ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ
ಮೈಸೂರು

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ

December 2, 2020

ಮೈಸೂರು, ಡಿ.1(ವೈಡಿಎಸ್)- ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯ ಬೇಕೆಂದು ಒತ್ತಾಯಿಸಿ ಮೈಸೂರಲ್ಲಿ ಕದಂಬ ಸೈನ್ಯ ಸದಸ್ಯರು ಡಿಸಿ ಕಚೇರಿ ಬಳಿ ಪ್ರತಿ ಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕನ್ನಡಿಗರಾಗಿದ್ದ ಮರಾಠಿಗರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣ ವಿಧಾನಸಭೆ ಉಪ ಚುನಾವಣೆ ಯಲ್ಲಿ ಗೆಲುವು ಸಾಧಿಸಲೆಂದೇ ನಿಗಮ ರಚನೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಮರಾಠಿಗರ ಮತಕ್ಕಾಗಿ ಎಷ್ಟು ಭಾಗ್ಯಗಳ ನ್ನಾದರೂ ಕೊಡಿ. ಆದರೆ, ಕನ್ನಡದ ಅಸ್ಮಿತೆಗೆ ಧಕ್ಕೆ ತರುವ, ಕನ್ನಡ ವಿರೋಧಿಗಳನ್ನಾಗಿ ಸುವ ಹುನ್ನಾರಕ್ಕೆ ಕೈಹಾಕಬೇಡಿ ಎಂದು ಒತ್ತಾಯಿಸಿದರು. ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಲಕ್ಷಾಂತರ ಕನ್ನಡಿ ಗರು ಬದುಕು ಸಾಗಿಸುತ್ತಿದ್ದು, ಅಲ್ಲಿನ ಸರ್ಕಾರ ಗಳು ಕನ್ನಡಿಗರಿಗಾಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿವೆಯೇ? ಎಂದು ಪ್ರಶ್ನಿಸಿದರು.

ಭಾಷೆಗೊಂದರಂತೆ ನಿಗಮ ರಚಿಸಿದರೆ ಕನ್ನಡ ಉಳಿಯದು. ನಾಳೆ ತೆಲುಗು, ತಮಿಳು, ಮಲೆಯಾಳಂ ಎಲ್ಲರೂ ಕೇಳುತ್ತಾರೆ. ಎಲ್ಲ ರಿಗೂ ಒಂದೊಂದು ನಿಗಮ ಸ್ಥಾಪಿಸಲು ಸಾಧ್ಯವೇ? ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕದಂಬ ಸೈನ್ಯ ಸದಸ್ಯರು ರಾಮ ನಗರದಿಂದ ಬೈಕ್ ಜಾಥಾ ಹೊರಟು ಮಂಡ್ಯ ಮೂಲಕ ಸಾಗಿ ಮೈಸೂರಿಗೆ ಬಂದು ಡಿಸಿ ಮೂಲಕ ಮುಖ್ಯಮಂತ್ರಿ ಯಡಿ ಯೂರಪ್ಪ ಅವರಿಗೆ ಮನವಿಪತ್ರ ರವಾನಿಸಿ ದರು. ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಂಚಾಲಕ ರಾಮನಗರ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ಎ.ನಾಗೇಂದ್ರ, ವಿಭಾಗ ಸಂಚಾಲಕ ಎನ್.ವೆಂಕಟೇಶ್, ತಿ.ನರಸೀ ಪುರ ತಾಲೂಕು ಅಧ್ಯಕ್ಷ ಮಹದೇವ ನಾಯಕ, ರಾಜ್ಯ ಸಮಿತಿ ಸದಸ್ಯ ನಾ.ಮಹ ದೇವಸ್ವಾಮಿ, ಉಮ್ಮಡಹಳ್ಳಿ ನಾಗೇಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »