ಕೇಂದ್ರ ಸರ್ಕಾರದ ಟ್ರಾಯ್ ನೀತಿ ವಿರೋಧಿಸಿ ಪ್ರತಿಭಟನೆ
ಚಾಮರಾಜನಗರ

ಕೇಂದ್ರ ಸರ್ಕಾರದ ಟ್ರಾಯ್ ನೀತಿ ವಿರೋಧಿಸಿ ಪ್ರತಿಭಟನೆ

December 26, 2018

ಚಾಮರಾಜನಗರ:  ಕೇಂದ್ರ ಸರ್ಕಾ ರದ ಟ್ರಾಯ್ ನೀತಿ ವಿರೋಧಿಸಿ ಜಿಲ್ಲಾ ಡಿಜಿ ಟಲ್ ಕೇಬಲ್ ಅಪರೇಟರ್ಸ್ ಕ್ಷೇಮಾಭಿ ವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಾ ಲಯದ ಆವರಣದಲ್ಲಿ ಜಿಲ್ಲಾ ಸಂಚಾಲಕ ಮುದ್ದಪ್ಪ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ ದಲ್ಲಿ ಮಾನವ ಸರಪಳಿ ರಚಿಸಿ ಕೆಲವೊತ್ತು ಪ್ರತಿಭಟನೆ ನಡೆಸಿದ ನಂತರ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿ ಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಜಿಟಲ್ ಕೇಬಲ್ ಅಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಂಚಾಲಕ ಮುದ್ದಪ್ಪ ಮಾತನಾಡಿ, ಕಳೆದ 25 ವರ್ಷಗಳಿಂದ ಹಿಂದೆ ಒಂದೆರಡು ಚಾನಲ್ ಪಡೆಯಲು ಲಕ್ಷಾಂತರ ರೂ. ವಿನಿಯೋಗಿಸಿ ಕೇಬಲ್ ಉದ್ಯಮ ಪ್ರಾರಂಭಿಸಿ ನಮ್ಮ ಗ್ರಾಹಕರಿಗೆ ಸಂಪರ್ಕ ನೀಡಿ 50 ಅಥವಾ 60 ರೂ. ಹಣ ಪಡೆಯುತ್ತಿದ್ದೆವು. ನಂತರದ ದಿನ ಗಳಲ್ಲೂ ನಮ್ಮ ಜೀವನದ ಎಲ್ಲಾ ಗಳಿಕೆ ಯನ್ನು ವಿನಿಯೋಗಿಸುತ್ತಾ ಉದ್ಯಮದಲ್ಲಿ ಬಂದಂತಹ ಎಲ್ಲಾ ಎಡರು ತೊಡರು ಗಳನ್ನು ಸಹಿಸಿಕೊಂಡು ಪರಿಹರಿಸಿ ಕೇಬಲ್ ಉದ್ಯಮ ನಡೆಸುತ್ತಿರುವ ನಾವುಗಳು ಪ್ರಸಾರ ಮಾಡುವ ಚಾನಲ್‍ಗಳನ್ನು ಹೆಚ್ಚಿಸಿ, ಪ್ರಸಾರ ಸಂಖ್ಯೆ ಹೆಚ್ಚಿದಂತೆ ಹಾಗೂ ಪೇ ಚಾನಲ್ ಗಳು ಹೆಚ್ಚಿದಾಗ ನಮಗೂ ಹೊರೆಯಾ ದರೂ ಸಹ ಗ್ರಾಹಕರಿಗೆ ತೊಂದರೆಯಾ ದಂತೆ ರೂ. 75, ರೂ. 90 ರೂ, 100 ರೂ. 130 ರೂ. ಪಡೆದು ಸೇವೆ ನೀಡುತ್ತಿದ್ದೆವು.

ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡುವ ಆದೇಶ ಮಾಡಿದ ನಂತರ ಗ್ರಾಹರಿಗೆ ಸೆಟ್‍ಟಾಪ್ ಬಾಕ್ಸ್‍ಗಳನ್ನು ಒದ ಗಿಸಿದ ನಂತರವೂ ಗ್ರಾಹರಿಗೆ ಹೊರೆಯಾ ಗದಂತೆ ಕೇವಲ 180 ರಿಂದ 200 ರೂ. ಗಳನ್ನು ಮಾತ್ರ ಪಡೆದು ಉತ್ತಮವಾದ ಪ್ರಸಾರದ ವ್ಯವಸ್ಥೆ ನೀಡುತ್ತಾ, ಗ್ರಾಹಕ ರೊಡನೆ ಉತ್ತಮ ಬಾಂಧವ್ಯವನ್ನೂ ಹೊಂದಿ ನಮ್ಮ ವ್ಯವಹಾರವನ್ನು ನಡೆಸುತ್ತಿದ್ದೇವೆ. ಇದರಿಂದ ನಮ್ಮ ಹಾಗೂ ನಮ್ಮ ಅನು ಯಾಯಿಗಳ ಕುಟುಂಬಗಳ ಜೀವನ ನಿರ್ವ ಹಣೆ ಮಾಡುತ್ತಿದ್ದೇವೆ . ಇದೀಗ ಕೇಂದ್ರ ಸರ್ಕಾರ ಟ್ರಾಯ್ ನಿರ್ದೇಶನದಂತೆ ಡಿ.29 ರಿಂದ ಕೇಬಲ್ ಸಂಪರ್ಕ ಶುಲ್ಕವನ್ನು ನಿಗದಿ ಮಾಡಿ ದೇಶಾದ್ಯಂತ ಇರುವ ಎಲ್ಲಾ ಕೇಬಲ್ ಅಪರೇಟರುಗಳು 100 ಉಚಿತ ಚಾನಲ್‍ಗಳನ್ನು ತಮ್ಮ ಜಾಲದಲ್ಲಿ ಪ್ರಸಾರ ಮಾಡಿ ಗ್ರಾಹಕರಿಂದ 130 ಮತ್ತು ಶೇ18% ಜಿಎಸ್‍ಟಿಯಾಗಿ 154 ರೂ. ರಂತೆ ಪಡೆ ಯಬೇಕೆಂದು, ಗ್ರಾಹಕರು ತಮಗೆ ಇಷ್ಟ ವಾದ ಪೇ ಚಾನಲ್‍ಗಳನ್ನು ಪೇಚಾನಲ್ ಮಾಲೀಕರಗಳು ನಿಗದಿ ಪಡಿಸುವ ಎಂಆರ್‍ಪಿ ದರ ಹಾಗೂ ಜಿಎಸ್‍ಟಿ ನೀಡಿ ಪಡೆಯ ಬಹುದೆಂದೂ ದೇಶಾದ್ಯಂತ ಇರುವ ಎಲ್ಲಾ ಕೇಬಲ್ ಅಪರೇಟರುಗಳು ಇದೇ ದರ ದಂತೆ ತಮ್ಮ ತಮ್ಮ ಗ್ರಾಹಕರಿಂದ ಹಣ ಪಡೆಯಬೇಕೆಂದೂ ಆದೇಶ ಮಾಡಿ ರುತ್ತದೆ. ಕೇಂದ್ರ ಸರ್ಕಾರ ಟ್ರಾಯ್ ನಿರ್ದೇ ಶನದಂತೆ ಜಾರಿಗೊಳಿಸಲು ಹೊರಟಿರುವ ಈ ನೂತನ ಆದೇಶದಂತೆ ಈಗ ನಾವು ಕೊಡುತ್ತಿರುವವಷ್ಠು ಚಾನಲ್‍ಗಳಲ್ಲಿ ಗ್ರಾಹ ಕರಿಗೆ ಅತಿ ಅವಶ್ಯವಾದ ಕನ್ನಡ ಸೀರಿ ಯಲ್‍ಗಳನ್ನು ನೋಡಲು ಕ್ರಿಕೆಟ್, ಹಾಕಿ ಮುಂತಾದ ಕ್ರೀಡೆಗಳನ್ನು ಪ್ರಸಾರ ಮಾಡುವ ಒಂದೆರಡು ಚಾನಲ್‍ಗಳನ್ನು ನೋಡಲು ಹಾಗೂ ಮಕ್ಕಳ ತಮ್ಮ ಇಷ್ಠವಾದ ಕೇವಲ ಒಂದೆರಡು ಕಾರ್ಟೂನ್ ಪೋಗೋ, ಚಿಂಟು ಚಾನಲ್ ನೋಡಲು ಕನಿಷ್ಠ 300ರಿಂದ 400 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇಲ್ಲಿಯವರೆಗೆ ನಾವು ನಮ್ಮ ಜಾಲದಲ್ಲಿ ಕೊಡುತ್ತಿರುವ ಇತರೆ ಚಾನಲ್‍ಗಳನ್ನೂ ನೋಡಬೇಕಿದ್ದರೆ ಗ್ರಾಹಕರು 600 ರಿಂದ 800 ರೂ ವರಗೆ ಪಾವತಿಸಬೇಕಾಗುತ್ತದೆ.

ಇದರಿಂದ ಗ್ರಾಹಕರಿಗೆ ತೊಂದರೆಯಾಗ ಲಿದೆ. ಜಿಲ್ಲೆಯಲ್ಲಿ ಕೇಬಲ್ ಸಂಪರ್ಕ ಪಡೆ ದಿರುವ ಗ್ರಾಹಕರ ಹಿತರಕ್ಷಣೆಗಾಗಿ ಕಡಿಮೆ ದರದಲ್ಲಿ ಚಾನಲ್‍ಗಳನ್ನು ವೀಕ್ಷಿಸುವಂತೆ ಮಾಡಲು ದೇಶಾದ್ಯಂತ ಕೇಬಲ್ ಅಪರೇ ಟರುಗಳು ಕೇಂದ್ರ ಸರ್ಕಾರ ಉದ್ದೇಶಿತ ಆದೇಶವನ್ನು ಜಾರಿಗೊಳಿಸದಂತೆ ತಮ್ಮ ತಮ್ಮ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಅದರಂತೆ ಜಿಲ್ಲಾ ಡಿಜಿಟಲ್ ಕೇಬಲ್ ಅಪ ರೇಟರ್ಸ್ ಕ್ಷೇಮಾಭಿವೃದ್ದಿ ಸಂಘ ಕೇಂದ್ರ ಸರ್ಕಾರದ ಟ್ರಾಯ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸ ಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಡಿಜಿಟಲ್ ಕೇಬಲ್ ಅಪರೇಟರ್ಸ್ ಕ್ಷೇಮಾಭಿವೃದ್ದಿ ಸಂಘದ ನಗರ ಘಟಕ ಅಧ್ಯಕ್ಷ ಮಂಜು ನಾಥ್, ಗ್ರಾಮಾಂತರ ಅಧ್ಯಕ್ಷ ಪ್ರಕಾಶ್, ನಗರಸಭಾ ಮಾಜಿ ಸದಸ್ಯ ವಿ.ರಘುನಾಥ್, ಪ್ರಶಾಂತ್‍ಬಾಬು, ರಾಘವೇಂದ್ರ, ಪಾಪು, ಪ್ರಜ್ವಲ್, ಸಂಪತ್, ವಿಜಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಶಿವಕುಮಾರ್, ಕೊಳ್ಳೇ ಗಾಲ ಕೆ.ಪಿ.ಪ್ರಕಾಶ್, ಅಜಾದ್, ಕಬಿನಿ ಪ್ರಕಾಶ್, ರೇಣುಕೇಶ್, ಹನೂರು ವಜೀರಾ, ನರಸೀಪುರ ಸಮೀ, ನಂಜನಗೂಡು ಮಧು, ಮೈಸೂರು ಆನಂದ್, ಸುರೇಶ್‍ನಾಗು, ಎಸ್.ಪಿ.ಮಹೇಶ್ ಇತರರು ಭಾಗವಹಿಸಿದ್ದರು.

Translate »