ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಸುಳ್ಳು ಆರೋಪ  ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಹಾಸನ

ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಸುಳ್ಳು ಆರೋಪ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

December 20, 2018

ಹಾಸನ: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿ ನಗರ ದಲ್ಲಿ ಬುಧವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡ ಬಿಜೆಪಿ ಕಾರ್ಯ ಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ದೇಶದ ಸೈನಿಕರನ್ನು ಮತ್ತು ಗಡಿ ಭದ್ರ ಪಡಿಸಿ ದೇಶದ ಜನರನ್ನು ರಕ್ಷಣೆ ಮಾಡ ಬೇಕು ಎಂಬ ಕಾರಣಕ್ಕಾಗಿ ರಫೆಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿ ಮಾಡಿ ಕೊಂಡಿರುವÀ ಒಪ್ಪಂದವನ್ನು ಕಾಂಗ್ರೆಸ್‍ನ ನಾಯಕರು ಬಹಿರಂಗಪಡಿಸಬೇಕು ಎಂದಿರುವುದು ರಾಷ್ಟ್ರದ್ರೋಹ ಎಂದು ಪರಿಗಣಿಸುವುದಾಗಿ ದೂರಿದರು.

ದೇಶದ ರಕ್ಷಣಾ ವ್ಯವಸ್ಥೆಯನ್ನು ವಿದೇಶ ಗಳಿಗೆ ಮಾಹಿತಿ ಸೋರಿಕೆ ಆಗಲಿ ಎಂಬ ಉದ್ದೇಶವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಂದಿದ್ದಾರೆ. ರಫೆಲ್ ವಿಮಾನ ಖರೀದಿಯಲ್ಲಿ ಯಾವ ಅವ್ಯವಹಾರವಾ ಗಲಿ, ದೋಷ ಇಲ್ಲದಿದ್ದರೂ ದೇಶದ ಜನರನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಸುಳ್ಳು ಮಾಹಿತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳಪೆ ಮಟ್ಟದಲ್ಲಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ರಫೆಲ್ ಯುದ್ಧ ವಿಮಾನ ವ್ಯವಹಾರ ದಲ್ಲಿ ಯಾವುದೇ ದೋಷವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಕಾಂಗ್ರೆಸ್ ನಾಯಕರು ರಕ್ಷಣಾತ್ಮಕ ವಿಚಾರ ವನ್ನು ಕೋರ್ಟಿಗೆ ತರತ್ತಿದ್ದಾರೆ. ಸುಳ್ಳು ಪ್ರಚಾರ ಮಾಡಿರುವ ರಾಹುಲ್‍ಗಾಂಧಿ ದೇಶದ ಶಾಂತಿ ವ್ಯವಸ್ಥೆಗೆ ಧÀಕ್ಕೆ ತರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವ ಅವರು ದೇಶ ವನ್ನು ಸಂರಕ್ಷಣೆ ಮಾಡುವ ಜವಬ್ದಾರಿ ಹೊಂದಿರುವ ಗೌಪ್ಯತೆಯನ್ನು ಕಾಪಾಡ ಬೇಕೆ ವಿನಃ ಅದನ್ನು ಬಹಿರಂಗ ಮಾಡು ವುದಕ್ಕೆ ಕುಮಕ್ಕು ನೀಡಬಾರದು ಎಂದು ತಿಳಿಸಿದರು.

ಬಿಜೆಪಿ ರೈತ ಮೋರ್ಚಾ ಮುಖಂಡ ರೇಣುಕುಮಾರ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದಂತಹ ಭ್ರಷ್ಟಾ ಚಾರವನ್ನು ಯಾವ ಪಕ್ಷವು ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿ ಅವರ ಸರ್ಕಾರ ಅತ್ಯಂತ ಅಚ್ಚುಕಟ್ಟಾಗಿ ಅಭಿವೃದ್ಧಿ ಕೆಲಸ ಮಾಡಿದೆ. ರಾಹುಲ್ ಗಾಂಧಿ ಅವರು ರಫೆಲ್ ವಿಮಾನ ಖರೀದಿ ಹಗರಣವನ್ನು ಇಟ್ಟುಕೊಂಡು ಅದರಲ್ಲಿ ಅವ್ಯವಹಾರವಿದೆ ಎಂದು ಆರೋಪಿಸಿ ರುವುದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಇನ್ನಾದರೂ ರಾಹುಲ್‍ಗಾಂಧಿ ಅವರು ಮೋದಿ ಮತ್ತು ಬಿಜೆಪಿ ಸರ್ಕಾರ ವನ್ನು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್. ನಾಗೇಶ್, ಮಾಜಿ ಅಧ್ಯಕ್ಷ ಚನ್ನಕೇಶವ, ರಾಜೇಶ್ ಇತರರು ಪಾಲ್ಗೊಂಡಿದ್ದರು.

Translate »