ವೈದ್ಯರ ಎಡವಟ್ಟು: ಇಬ್ಬರು ಬಾಣಂತಿಯರು ಅಸ್ವಸ್ಥ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ
ಹಾಸನ

ವೈದ್ಯರ ಎಡವಟ್ಟು: ಇಬ್ಬರು ಬಾಣಂತಿಯರು ಅಸ್ವಸ್ಥ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ

December 20, 2018

ಹಾಸನ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಂದೇ ರಾತ್ರಿ ದಾಖಲಾದ ಇಬ್ಬರೂ ಬಾಣಂತಿಯರು ವೈದ್ಯರ ಎಡವಟ್ಟಿಗೆ ಅಸ್ವಸ್ಥ ರಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗ ಳೂರಿನ ಆಸ್ಪತ್ರೆಗೆ ವೈದ್ಯರೇ ರವಾನಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಚಿಕ್ಕೆನ ಹಳ್ಳಿ ಗ್ರಾಮದ ಕೀರ್ತಿ (30) ಮತ್ತು ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ಮಹದೇವಮ್ಮ(36) ಎಂಬುವರೇ ವೈದ್ಯರ ಎಡವಟ್ಟಿಗೆ ಸಾವು-ಬದುಕಿನ ನಡುವೇ ಹೋರಾಟ ಮಾಡು ತ್ತಿರುವ ಬಾಣಂತಿಯರು.

ಸಂತಾನಹರಣ ಮಾಡಿಸುವ ನಿಟ್ಟಿನಲ್ಲಿ ಚಿಕಿತ್ಸೆಗಾಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಮಹಿಳೆಯ ರಿಗೆ ವೈದ್ಯರೊಬ್ಬರು ಮಂಗಳವಾರ ರಾತ್ರಿ ನೀಡಿದ ಹೆವಿ ಡೋಸೇಜ್ ಇಂಜೆಕ್ಷನ್ ಪರಿ ಣಾಮ ಇವರು ಅಸ್ವಸ್ಥರಾಗಿದ್ದಾರೆ ಎಂಬುದು ಕುಟುಂಬದವರ ಆರೋಪಿಸಿದ್ದಾರೆ.
ಬುಧವಾರ ಬೆಳಗ್ಗಿನ ಸಮಯದಲ್ಲಿ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡ ವೈದ್ಯರು, ಅವರನ್ನು ಆಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾ ನಿಸಲು ಮುಂದಾದರು. ವೈದ್ಯರ ಇಂತಹ ಬೇಜವಾಬ್ದಾರಿತನದಿಂದ ಮಹಿಳೆಯರ ಪ್ರಾಣಕ್ಕೆ ಸಂಚಕಾರ ಬಂದಿದೆ. ತಮ್ಮ ತಪ್ಪು ಗಳನ್ನು ಮುಚ್ಚಲು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಬಾಣಂತಿಯರ ಸಂಬಂಧಿüಕರು ದೂರಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ನಡೆದಿದ್ದು, ಮುಂದಾದರೂ ವೈದ್ಯರು ಬೇಜವಾಬ್ದಾರಿ ತೋರದೆ ಎಚ್ಚರಿಕೆಯಿಂದ ಚಿಕಿತ್ಸೆ ನೀಡ ಬೇಕು ಎಂದು ಸಾರ್ವಜನಿಕರು ಇದೇ ವೇಳೆ ಒತ್ತಾಯಿಸಿದರು.

Translate »