ಪ್ರೊ. ಬಿ.ಷೇಕ್ ಅಲಿ ಇನ್ನಿಲ್ಲ
ಮೈಸೂರು

ಪ್ರೊ. ಬಿ.ಷೇಕ್ ಅಲಿ ಇನ್ನಿಲ್ಲ

September 2, 2022

ಮೈಸೂರು, ಸೆ.1(ಆರ್‍ಕೆ)-ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾ ನಿಲಯಗಳ ವಿಶ್ರಾಂತ ಕುಲಪತಿ ಪ್ರೊ. ಬಿ.ಷೇಕ್ ಅಲಿ(98) ಅವರು ವಯೋ ಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ ಮೈಸೂ ರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಹಾಸನ ಜಿಲ್ಲೆಯ ಬೆಳ ಗೋಡು ಮೂಲದ ಪ್ರೊ.ಷೇಕ್ ಅಲಿ ಅವರು, ಮೈಸೂರಿನ ಸರಸ್ವತಿ ಪುರಂ 7ನೇ ಮೇನ್, 3ನೇ ಕ್ರಾಸ್‍ನಲ್ಲಿ ವಾಸವಿ ದ್ದರು. ಪುತ್ರ, ಪುತ್ರಿ, ಸ್ನೇಹಿತರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಾಗುವಂತೆ ಸರಸ್ವತಿ ಪುರಂನ ಮುಸ್ಲಿಂ ವಿದ್ಯಾರ್ಥಿನಿಲಯದಲ್ಲಿ ಕೆಲಕಾಲ ಇರಿಸಿ, ಅಲ್ಲಿಯೇ ಅಂತಿಮ ವಿಧಿ-ವಿಧಾನ, ಪ್ರಾರ್ಥನೆ ನೆರವೇರಿಸಿ, ಸಂಜೆ ಟಿಪ್ಪು ಸರ್ಕಲ್ ಬಳಿಯ ಕೇಂದ್ರ ಕಾರಾಗೃಹದ ಹಿಂಭಾಗದ ಮುಖ್ಯ ಕಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸರಸ್ವತಿಪುರಂನ ಮುಸ್ಲಿಂ ಹಾಸ್ಟೆಲ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪ್ರೊ. ಷೇಕ್ ಅಲಿ ಅವರ ನಿಧನಕ್ಕೆ ಮಾಜಿ ಮುಖ್ಯ ಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಶಾಸಕ ತನ್ವೀರ್ ಸೇಠ್, ಸೆಂಟ್ರಲ್ ಮುಸ್ಲಿಂ ಅಸೋಸಿ ಯೇಷನ್ ಆಫ್ ಕರ್ನಾಟಕ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮ್ಯಾನೇಜಿಂಗ್ ಕಮಿಟಿ, ತಹಫುಜ್-ಇ-ಖಬರ್‍ಸ್ತಾನ್ ತೀವ್ರ ಸಂತಾಪ ಸೂಚಿಸಿದ್ದಾರೆ. ಇವರು ಕನ್ನಡ ವಿವಿ ಪ್ರಕಟಿಸಿರುವ `ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರಾ ಗಿದ್ದರು. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ `ಸುವರ್ಣ ಮಹೋತ್ಸವ ಪ್ರಶಸ್ತಿ’ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಕೆಬಿಜಿ ಸಂತಾಪ: ಪ್ರೊ. ಷೇಕ್ ಅಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರು, ಪ್ರೊ. ಶೇಕ್ ಅಲಿ ವಿದ್ವಾಂಸರು, ಖ್ಯಾತ ಬರಹಗಾರ ಹಾಗೂ ವಾಗ್ಮಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದರು. ಇತ್ತೀಚೆಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ `ಂಠಿosಣಟe oಜಿ ಒeಡಿಛಿಥಿ’ ಪುಸ್ತಕವನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡಿದ್ದು, ಅದು 2022ರಲ್ಲಿ ಪ್ರಕಟಗೊಂಡಿದೆ. ಪ್ರೊ. ಅಲಿ ಅವರು ಮಾನಸ ಗಂಗೋತ್ರಿಯಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾಗ ನಾನೊಬ್ಬ ಪತ್ರಕರ್ತನಾಗಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ. ಅವರು ಮೃದು ಭಾಷಿ, ಸದಾ ಹಸನ್ಮುಖಿ ಎಂದು ಅವರ ಗುಣಗಾನ ಮಾಡಿದ್ದಾರೆ. ಅವರು `ಂಠಿosಣಟe oಜಿ ಒeಡಿಛಿಥಿ’ ಪುಸ್ತಕದ ಪ್ರತಿಯೊಂದನ್ನು ನನಗೆ ನೀಡುವಾಗ ಅದರೊಂದಿಗೆ ಟಿಪ್ಪಣಿಯನ್ನು ಬರೆದು ಕಳುಹಿಸಿದ್ದರು. ಅದರಲ್ಲಿ ಅವರು, `ಗೌರವಾನ್ವಿತ `ಕೆಬಿಜಿ’ ಅವರಿಗೆ ಶುಭ ಹಾರೈಕೆಗಳು. ಪುಸ್ತಕ ಪ್ರೇಮಿಯೂ ಆಗಿ, ನೀವು ಹೊರ ತರುತ್ತಿರುವ ಸಂಜೆ ದಿನ ಪತ್ರಿಕೆಯು ಅತ್ಯಂತ ಮೌಲ್ಯಯುತವಾಗಿದ್ದು, ಈ ಪತ್ರಿಕೆಯು ದೇಶದ ಇನ್ನಿತರ ಮಾಧ್ಯಮಗಳಿಗೆ ಮಾದರಿಯಾಗಿದೆ’ ಎಂದು ನಮೂದಿಸಿದ್ದರು. ಈ ಟಿಪ್ಪಣಿಯನ್ನು ಪ್ರೊ. ಷೇಕ್ ಅಲಿ ಅವರು 2022ರ ಮೇ 11ರಂದು ಬರೆದಿದ್ದರು ಎಂದು ಕೆಬಿಜಿ ಸ್ಮರಿಸಿದ್ದಾರೆ.

ಆದರೆ ದುರಾದೃಷ್ಟವಶಾತ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ನಿಧನ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರ್ವಾತವನ್ನೇ ಸೃಷ್ಟಿಸಿದೆ. ಸಮುದಾಯ ಸೇವೆಗೂ ಭಾರೀ ಹಿನ್ನಡೆಯಾದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕುರಿತು ಅಪಾರ ಜ್ಞಾನ ಹೊಂದಿದ್ದ ಪ್ರೊ. ಷೇಕ್ ಅಲಿ, ಅಲಿಘರ್‍ನಲ್ಲಿ 1949ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, ಅಲ್ಲಿಯೇ ಮೊದಲ ಪಿಹೆಚ್‍ಡಿ ಹಾಗೂ ಎರಡನೇ ಪಿಹೆಚ್‍ಡಿ ಪದವಿಯನ್ನು ಲಂಡನ್ ವಿಶ್ವವಿದ್ಯಾನಿಲಯದಲ್ಲಿ 1960ರಲ್ಲಿ ಪಡೆದಿದ್ದರು. ಇಂಗ್ಲಿಷ್, ಕನ್ನಡ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದರಲ್ಲದೆ, ಮೈಸೂರು ಮೂಲದ ಇತಿಹಾಸಕಾರರಾಗಿ ಕರ್ನಾಟಕ ಮತ್ತು ಭಾರತ ಕುರಿತ 30ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದರು. 1968ರಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್‍ನ 47ನೇ ಗೋಷ್ಠಿ ಅಧ್ಯಕ್ಷರಾಗಿದ್ದರಲ್ಲದೆ, ಕರ್ನಾಟಕ ಇತಿಹಾಸ ಕಾಂಗ್ರೆಸ್ ಸ್ಥಾಪಿಸಿದ್ದ ಅವರು, ಶೈಕ್ಷಣಿಕ, ಆಡಳಿತಾತ್ಮಕವಾಗಿ ಉತ್ತಮ ಸೇವಾ ಸಾಮಥ್ರ್ಯ ಹೊಂದಿದ್ದರು. ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಉತ್ತಮ ಸೇವೆ ಸಲ್ಲಿಸಿದ್ದರು.

ಚಿಕ್ಕಮಗಳೂರಿನ ಮೌಂಟನ್ ವ್ಯೂ ಚೈನ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷರಾಗಿದ್ದ ಅವರು, ನರ್ಸರಿಯಿಂದ ಪದವಿ ತರಗತಿವರೆಗೆ 2,500 ವಿದ್ಯಾರ್ಥಿಗಳಿರುವ ಈ ಸಂಸ್ಥೆಯಲ್ಲಿ ಬಾಲಕ-ಬಾಲಕಿಯರಿಗೆ ಹಾಸ್ಟೆಲ್ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದಾರೆ. ಮೈಸೂರಿನ ಮುಸ್ಲಿಂ ಎಜುಕೇಷನ್ ಸೊಸೈಟಿ ಅಧ್ಯಕ್ಷರಾಗಿ ಡಜನ್‍ಗೂ ಅಧಿಕ ನರ್ಸರಿ, ಪ್ರೈಮರಿ ಶಾಲೆಗಳನ್ನು ಆರಂಭಿಸಿದ್ದು, ಅವು ಈಗ ಪ್ರಥಮ ದರ್ಜೆ ಕಾಲೇಜು ಮಟ್ಟಕ್ಕೆ ಬೆಳೆದಿವೆ. `ಡೈಲಿ ಸಲಾರ್’ ಮತ್ತು `ವೀಕ್ಲಿ ಸಲಾರ್’ ಸುದ್ದಿ ಪತ್ರಿಕೆಗಳ ಪ್ರಧಾನ ಸಂಪಾದಕರಾ ಗಿಯೂ ಪ್ರೊ. ಷೇಕ್ ಅಲಿ ಅವರು ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »