ಕೃಷ್ಣ ಬಂಗೇರಾ ನೇತೃತ್ವದ ಪ್ರಾಂಶುಪಾಲರುಗಳ ನಿಯೋಗಕ್ಕೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭರವಸೆ
ಬೆಂಗಳೂರು, ಜು.23- ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಷ್ಟಗಳ ಅರಿವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗು ವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭರವಸೆ ನೀಡಿದ್ದಾರೆ.
`ಮೈಸೂರು ಸಹೋದಯ’ದ ಅಧ್ಯಕ್ಷ ಕೃಷ್ಣ ಬಂಗೇರಾ ನೇತೃತ್ವದಲ್ಲಿ ತಮ್ಮನ್ನು ಬೆಂಗ ಳೂರಿನಲ್ಲಿ ಗುರುವಾರ ಭೇಟಿ ಮಾಡಿದ `ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಂಶು ಪಾಲರ ನಿಯೋಗ’ದ ಅಹವಾಲು ಆಲಿಸಿದ ಸಚಿವ ಸುರೇಶ್‍ಕುಮಾರ್, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಿಯೋಗ ತಿಳಿಸಿದೆ.
ಬಹಳಷ್ಟು ಸಮಯ ಲಾಕ್‍ಡೌನ್ ಜಾರಿಯಾಗಿದ್ದರಿಂದ ರಾಜ್ಯಾದ್ಯಂತ ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ಶಾಲೆ ಆರಂಭ ಗೊಳ್ಳದೇ ಇದ್ದುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಪೋಷಕರಿಂದ ಶಿಕ್ಷಣ ಶುಲ್ಕವನ್ನು ಸರಿಯಾಗಿ ಸಂಗ್ರಹಿಸ ಲಾಗಿಲ್ಲ. ಶೈಕ್ಷಣಿಕ ವರ್ಷದ ಬಗೆಗೇ ಗೊಂದಲದಲ್ಲಿರುವ ಪೋಷಕರೂ, ಫೀ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಅನುದಾನ ರಹಿತ ಶಾಲೆಗಳೂ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿವೆ. ಪರಿಣಾಮ, ಶಿಕ್ಷಕರು, ಸಿಬ್ಬಂದಿಗೆ ಕೆಲ ತಿಂಗಳಿಂದ ವೇತನ ಪಾವತಿಸಲಾಗಿಲ್ಲ. ಹಾಗಾಗಿ ಅಸಂಘಟಿತ ವಲಯದ ಈ ಉದ್ಯೋಗಿಗಳು ಬಹಳ ಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಇವರ ಸಮಸ್ಯೆಗಳತ್ತಲೂ ಗಮನ ಹರಿಸಬೇಕು. ತುರ್ತಾಗಿ ನೆರವಿಗೆ ಧಾವಿಸಬೇಕು ಎಂದು ನಿಯೋಗ ಮನವಿ ಮಾಡಿದೆ. ಕೆ.ಜಿ.ಮ್ಯಾಥ್ಯೂ, ವಿಲಿಯಮ್ ಪುಷ್ಪರಾಜ್ ಮತ್ತು ರಾಜೇಶ್ವರ್ ಐಯ್ಯರ್ ಅವರುಗಳಿದ್ದ ನಿಯೋಗವು ಶಿಕ್ಷಣ ಸಚಿವರನ್ನು ಭೇಟಿ ಮಾಡುವುದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನೂ ಭೇಟಿ ಮಾಡಿ ಮನವಿಪತ್ರ ಸಲ್ಲಿಸಲಾಗಿದೆ ಎಂದೂ ನಿಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.