ಪದ್ಮಶ್ರೀ ಪುರಸ್ಕøತ ‘ಸುಧರ್ಮ’ ಸಂಪಾದಕಿ ಜಯಲಕ್ಷ್ಮೀ ಅವರಿಗೆ ಅಭಿನಂದನೆ
ಮೈಸೂರು

ಪದ್ಮಶ್ರೀ ಪುರಸ್ಕøತ ‘ಸುಧರ್ಮ’ ಸಂಪಾದಕಿ ಜಯಲಕ್ಷ್ಮೀ ಅವರಿಗೆ ಅಭಿನಂದನೆ

December 30, 2021

ಮೈಸೂರು, ಡಿ.29(ಜಿಎ)- ಸಂಸ್ಕøತ ಯಾವುದೇ ಒಂದು ಜಾತಿಗೆ ಸೇರಿದ ಭಾಷೆಯಲ್ಲ, ಅದು ಸಂಸ್ಕøತಿಯ ಭಾಷೆ. ವೇದ-ಉಪನಿಷತ್ತು ಮತ್ತು ಇತಿಹಾಸಗಳ ಭಾಷೆಯಾಗಿದೆ ಎಂದು ಮೇಲುಕೋಟೆಯ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ತಿಳಿಸಿದರು.

ನಗರದ ಲಕ್ಷ್ಮೀಪುರಂನ ಕಾಂತರಾಜ ಅರಸ್ ರಸ್ತೆಯಲ್ಲಿರುವ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಾನುಜ ಅಭ್ಯುದಯ ಸಹಕಾರ ಸಂಘ ಮತ್ತು ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕøತರಾದ ಸುಧರ್ಮ ಪತ್ರಿಕೆಯ ಸಂಪಾದಕಿ ಕೆ.ಎಸ್. ಜಯಲಕ್ಷ್ಮೀ ಸಂಪತ್‍ಕುಮಾರ್ ಅವರನ್ನು ಅಭಿನಂದಿಸಿ, ಮಾತನಾಡುತ್ತಿದ್ದರು.
ಪ್ರತಿ ಬಾರಿ ಮೈಸೂರಿಗೆ ಭೇಟಿ ನೀಡಿದಾ ಗಲೂ ಸಂತಸವಾಗುತ್ತದೆ. ಇಲ್ಲಿನ ಪರಿಸರ ನನ್ನ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಮೈಸೂರು ಎಂದ ತಕ್ಷಣ ನೆನಪಿಗೆ ಬರುವುದು ಮೈಸೂ ರಿನ ಅಮೋಘವಾದ ಅರಮನೆ, ಸಂಸ್ಕøತ ಪಾಠ ಶಾಲೆ, ಮಾನಸಗಂಗೋತ್ರಿ ಹೀಗೆ ಅನೇಕ ವಿಶೇಷತೆಗಳಿಂದ ಕೂಡಿದೆ. ಸಂಸ್ಕøತಿ, ಕಲೆ, ಸಾಹಿತ್ಯ ಎಲ್ಲದರ ಸಂಗಮವೇ ಮೈಸೂರು. ಈ ಮೈಸೂರಿನಲ್ಲಿ ಅನೇಕ ಸಂಸ್ಥೆಗಳು ಅರಳಿವೆ ಅಂತಹ ಪುಷ್ಪಗಳ ಸಾಲಿಗೆ 1970ರಲ್ಲಿ ಸಹಸ್ರದಳದ ಕಮಲ ಅರಳಿತು. ಅದುವೇ ‘ಸುಧರ್ಮ’ ಸಂಸ್ಕøತ ಪತ್ರಿಕೆ ಎಂದು ಅವರು ತಿಳಿಸಿದರು.

ಮೈಸೂರು ಅನೇಕ ಪತ್ರಿಕೆಗಳಿಗೆ ಹೆಸರು ವಾಸಿಯಾಗಿದೆ. ಮೈಸೂರಿನಲ್ಲಿ ಎಲ್ಲದಕ್ಕೂ ಇತಿಹಾಸ ಪರಂಪರೆ ಇದೆ. ‘ಸುಧರ್ಮ’ ಪತ್ರಿಕೆಯ ಯಾತ್ರೆ ಅತ್ಯಂತ ರೋಚಕವಾಗಿದ್ದು, ಇಂದಿನ ಈ ಸಮಾರಂಭದಲ್ಲಿ ಪತ್ರಿಕೆಯ ಸಂಸ್ಥಾಪಕರಾದ ಕೆ.ಎನ್. ವರದರಾಜು ಮತ್ತು ಸಂಪತ್‍ಕುಮಾರ್ ಅವರಿಬ್ಬರು ಇರ ಬೇಕಾಗಿತ್ತು. ಏಕೆಂದರೆ ಇದು ಕೇವಲ ಮೈಸೂರಿಗೆ ಮಾತ್ರ ಸಂಭ್ರಮವಲ್ಲ ಇಡೀ ಸಂಸ್ಕøತ ಲೋಕಕ್ಕೆ ಸಂಭ್ರಮವಾಗಿದೆ. ಪತ್ರಿಕೆ ಮೈಸೂರಿನಿಂದ ಪ್ರಕಟವಾಗುತ್ತಿದೆ ಎಂದರೆ ಅದು ಮೈಸೂರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.

ಇದೇ ವೇಳೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕøತರಾದ ಸುಧರ್ಮ ಪತ್ರಿಕೆ ಸಂಪಾದಕಿ ಕೆ.ಎಸ್. ಜಯ ಲಕ್ಷ್ಮೀ ಸಂಪತ್‍ಕುಮಾರ್, ನಾನು ಇಂದು ಈ ಸಮಾರಂಭದಲ್ಲಿ ಭಾಗವಹಿಸಿರುವುದು ಮತ್ತೊಂದು ಪದ್ಮಶ್ರೀ ಪ್ರಶಸ್ತಿ ಸ್ವೀಕಾರದ ಸಮಾರಂಭದ ರೀತಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಪತ್‍ಕುಮಾರ್ ಅವರನ್ನು ಮದುವೆ ಆದ ಆರಂಭದ ದಿನಗಳಲ್ಲಿ ಪತ್ರಿಕೆಗಾಗಿ ಹಗಲು-ರಾತ್ರಿ ದುಡಿಯುತ್ತಿದ್ದರು. ನನಗೆ ಸಂಸ್ಕøತ ಮತ್ತು ಪತ್ರಿಕೆಯ ಬಗ್ಗೆ ಅರಿವಿರ ಲಿಲ್ಲ ಅವರು ಮಾಡುತ್ತಿದ್ದ ಕೆಲಸ ನೋಡಿ ಅವರಿಗೆ ಸಹಾಯಕವಾಗಿ ನಾನು ಅವರೊ ಟ್ಟಿಗೆ ಪತ್ರಿಕೆ ಕೆಲಸವನ್ನು ಆರಂಭಿಸಿದೆ. ತದ ನಂತರ ಪತ್ರಿಕೆಯ ಬಗ್ಗೆ ಅರಿವು ಹೆಚ್ಚಾ ಯಿತು. ನಮ್ಮ ಪತಿ ಕಡೆ ಕ್ಷಣದವರೆಗೂ ಪತ್ರಿಕೆಗಾಗಿ ಶ್ರಮಿಸಿದರು ಎಂದು ಪತಿ ಸಂಪತ್‍ಕುಮಾರ್ ಅವರನ್ನು ಸ್ಮರಿಸಿ ಕೊಂಡರು. ಕಾರ್ಯಕ್ರಮದಲ್ಲಿ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರ ಮದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮಿ, ಮೇಲುಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮಿ, ಕರ್ನಾ ಟಕ ಸಂಸ್ಕøತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ.ಈ. ದೇವನಾಥನ್, ಸುಧರ್ಮ ಪತ್ರಿಕೆ ಗೌರವ ಸಂಪಾದಕ ವಿದ್ವಾನ್ ಡಾ. ಹೆಚ್.ವಿ.ನಾಗರಾಜರಾವ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹಿರಿಯ ಸಮಾಜ ಸೇವಕ ರಘುರಾಂ ವಾಜ ಪೇಯಿ ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ ಅಧ್ಯಕ್ಷ ಎನ್.ವಿ. ಫಣೀಶ್, ಆರ್.ಎಸ್.ಎಸ್. ವಿಭಾಗಿಯ ಪ್ರಮುಖ್ ವೆಂಕಟರಾಮ್‍ಜೀ ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂಧನ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ವಿಕ್ರಂ ಅಯ್ಯಂಗಾರ್ ಮತ್ತಿತರರು ಪಾಲ್ಗೊಂಡಿದ್ದರು.

Translate »