ್ಣ ಅವರು ಯಾವುದೇ ಅಧಿಕಾರ ಇಲ್ಲದೆ ಇದ್ದರೂ ಸಹ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಕ್ಷೇತ್ರದಾದ್ಯಂತ ಸುತ್ತಾಡಿ ವೈಯುಕ್ತಿಕವಾಗಿ ಕಿಟ್ ವಿತರಣೆ ಮಾಡಿ ನೆರವಾಗಿದ್ದಾರೆ. ಇಂತಹ ಜನನಾಯಕರನ್ನು ಕ್ಷೇತ್ರದ ಜನತೆ ಬೆಳೆಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದ ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇ ಗೌಡ, ಸಿ.ಆರ್.ರಮೇಶ್, ಜಿ.ಇ.ರವಿಕುಮಾರ್, ಹೊಸ ಕೋಟೆ ವಿಜಿ, ಡಿ.ಹುಚ್ಚೇಗೌಡ, ಶ್ರೀನಿವಾಸ್, ಹಿರೇಮರಳಿ ಶಿವರಾಮು, ಪುರಸಭೆ ಸದಸ್ಯರಾದ ಪಾರ್ಥ, ಊಮಾ ಶಂಕರ್, ಬಿ.ರೇವಣ್ಣ ಅಭಿಮಾನಿ ಬಳಗದ ಬಿ.ಟಿ. ಮಂಜುನಾಥ್, ಪೇಂಯಿಟ್ ಮಹದೇವು, ಶ್ರೀಕಂಠು, ವಿಜಿ, ಅನಿಲ್ ಸೇರಿದಂತೆ ಹಲವರಿದ್ದರು.

Translate »