ರಂಗಾಯಣ ನಿರ್ದೇಶಕರ ಪರ-ವಿರೋಧ ಪ್ರತಿಭಟನೆ; ಕೆಲಕಾಲ ಉದ್ವಿಗ್ನ ಸ್ಥಿತಿ
ಮೈಸೂರು

ರಂಗಾಯಣ ನಿರ್ದೇಶಕರ ಪರ-ವಿರೋಧ ಪ್ರತಿಭಟನೆ; ಕೆಲಕಾಲ ಉದ್ವಿಗ್ನ ಸ್ಥಿತಿ

December 30, 2021

ಮೈಸೂರು,ಡಿ.29(ಪಿಎಂ)-ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಪರ-ವಿರೋಧ ಪ್ರತಿಭಟನಾಕಾರರು ಒಂದೇ ಕಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಇಲ್ಲಿನ ರಂಗಾಯಣದ ಮುಖ್ಯದ್ವಾರದಲ್ಲಿ ಬುಧವಾರ ನಿರ್ಮಾಣವಾಗಿತ್ತು.
ರಂಗಾಯಣದ ನಿರ್ದೇಶಕ ಸ್ಥಾನದಿಂದ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಂಗಾಯಣ ಉಳಿಸಿ ಹೋರಾಟ ಸಮಿತಿಯವರು ಜಲದರ್ಶಿನಿ ಅತಿಥಿಗೃಹದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ರಂಗಾಯಣದ ಮುಖ್ಯದ್ವಾರದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್‍ಕುಮಾರ್ ನೇತೃತ್ವದ ತಂಡವೂ ಅದೇ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿತು.ರಂಗಾಯಣದ ಮುಖ್ಯದ್ವಾರದ ಗೇಟ್‍ನ ಎರಡೂ ಬದಿಗಳಲ್ಲಿ ಪ್ರತ್ಯೇಕ ಪ್ರತಿಭಟನೆ ಆರಂಭ ಗೊಂಡು. ಪರ-ವಿರೋಧ ಪ್ರತಿಭಟನಾಕಾರರು ಮುಖಾಮುಖಿಯಾದ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ರಂಗಾಯಣ ಉಳಿಸಿ ಹೋರಾಟ ಸಮಿತಿ ಪರವಾಗಿ ರಂಗಕರ್ಮಿ ಹೆಚ್.ಜನಾರ್ಧನ್ ಕುವೆಂಪು ಗೀತೆ ಹಾಡುತ್ತಿದ್ದರೆ, ಮೈ.ಕಾ.ಪ್ರೇಮ್‍ಕುಮಾರ್ ತಂಡ ದಿಂದ ಡೋಂಗಿ ಪ್ರಗತಿಪರರಿಗೆ ಧಿಕ್ಕಾರ ಘೋಷಣೆಗಳು ಮೊಳಗಿದವು. ಈ ವೇಳೆ ಮೈ.ಕಾ. ಪ್ರೇಮ್‍ಕುಮಾರ್ ಅವರಿಗೆ ಪ್ರತಿಭಟನೆ ಕೈಬಿಡು ವಂತೆ ಪೊಲೀಸರು ತಿಳಿಹೇಳಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಿನ್ನೆ ನಿಮ್ಮ ಮಾತಿಗೆ ಗೌರವ ಕೊಟ್ಟು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇವೆ. ಅವರು ಪ್ರತಿಭಟನೆ ಮಾಡುವುದಾದರೆ ನಾವು ಮಾಡುತ್ತೇವೆ. ಅವರಿ ಗೊಂದು ಕಾನೂನು-ನಮಗೊಂದು ಕಾನೂನು ಇದೆಯೇ? ಎಂದು ಪೊಲೀಸರ ಮಾತಿಗೆ ಬಗ್ಗದೇ ಮೈ.ಕಾ.ಪ್ರೇಮ್‍ಕುಮಾರ್ ಸ್ಥಳದಲ್ಲೇ ಕುಳಿತರು.

ರಂಗಾಯಣ ಉಳಿಸಿ ಹೋರಾಟ ಸಮಿತಿ ಪರವಾಗಿ ಸಾಹಿತಿ ಪೆÇ್ರ.ಅರವಿಂದ ಮಾಲಗತ್ತಿ ಮಾತನಾಡುತ್ತಿದ್ದರೆ, ಇತ್ತ ಇವರ ವಿರೋಧಿ ಬಣ, ಎಡಬಿಡಂಗಿ ವಿಚಾರವಾದಿಗಳಿಗೆ ಧಿಕ್ಕಾರ, ಡೋಂಗಿ ಹೋರಾಟಗಾರರಿಗೆ ಧಿಕ್ಕಾರ, ಹಿಂದುತ್ವದ ಹುಲಿ ಅಡ್ಡಂಡ ಕಾರ್ಯಪ್ಪರಿಗೆ ಜಯವಾಗಲಿ, ಜೈ ಶ್ರೀರಾಮ್ ಜೈ ಶ್ರೀರಾಮ್ ಎನ್ನುವ ಘೋಷಣೆ ಮೊಳಗಿಸಿದರು. ಇದರಿಂದ ಗದ್ದಲದ ವಾತಾ ವರಣ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸಿಪಿ ಶಿವಶಂಕರ್, ಎರಡು ಕಡೆಯ ವರಿಗೆ ಪ್ರತಿಭಟನೆ ನಿಲ್ಲಿಸುವಂತೆ ಹೇಳಿದರು. ಮೊನ್ನೆ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದೀರಿ. ಈ ಸ್ಥಳದ ಬದಲು ಬೇಕಿದ್ದರೆ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿಕೊಳ್ಳ ಬಹುದೆಂದು ರಂಗಾಯಣ ಉಳಿಸಿ ಹೋರಾಟ ಸಮಿತಿಯವರಿಗೆ ಎಸಿಪಿಯವರು ತಿಳಿಸಿದರು.

ಇದಕ್ಕೆ ನಿರಾಕರಿಸಿದ ಸಮಿತಿಯ ಪ.ಮಲ್ಲೇಶ್, ಸರ್ಕಾರ ಅವರನ್ನು ರಂಗಾಯಣದಿಂದ ಕಳುಹಿ ಸುವ ತನಕ ಇಲ್ಲೇ ಹೋರಾಟ ಮಾಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಶಿವಶಂಕರ್, ಪ್ರತಿಭಟನೆಗೆ ಇದು ಸೂಕ್ತ ಸ್ಥಳವಲ್ಲ. ರಂಗಾಯಣದ ನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳುವುದು ನಮ್ಮ ವಿಚಾರವಲ್ಲ. ಎರಡು ಕಡೆಯವರು ಒಂದೇ ಕಡೆ ಪ್ರತಿಭಟನೆ ಮಾಡಿದರೆ ಕಾನೂನು ಸುವ್ಯವಸ್ಥೆ ಹಾಳಾಗಲಿದೆ. ಅದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ ಎಂದು ಎಚ್ಚರಿಕೆ ನೀಡಿದರು.

ಕೊನೆಗೆ ಪ್ರತಿಭಟನಾಕಾರರನ್ನು ಬಂಧಿಸಲು ಸಜ್ಜಾದ ಪೆÇಲೀಸರು ಎರಡು ಸಿಎಆರ್ ವಾಹನ ಗಳನ್ನು ಎರಡು ಕಡೆಯವರ ಎದುರಿಗೆ ತಂದು ನಿಲ್ಲಿಸಿದರು. ಪ್ರತಿಭಟನೆಗೆ ಅಂತ್ಯ ಹಾಡಲೇಬೇಕೆಂದು ನಿಶ್ಚಯಿಸಿದ್ದ ಎಸಿಪಿ ಶಿವಶಂಕರ್ ಬಂಧಿಸುವ ಎಚ್ಚರಿಕೆ ನೀಡಿದರು. ಈ ವೇಳೆ ಪ್ರತಿಭಟನೆಯ ಸಮಯ ಮುಗಿಯಿತೆಂದು ರಂಗಾಯಣ ಉಳಿಸಿ ಹೋರಾಟ ಸಮಿತಿಯವರು ಸ್ಥಳದಿಂದ ನಿರ್ಗಮಿಸಿದರು. ಮತ್ತೊಂದೆಡೆ ಮೈ.ಕಾ.ಪ್ರೇಮ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿವಶಂಕರ್, ಪ್ರತಿಭಟನೆ ಕೈಬಿಟ್ಟು ಹೊರಡಬೇಕು ಎಂದು ಸೂಚಿಸಿದರು. ನಾಳೆಯೂ ಅವರು ಇಲ್ಲಿ ಪ್ರತಿಭಟನೆ ಮುಂದುವರೆಸಿದರೆ ನಾವು ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿ ಮೈ.ಕಾ.ಪ್ರೇಮ್ ಕುಮಾರ್ ತಂಡ ಪ್ರತಿಭಟನೆ ಕೈಬಿಟ್ಟಿತು.

Translate »