ಒಂದು ಜನಾಂಗಕ್ಕಷ್ಟೇ ಸೀಮಿತರಾಗದೇ ಎಲ್ಲಾ   ಜನಾಂಗ, ಕ್ಷೇತ್ರಗಳ ಸಾಧಕ: ಹೆಚ್.ವಿ.ರಾಜೀವ್
ಮೈಸೂರು

ಒಂದು ಜನಾಂಗಕ್ಕಷ್ಟೇ ಸೀಮಿತರಾಗದೇ ಎಲ್ಲಾ  ಜನಾಂಗ, ಕ್ಷೇತ್ರಗಳ ಸಾಧಕ: ಹೆಚ್.ವಿ.ರಾಜೀವ್

January 19, 2021

ಶ್ರೀ ಬಾಲಗಂಗಾಧರನಾಥ ಶ್ರೀಗಳ 76ನೇ ಜಯಂತಿ ಮಹೋತ್ಸವ

ಮೈಸೂರು, ಜ.18(ಆರ್‍ಕೆಬಿ)- ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಒಂದು ಜನಾಂಗ ಕ್ಕಷ್ಟೇ ಸೀಮಿತರಾಗದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರ್ರಗಳ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಾಧಕ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಮೈಸೂರಿನ ಕುವೆಂಪುನಗರದ ಆದಿ ಚುಂಚನಗಿರಿ ರಸ್ತೆಯ ಶ್ರೀ ಬಾಲಗಂಗಾ ಧರನಾಥ ಸ್ವಾಮೀಜಿ ವೃತ್ತದಲ್ಲಿ ಅವರ ಭಕ್ತವೃಂದ ಸೋಮವಾರ ಆಯೋಜಿಸಿದ್ದ ಶ್ರೀಗಳ 76ನೇ ಜಯಂತಿ ಕಾರ್ಯಕ್ರಮಕ್ಕೆ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಸುವ ಮೂಲಕ ಚಾಲನೆ ನೀಡಿ ಮಾತ ನಾಡಿದರು. ಬಾಲಗಂಗಾಧರನಾಥ ಸ್ವಾಮೀಜಿ ಯವರ ಸಾಧನೆಯ ಹಾದಿ ಬಲು ದೊಡ್ಡದು. ಅವರ ಆದರ್ಶಗಳನ್ನು ಪಾಲಿಸುತ್ತಾ, ಅವರ ಹಾದಿಯಲ್ಲೇ ನಿರ್ಮಲಾನಂದನಾಥ ಸ್ವಾಮೀಜಿಯವರು ಸಾಗುತ್ತಿದ್ದಾರೆ ಎಂದರು.

ಚಿಂತಕ ರಘುರಾಂ ಕೆ.ವಾಜಪೇಯಿ ಮಾತನಾಡಿ, ಒಬ್ಬ ವ್ಯಕ್ತಿಯ ಜೀವಿತಾವಧಿ ಯಲ್ಲಿ ಇಷ್ಟೆಲ್ಲಾ ಸಾಧನೆ ಸಾಧ್ಯವೇ ಎಂದು ಆಶ್ಚರ್ಯಪಡುವವರಿಗೆ ಸಾಧನೆ ಮಾಡಿ ತೋರಿಸಿದವರು ಬಾಲಗಂಗಾಧರನಾಥ ಶ್ರೀಗಳು. ಕೇವಲ ಶಿಶುವಿಹಾರ, ಪ್ರಾಥ ಮಿಕ ಶಿಕ್ಷಣದ ಶಾಲೆಗೆ ಸೀಮಿತಗೊಂಡಿದ್ದ ಶ್ರೀ ಕ್ಷೇತ್ರದ ಶಿಕ್ಷಣವನ್ನು ಪ್ರೌಢಶಾಲೆ, ಕಾಲೇಜು, ಅನಾಥಾಲಯ, ವಸತಿ ಶಿಕ್ಷಣ ಸಂಸ್ಥೆ, ಇಂಜಿನಿಯರಿಂಗ್, ವೈದ್ಯಕೀಯ ಸಂಸ್ಥೆ ಗಳು ಹಾಗೂ ಜಾಗತಿಕ ಗುಣಮಟ್ಟದ ಬಿಜಿಎಸ್ ಆಸ್ಪತ್ರೆ, ಇತ್ತೀಚೆಗೆ ಬಿಜಿಎಸ್ ವಿಶ್ವವಿದ್ಯಾಲಯ ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ವಿಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಮಾತನಾಡಿ, ಮಠಗಳಿ ರುವುದು ಗುರುಗಳಿಗಲ್ಲ, ಜನರಿಗೆ ಎಂಬುದು ಅವರ ಆದರ್ಶವಾಗಿತ್ತು. ಆದಿಚುಂಚನ ಗಿರಿ ಕ್ಷೇತ್ರ ಇಡೀ ದೇಶದ ಜನರ ಗಮನ ಸೆಳೆದಿದೆ. ಚುಂಚನಗಿರಿಯನ್ನು ಚಿನ್ನದಗಿರಿ ಎಂಬಂತೆ ಮರು ಸೃಷ್ಟಿಸಿದ್ದಾರೆ. ಸೇವೆಯೇ ಪೂಜೆ ಎಂದು ಭಾವಿಸಿ, ಜನಮುಖಿ ಚಿಂತಕ ರಾಗಿದ್ದವರು ಶ್ರೀಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದ ರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜು, ಮುಡಾ ಸದಸ್ಯೆ ಎಂ. ಲಕ್ಷ್ಮೀದೇವಿ, ಶ್ರೀಗಳ ಭಕ್ತವೃಂದ ಸಂಚಾ ಲಕರಾದ ಕುಮಾರ್‍ಗೌಡ, ವಿನಯ್ ಬಾಬು, ಚರಣ್‍ರಾಜ್, ಬೆಟ್ಟೇಗೌಡ, ಆನಂದ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ.ಎಂ.ಪಂಚಾಕ್ಷರಿ, ದೇವರಾಜ್, ಸುಚೀಂದ್ರ, ಸಂತೋಷ್ ಗೌಡ, ರವೀಂದ್ರ, ಮೋಹನ್‍ಕುಮಾರ್ ಗೌಡ, ವಿನಯ್ ಕಣಗಾಲ್, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.

 

 

 

 

 

 

 

 

 

 

Translate »