ಕೊಡವ ಸಂಸ್ಕೃತಿ ಗಟ್ಟಿತನಕ್ಕೆ ಮಂದ್ ನಮ್ಮೆ ಪೂರಕ
ಕೊಡಗು

ಕೊಡವ ಸಂಸ್ಕೃತಿ ಗಟ್ಟಿತನಕ್ಕೆ ಮಂದ್ ನಮ್ಮೆ ಪೂರಕ

December 26, 2018

ಪೊನ್ನಂಪೇಟೆ:  ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ್ದ ಸಂಸ್ಕೃತಿ ಯಿಂದ ನಾವು ಶಿಕ್ಷಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಕಂಡಿದ್ದೇವೆ. ಪೂರ್ವಜರು ನಮಗೆ ದಕ್ಕಿಸಿಕೊಟ್ಟಿರುವ ಸಂಸ್ಕೃತಿಯಿಂದ ನಮಗೆ ಗೌರವ ಸಿಗುತ್ತಿದೆ. ಅಂತಹ ಬೇರನ್ನು ಗಟ್ಟಿ ಮಾಡಬೇಕಾಗಿದೆ. ಇದನ್ನು ಉಳಿಸಿಕೊಳ್ಳಲು ಮಂದ್‍ನಂತಹ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದು ಯುಕೊ ಸಂಘ ಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.

ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆಯಲ್ಲಿ 5ನೇ ವರ್ಷದ ಯುಕೊ ಮಂದ್ ನಮ್ಮೆಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೊಡವರು ವೈಯಕ್ತಿಕವಾಗಿ ತಮ್ಮ ಮನೆಯ ಸುತ್ತಲು ಕಾಂಪೌಂಡ್, ಸಿಸಿ ಟಿವಿ, ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸುರ ಕ್ಷಿತವಾಗಿದ್ದೇವೆ ಎಂದುಕೊಂಡರೂ, ಹೊರಗೆ ಬಂದಾಗ ಸಾಮಾಜಿಕವಾಗಿ ದುರ್ಬಲರಾಗಿದ್ದೇವೆ ಎಂದು ಮನವರಿ ಕೆಯಾಗುತ್ತದೆ. ನಾವು ಸಂಸ್ಕೃತಿಯನ್ನು ಬಿಟ್ಟು ಹಣ ಗಳಿಸುವ ಏಕೈಕ ಉದ್ದೇಶಕ್ಕೆ ಪ್ರಾಮುಖ್ಯತೆ ನೀಡುವುದು ಬೇಡ. ನಾವು ಗಟ್ಟಿಯಾಗಿ ಉಳಿಯಬೇಕಾದರೆ ಆಸೆಗ ಳನ್ನು ಸೀಮಿತವಾಗಿಟ್ಟುಕೊಂಡು ನೆಮ್ಮದಿಗಾಗಿ ಸಂಸ್ಕೃತಿಯನ್ನು ಬೇರು ಮಟ್ಟ ದಿಂದ ಬೆಳೆಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇರುವುದನ್ನೆಲ್ಲ ಕಳೆದುಕೊಳ್ಳುತ್ತಾ ಹೋಗುತ್ತೇವೆಂದು ಎಚ್ಚರಿಸಿದರು.

ನಾವು ಮಂದ್ ನಮ್ಮೆ ಆಚರಣೆ ಮಾಡಲು ಆರಂಭಿಸಿದ ಮೇಲೆ ಹಲವಾರು ಮುಚ್ಚಿ ಹೋಗಿದ್ದ ಮಂದ್‍ಗಳು ತೆರೆದಿದೆ. ಊರಿನ ತಕ್ಕರು ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಇತರ ಸಂಘ ಸಂಸ್ಥೆಗಳು ಮಂದ್‍ಗಳನ್ನು ತೆರೆದು ಪ್ರಾಮುಖ್ಯತೆ ನೀಡಿದೆ. ನಮ್ಮ ಉದ್ದೇ ಶವು ಯಾರೇ ಆದರೂ ಮಂದ್‍ಗಳ ಪುನರ್‍ಜೀವನ ಆಗಬೇಕೆನ್ನುವುದೇ ಆಗಿದೆ ಎಂದು ಹೇಳಿದರು. ನಮ್ಮ ಸಂಘಟನೆಗೆ ಹಲವರು ಅಡೆ ತಡೆಗಳನ್ನು ಮಾಡುತ್ತ ಬಂದಿ ದ್ದಾರೆ. ತೊಂದರೆ ಮಾಡಲು ಪ್ರಯತ್ನ ಪಟ್ಟಷ್ಟು ನಾವು ಮತ್ತಷ್ಟು ಗಟ್ಟಿಯಾಗು ತ್ತೇವೆ. ಏನೇ ತೊಂದರೆ ಮಾಡಿದರೂ ಕೊಡವಾಮೆಯ ಗತವೈಭವವನ್ನು ಪ್ರತಿ ಷ್ಠಾಪನೆ ಮಾಡು ವುದಾಗಿ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಅಂತ ರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕೊಡ ವರ ಪೂರ್ವ ಚರಿತ್ರೆ ನೋಡಿದಾಗ ನಮ್ಮ ಪೂರ್ವಜರು ಚೆನ್ನಾಗಿ ಬದುಕುವ ನೆಮ್ಮ ದಿಯ ಮಾರ್ಗವನ್ನು ತಮ್ಮ ಸಂಸ್ಕೃತಿಯಲ್ಲಿಯೇ ಬಳುವಳಿಯಾಗಿ ನೀಡಿದ್ದಾರೆ. ಈ ದೇಶವನ್ನು 250 ವರ್ಷ ಆಡಳಿತ ನಡೆ ಸಿದ ಬ್ರಿಟಿಷರು ವೀರ ಪರಂಪರೆಯ ವೀರತ್ವವನ್ನು ಮೆಚ್ಚಿ ಕೊಡವರನ್ನು ಕ್ರಿಶ್ಚಿ ಯನ್ ಧರ್ಮಕ್ಕೆ ಮತಾಂತರ ಮಾಡಬೇ ಕೆಂದು ಪ್ರಯತ್ನ ಪಟ್ಟರು. ಇದರಿಂದ ತಮ್ಮ ಸೈನ್ಯಕ್ಕೆ ಸೇರಿಸಿಕೊಂಡಾಗ ಸೈನ್ಯ ಮತ್ತಷ್ಟು ಶಕ್ತಿಯುತವಾಗಲಿದೆ. ಈ ಮೂಲಕ ಈ ದೇಶವನ್ನು ಮತ್ತಷ್ಟು ವರ್ಷ ಆಳಬಹು ದೆಂದು ಪ್ರಯತ್ನಿಸಿದ್ದರು. ಆದರೆ ಯಾರೊ ಬ್ಬರೂ ಮತಾಂತರವಾಗಲಿಲ್ಲ. ಇದರಿಂದ ಕೊಡವ ಸಂಸ್ಕೃತಿಯ ಬೇರು ಎಷ್ಟು ಗಟ್ಟಿ ಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಕೊಡವರಲ್ಲಿ ಸಾಂಸ್ಕೃತಿಕ ಒಗ್ಗಟ್ಟು ಹಬ್ಬ ಗಳಿಂದ ಬೆಸೆಯುತ್ತಿವೆ. ಇತ್ತೀಚೆಗೆ ಅಂತ ರ್‍ಜಾತಿ ವಿವಾಹದಿಂದ ಕೊಡವಾಮೆಗೆ ಧಕ್ಕೆಯಾಗುತ್ತಿದೆ. ಕೊಡವಾಮೆ ಮಾತ್ರವಲ್ಲ ಕೊಡಗನ್ನು ಸಹ ಉಳಿಸಲು ಯುಕೊ ಸಂಘಟನೆ ಕೆಲಸ ಮಾಡುತ್ತಿದೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಕೊಡಗು-ಕೊಡವರನ್ನು ಕಡೆಗಣಿಸುತ್ತಿದೆ. ಆದ್ದರಿಂದ ಇಂತಹ ಸಂಘಟನೆಗಳು ಸರ ಕಾರದ ಕಿವಿ ಹಿಂಡುವ ಕೆಲಸ ಮಾಡ ಬೇಕಾಗಿದೆ ಎಂದರು. ಕೊಡಗಿನಲ್ಲಿ ಉಂಟಾಗಿ ರುವ ಪ್ರಾಕೃತಿಕ ದುರಂತದ ಸಂಕಷ್ಟಕರಿಗೆ ತೃಪ್ತಿದಾಯಕವಾದ ಪುನರ್‍ವಸತಿ ಕಾರ್ಯ ಆಗುತ್ತಿಲ್ಲ. ನಾವು ನೀಡಿದ ಸಲಹೆಗಳಿಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ. ಸಂತ್ರಸ್ತರಿಗೆ ನ್ಯಾಯ ಯುತ ಪುನರ್‍ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯುಕೊ ಸಂಘಟನೆ ಕಾರ್ಯೋನ್ಮುಖಕ ರಾಗಬೇಕೆಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾದ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೊಳೇರ ಝರು ಗಣಪತಿ ಮಾತನಾಡಿ, ಮುಂದಿನ ಶೈಕ್ಷ ಣಿಕ ವರ್ಷದಿಂದ ತಮ್ಮ ವಿದ್ಯಾಸಂಸ್ಥೆಯು ವೇಳಾಪಟ್ಟಿಯಲ್ಲಿ ಒಂದು ಅವಧಿಯನ್ನು ಕೊಡವ ಸಂಸ್ಕೃತಿಯ ಕಲಿಕೆಗೆ ಮೀಸಲಿಡು ವುದಾಗಿ ಭರವಸೆ ನೀಡಿದರು.

Translate »