`ಸ್ಫೂರ್ತಿ’ ಪುಸ್ತಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

`ಸ್ಫೂರ್ತಿ’ ಪುಸ್ತಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

March 2, 2021

ಮೈಸೂರು, ಮಾ.1(ವೈಡಿಎಸ್)- ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಸ್ವಾಮಿ ಸುರೇಶಾನಂದಜಿ ಅವರ ಸ್ಮರಣಾರ್ಥ `ಹಚ್ಚಹಸಿರ ಮೈಸೂರು-ವಿವೇಕ ಪ್ರಭೆಯ ಮೈಸೂರು’ ಶೀರ್ಷಿಕೆ ಯಡಿ ಆಶ್ರಮದಲ್ಲಿ ಆಯೋಜಿಸಿದ್ದ ಉಚಿತ ಸಸಿ ವಿತರಣಾ ಕಾರ್ಯಕ್ರಮ ಸಮಾರೋಪದಲ್ಲಿ `ಸ್ಫೂರ್ತಿ’ ಪುಸ್ತಕ ಕುರಿತ ಸ್ಪರ್ಧೆ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ಕನಕದಾಸನಗರದ ಎ.ಸವಿತಾ (ಪ್ರ), ಹೆಬ್ಬಾಳ್‍ನ ಬಿ.ಎಸ್.ಸಚಿನ್ ಬಾಳಿಗ(ದ್ವಿ), ಮಂಡಿಮೊಹಲ್ಲಾದ ಬಿ.ಎ.ಪೂಜಾ (ತೃ) ಬಹುಮಾನ ಪಡೆದುಕೊಂಡರು.

ಉಳಿದಂತೆ ಬನ್ನಿಮಂಟಪದ ಎಂ.ಎ.ನಿಖಿತ, ಎಂ.ಎನ್. ಸೋಮೇಶ್, ಬಂಬೂಬಜಾರ್‍ನ ಕೆ.ಬೀನಾ ಕುಮಾರಿ, ಜನತಾನಗರದ ಹೆಚ್.ಜಿ.ರಾಜಶ್ರೀ, ವಿಜಯ ನಗರದ ಪಿ.ವಿನ್ಸಿ ದೇವಯ್ಯ, ತಾರಾ ಸೇತೂರಾಂ, ಎ.ಪಿ.ಮನು, ಕೃಷ್ಣಮೂರ್ತಿಪುರಂನ ವಿ.ಸಂಧ್ಯಾ, ಆನಂದನಗರದ ಅನ್ನಪೂರ್ಣ ಗೋಪಾಲಕೃಷ್ಣ, ಗೋಕುಲಂ 3ನೇ ಹಂತದ ಕೆ.ಚಂದ್ರಕಲಾ, ಬೀರಿ ಹುಂಡಿಯ ಬಿ.ಜಿ.ವೇಣುಗೋಪಾಲ್, ಯಾದವಗಿರಿಯ ಎಲ್.ಅನನ್ಯ, ಮೇಟಗಳ್ಳಿಯ ಎನ್.ಕೆ.ಶ್ರೀಕುಮಾರ್, ಜಯನಗರದ ವಿಠಾ ಆರ್.ಶಾನಭಾಗ್, ಅರವಿಂದ ನಗರದ ಆದ್ವಿಕ್ ಭಾರದ್ವಾಜ್, ಕೆ.ಸಿ.ಬಡಾವಣೆಯ ಎಂ.ಕೆ.ರಮೇಶ್, ಕುವೆಂಪುನಗರದ ಎಸ್.ಸುರೇಶ್, ಶ್ರೀರಾಂಪುರ 2ನೇ ಹಂತದ ಆರ್.ಎಲ್.ಸೃಷ್ಟಿ, ವಸಂತ ಕುಮಾರ್, ಎನ್.ಆರ್.ಮೊಹಲ್ಲಾದ ಎಸ್.ಶಾಂತ, ಪಾಂಡವಪುರ ತಾಲೂಕು ಎಣ್ಣೆಹೊಳೆಕೊಪ್ಪಲಿನ ವೈ.ಎಸ್.ಗಗನಶ್ರೀ, ಬೆಳವಾಡಿಯ ಸಿ.ಯು.ಗೀಷ್ಮ, ಬೋಗಾದಿಯ ಜಯರಾಂ ಕಾಮತ್, ರಾಜೇಂದ್ರ ನಗರದ ನಿಶಾಂತ್‍ಕುಮಾರ್, ನಜರಬಾದ್‍ನ ಆಶಾ ನಾಗರಾಜ್, ಗೋಕುಲಂನ ಎಂ.ಭವಾನಿ ಸಾಗರ್, ರಾಮಕೃಷ್ಣನಗರದ ಆರ್.ದೀಕ್ಷಿತ್ ಸಮಾಧಾನಕರ ಬಹುಮಾನ ಪಡೆದುಕೊಂಡರು. ಇದೇ ಸಂದರ್ಭ ಸ್ವಯಂಸೇವಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಅನಿಸಿಕೆ: ಸಸಿ ಫಲಾನುಭವಿ ಭವಾನಿ ಪೈ ಮಾತ ನಾಡಿ, ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಆಮ್ಲಜನಕ ಕೊರತೆಯಾಗಿದೆ. ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸು ವಂತೆ ದೆಹಲಿಯಲ್ಲಿ ಅಲ್ಲಲ್ಲಿ ಆಕ್ಸಿಜನ್(ಆಮ್ಲಜನಕ) ಬಂಕ್‍ಗಳನ್ನು ತೆರೆದಿದ್ದು, ಜನರು ಅಲ್ಲಿಗೆ ಹೋಗಿ ಆಮ್ಲಜನಕ ಪಡೆದುಕೊಳ್ಳುತ್ತಿರುವ ಸುದ್ದಿ ಕೇಳಿ ಭಯ ವಾಯಿತು ಎಂದರು. ಅಂತಹಾ ಆಘಾತಕಾರಿ ಸ್ಥಿತಿ ಮೈಸೂರಿಗೆ ಬಾರದಿರಲಿ, ನಗರದ ಜನರು ಉತ್ತಮ ಆಮ್ಲಜನಕ ಪಡೆದು ಆರೋಗ್ಯವಾಗಿರಲಿ ಎಂಬ ದೂರಾಲೋಚನೆಯಿಂದ ಸ್ವಾಮಿ ಮುಕ್ತಿದಾನಂದ ಜಿ ಮಹಾರಾಜ್ ಅವರು ಉಚಿತ ಸಸಿ ವಿತರಣೆ ಅಭಿ ಯಾನ ಆರಂಭಿಸಿದರು. ಅವರು ನೀಡಿದ ಸಸಿಗಳನ್ನು ಚೆನ್ನಾಗಿ ಪೋಷಿಸುತ್ತಿದ್ದೇನೆ. ಮನೆಯ ಅಂಗಳದಲ್ಲಿನ ಸಸಿಗಳು ಮನಸ್ಸಿಗೆ ತಂಪು ನೀಡುತ್ತವೆ ಎಂದರು.

ಹಣ್ಣುಗಳನ್ನು ತಿಂದ ಬಳಿಕ ಅದರ ಬೀಜಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಸಂಗ್ರಹಿಸಿಟ್ಟು ಕೊಂಡು, ಹೊರಹೋಗುವಾಗ ರಸ್ತೆಬದಿ ಎಸೆದರೆ ಅಲ್ಲಿ ಹಣ್ಣಿನ ಗಿಡಗಳು ಹುಟ್ಟುತ್ತವೆ. ಎಲ್ಲರೂ ಹೀಗೆ ಮಾಡೋಣ ಎಂದು ಮನವಿ ಮಾಡಿದರು.

ಲೋಕೇಶ್ ಮಾತನಾಡಿ, ಶ್ರೀ ರಾಮಕೃಷ್ಣ ಆಶ್ರಮ ಮಾತ್ರ ಹಸಿರಾಗಿದ್ದರೆ ಸಾಲದು. ಮೈಸೂರು ನಗರ ವನ್ನು ಹಸಿರಾಗಿಸಬೇಕೆಂಬ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರ ಕನಸು ನನಸಾಗಿದೆ. 6,785 ಜನರಿಗೆ 41,209 ಸಸಿಗಳನ್ನು ವಿತರಿಸುವುದು ಸಾಮಾನ್ಯವಲ್ಲ. ಇಂಥ ಬೃಹತ್ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮ ಯಶಸ್ವಿಯಾಗಿದೆ. ನಾನು ಪಡೆದ ಗಿಡಗಳನ್ನು ಮಗುವಿನಂತೆ ಪೋಷಿಸುತ್ತಿದ್ದೇನೆ ಎಂದು ಅನಿಸಿಕೆ ಹಂಚಿಕೊಂಡರು.

ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವ ಸ್ಥಾಪಕ ರಾಹುಲ್ ಅಗರ್ವಾಲ್, ಮೈಸೂರು ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾ ರಾಜ್, ಭೂದೇವಿ ಫಾರಂನ ಬಾಬು ಉಪಸ್ಥಿತರಿದ್ದರು.

Translate »