ಇಸ್ರೇಲ್ ಮಾದರಿ ಬೇಸಾಯಕ್ಕೆ ಉತ್ತೇಜನ
ಮೈಸೂರು

ಇಸ್ರೇಲ್ ಮಾದರಿ ಬೇಸಾಯಕ್ಕೆ ಉತ್ತೇಜನ

December 20, 2018

ಬೆಳಗಾವಿ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಇಸ್ರೇಲ್ ತಂತ್ರಜ್ಞಾನ ಆಧಾರಿತ ಬೇಸಾಯ ಕ್ರಮಕ್ಕೆ ಉತ್ತೇಜನ ನೀಡಲು ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದೆ. ಮುಂಗಡ ಪತ್ರದಲ್ಲಿ ಘೋಷಿಸಿರುವಂತೆ ರಾಜ್ಯದ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್ ಕೃಷಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಅಲ್ಪ ನೀರು ಬಳಸಿ ಹೆಚ್ಚು ಬೆಳೆ ತೆಗೆಯುವ ಪದ್ಧತಿ ಜಾರಿಗೆ ತರುವುದಲ್ಲದೆ, ಮಾರು ಕಟ್ಟೆಯಲ್ಲಿ ರೈತನ ಶ್ರಮಕ್ಕೆ ತಕ್ಕ ಬೆಲೆ ಕೊಡಿಸುವ ಯೋಜನೆಗೂ ಸಮ್ಮತಿ ದೊರೆತಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪಠ್ಯ ಪುಸ್ತಕಗಳ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿನ 4ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು. ಇದರೊಂ ದಿಗೆ ಸರ್ಕಾರಿ ಶಾಲೆಗಳಲ್ಲಿನ 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ದಿನಚರಿ ಪುಸ್ತಕಗಳನ್ನು ವಿತರಿಸಲು ಒಟ್ಟು 170 ಕೋಟಿ ರೂ. ಯೋಜನೆಗೆ ಅನುಮತಿ ನೀಡಲಾಗಿದೆ. ಜೀವಾವಧಿ ಶಿಕ್ಷೆ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೆ ಕೆಲವು ಮಾರ್ಗಸೂಚಿ ತರಲು ಸಂಪುಟ ಒಪ್ಪಿಗೆ ದೊರೆತಿದೆ. ಮೈಸೂರು-ಹಾಸನ ವಿಭಾಗ ವ್ಯಾಪ್ತಿಯ ಹೊಳೆನರಸೀಪುರ-ಮಾವಿನಕೆರೆ ರೈಲು ನಿಲ್ದಾಣದ ನಡುವೆ ಮೇಲು ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ 15.57 ಕೋಟಿ ರೂ. ಅಂದಾಜಿಗೆ ಹಸಿರು ನಿಶಾನೆ ತೋರಿದೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ 36.80 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಸರಬರಾಜು ಮಾಡಲು ಒಪ್ಪಿಗೆ ನೀಡಲಾಗಿದೆ.

Translate »