ಬೇಲೂರು: ಪಟ್ಟಣದಲ್ಲಿ ಡಿ.22ರಂದು ದತ್ತಮಾಲೆ ಮತ್ತು ಡಿ.26 ರಂದು ಹನುಮ ಜಯಂತಿ ಹಮ್ಮಿಕೊಂ ಡಿದ್ದು, ಕಾರ್ಯಕ್ರಮವನ್ನು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿ ಸಬೇಕು ಎಂದು ಬೇಲೂರು ವೃತ್ತ ನಿರೀ ಕ್ಷಕ ಲೋಕೇಶ್ ಹೇಳಿದರು.
ಪಟ್ಟಣದ ನೆಹರು ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ ಶಾಂತಿಸಭೆ ಯಲ್ಲಿ ಮಾತನಾಡಿದ ಅವರು, ದತ್ತಮಾಲೆ ಅಂಗವಾಗಿ ಸಕಲೇಶಪುರದ ಹಲವೆಡೆ ಯಿಂದ ಬೇಲೂರು ಮಾರ್ಗವಾಗಿ ದತ್ತ ಪೀಠಕ್ಕೆ ತೆರಳುವ ಕಾರಣ ಡಿ.22ರಂದು ಮದ್ಯದ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಪ್ರಚೋದನಾ ಕಾರಿ ಘೋಷಣೆ ಹಾಕದಂತೆ ನಿಷೇಧÀ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಪೋಲೀಸ್ ನಿಯೋಜನೆ ಮಾಡ ಲಾಗುತ್ತದೆ ಎಂದು ತಿಳಿಸಿದರು.
ಡಿ.26ರಂದು ಬೇಲೂರಿನಲ್ಲಿ ನಡೆ ಯುವ ಹನುಮ ಜಯಂತಿಗೆ ಕಳೆದ ವರ್ಷದಂತೆ ಈ ವರ್ಷವೂ ಮೆರವಣಿಗೆಗೆ ಅವಕಾಶ ನೀಡಿದೆ. ಆದರೆ, ಮೆರವಣಿಗೆ ಯನ್ನು ಶಾಂತಿಯಿಂದ ಹಾಗೂ ವಾಹನ ದಟ್ಟಣೆಯಾಗದಂತೆ ನಡೆಸಬೇಕು. ಬ್ಯಾನರ್ ಹಾಗೂ ಫ್ಲೆಕ್ಸ್ ಕಟ್ಟಲು ಅನುಮತಿ ಕಡ್ಡಾಯ ವಾಗಿದೆ. ಹನುಮ ಜಯಂತಿ ವೇಳೆ ಸ್ಥಳೀಯ ಮುಖಂಡರು ಹೆಚ್ಚಿನ ಆಸಕ್ತಿ ವಹಿಸಬೇಕು. ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಲಾಗಿದೆ ಎಂದರು.
ಲಕ್ಷ್ಮೀಪುರ ಶ್ರೀವೀರಾಂಜನೇಯಸ್ವಾಮಿ ದೇಗುಲ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಆರು ವರ್ಷ ದಿಂದ ಬೇಲೂರಿನಲ್ಲಿ ಹನುಮ ಉತ್ಸವ ಅತ್ಯಂತ ಅರ್ಥಪೂರ್ಣವಾಗಿ ಆಚರಿಸ ಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ಗಳಿಗೆ ಅವಕಾಶ ನೀಡದಂತೆ ಈಗಾಗಲೇ ಸಂಬಂಧಪಟ್ಟ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಹಾರ ಸಮಿತಿ ಮತ್ತು ಮೆರವಣಿಗೆ ಸಮಿತಿಗಳಲ್ಲಿ ಜವಬ್ದಾರಿ ಯಿಂದ ಕೆಲಸ ಮಾಡುವ ಮುಖಂq Àರನ್ನು ನೇಮಕ ಮಾಡಲಾಗಿದೆ ಎಂದರು.
ಡಿ.24ರಿಂದ 26ರವರೆಗೆ ಶಾಂತಿಯುತ ವಾಗಿ ಕಾರ್ಯಕ್ರಮ ಆಚರಿಸಲು ಅವಕಾಶ ನೀಡಬೇಕು. ಪೊಲೀಸ್ ಇಲಾಖೆ ಹಾಗೂ ಪುರಸಭೆ ಅನುಮತಿ ನೀಡಿದ ಸ್ಥಳದಲ್ಲಿ ಬ್ಯಾನರ್ ಕಟ್ಟಲಾಗುತ್ತದೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಮಂಜು ನಾಥ ಮಾತನಾಡಿ, ಹನುಮ ಜಯಂತಿಗೆ ಪುರಸಭೆ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಪುರಸಭಾ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವಿರುವ ಕಾರಣ ಸಮಿತಿ ಪ್ಲಾಸ್ಟಿಕ್ ಬಳಕೆಗೆ ಮುಂದಾಗಬಾರದು ಎಂದರು. ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಡಿ.ಆರ್. ಭಾರತಿ ಅರುಣ್‍ಕುಮಾರ್, ಪಿಎಸ್‍ಐ ಜಗ ದೀಶ್, ಮುಖಂಡರಾದ ಜಾಕೀರ್ ಪಾಷ, ಅಬ್ದುಲ್ ಖಾದರ್ ಇನ್ನಿತರರಿದ್ದರು.