ಗೋಡೆಗಳ ಮೇಲೆ ಜಾಹೀರಾತು ಬರಹ ಸ್ಟೀಲ್ಸ್ ಅಂಗಡಿ ವಿರುದ್ಧ ನಗರ ಪಾಲಿಕೆ ದೂರು
ಮೈಸೂರು

ಗೋಡೆಗಳ ಮೇಲೆ ಜಾಹೀರಾತು ಬರಹ ಸ್ಟೀಲ್ಸ್ ಅಂಗಡಿ ವಿರುದ್ಧ ನಗರ ಪಾಲಿಕೆ ದೂರು

June 2, 2020

ಮೈಸೂರು, ಜೂ.1 (ಆರ್‍ಕೆ)- ಅನಧಿ ಕೃತವಾಗಿ ಗೋಡೆಗಳ ಮೇಲೆ ಜಾಹೀ ರಾತು ಬರೆದಿರುವ ಸ್ಟೀಲ್ಸ್ ಅಂಗಡಿ ಮಾಲೀಕರ ವಿರುದ್ಧ ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಕುವೆಂಪು ನಗರ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನ ರಾಮಕೃಷ್ಣನಗರದ ಚದ ರುಂಗ ರಸ್ತೆ 1ನೇ ಬ್ಲಾಕ್‍ನಲ್ಲಿರುವ ಸುಮಿತ್ರ ಸ್ಟೀಲ್ಸ್ ಅಂಗಡಿ ಮಾಲೀಕ ಕೃಷ್ಣಕುಮಾರ್ ಸಾಗರ್ ಎಂಬುವರ ವಿರುದ್ಧ ಮೇ 5ರಂದು ಪಾಲಿಕೆ ಉಪ ಆಯುಕ್ತ (ಕಂದಾಯ) ಕುಮಾರ್ ನಾಯಕ್ ದೂರು ನೀಡಿದ್ದಾರೆ.

ಸ್ಟೀಲ್ ಅಂಡ್ ಸಿಮೆಂಟ್ ವ್ಯಾಪಾರ ನಡೆಸುತ್ತಿರುವ ಸಾಗರ್, ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಗೋಡೆಗಳು, ಬಸ್ ಶೆಲ್ಟರ್‍ಗಳ ಮೇಲೆ ತಮ್ಮ ಅಂಗಡಿಯ ಜಾಹೀರಾತು ಬರಹಗಳನ್ನು ಪ್ರದರ್ಶಿಸಿ ದ್ದಾರೆ. ಅವುಗಳನ್ನು ತೆರವುಗೊಳಿಸುವಂತೆ 3 ಬಾರಿ ನೋಟಿಸ್ ನೀಡಿದ್ದರು. ಹಲವೆಡೆ ಹಾಗೆಯೇ ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದ್ದರಿಂದ ಅವರ ಮೇಲೆ ಪ್ರಿವೆನ್‍ಷನ್ ಆಫ್ ಡಿಸ್‍ಫಿಗರ್‍ಮೆಂಟ್ ಆಕ್ಟ್‍ನಡಿ ಕ್ರಮ ವಹಿಸುವಂತೆ ಕುಮಾರ್ ನಾಯಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Translate »