ರಾಮಸಮುದ್ರ ನಿವಾಸಿಗಳ ಪ್ರತಿಭಟನೆ
ಚಾಮರಾಜನಗರ

ರಾಮಸಮುದ್ರ ನಿವಾಸಿಗಳ ಪ್ರತಿಭಟನೆ

October 24, 2020

ಚಾಮರಾಜನಗರ ಅ.23(ಎಸ್‍ಎಸ್)-ದಸರಾ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾ ಲಂಕಾರದಲ್ಲಿ ರಾಮಸಮುದ್ರ ಬಡಾವಣೆ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಮಸಮುದ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟಿಸಲಾಯಿತು.

ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಮಸಮುದ್ರ ಅಭಿವೃದ್ಧಿ ಸಮಿತಿ ಆಶ್ರಯ ದಲ್ಲಿ ಬಡಾವಣೆಯ ಹಲವು ನಿವಾಸಿಗಳು ಬಡಾವಣೆಯ ಬಸವಭವನದ ಬಳಿ ಜಮಾ ಯಿಸಿದರು. ಬಳಿಕ ಮೆರವಣಿಗೆ ಮೂಲಕ ತರಳಿ ಜಿಲ್ಲಾಡಳಿತ ಆವರಣದಲ್ಲಿ ಪ್ರತಿಭ ಟಿಸಿದರು. ಮೆರವಣಿಗೆ ವೇಳೆ ನಗರಸಭೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ಹಳೇ ನೀರು ಶುದ್ಧೀಕರಣ ಕೇಂದ್ರದವರೆಗೆ ಜೋಡಿರಸ್ತೆ ನಿರ್ಮಿಸಿ, ವರ್ಷಗಳೇ ಕಳೆದರೂ ಕತ್ತಲಿನಿಂದ ಮುಳುಗಿತ್ತು. ದಸರಾ ಹಿನ್ನೆಲೆಯಲ್ಲಿ ನೂತನ ವಿದ್ಯುತ್ ಬೀದಿದೀಪ ಅಳವಡಿಸಿ ರಸ್ತೆ ಉದ್ಘಾಟಿಸಿ, ಸದ್ಯ ವಿದ್ಯುತ್ ದೀಪಾಲಂಕಾರ ಮಾಡ ಲಾಗಿದೆ. ಆದರೆ ರಾಮಸಮುದ್ರ ಬಡಾವಣೆ ನಗರಸಭೆಗೆ ಸೇರಿದ್ದು, ಒಟ್ಟು 5 ವಾರ್ಡ್ ಗಳಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಬೀದಿ ದೀಪವನ್ನು ಸಹ ಜೋಡಿರಸ್ತೆಯ ಕೊನೆಯ ವರೆಗೂ ಹಾಕಿದೆ ಕಡೆಗಣಿಸಲಾಗಿದೆ. ಇದಲ್ಲದೆ ದಸರಾ ಅಂಗವಾಗಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಸಹ ಜೋಡಿರಸ್ತೆ ಕೊನೆ ಯವರೆಗೆ ಮಾಡಿಲ್ಲ. ಈ ಮೂಲಕ ಜಿಲ್ಲಾಡಳಿತ ಹಾಗೂ ನಗರಸಭೆ ರಾಮಸಮುದ್ರ ಬಡಾವಣೆ ಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ವಿದ್ಯುತ್ ಬೀದಿದೀಪ ಅಳವಡಿಕೆ ಸೇರಿದಂತೆ ಜೋಡಿರಸ್ತೆ ಕೊನೆಯವರೆಗೂ ದೀಪಾಲಂಕಾರ ಮಾಡಬೇಕು. ಬಡಾ ವಣೆಯಲ್ಲಿ ನೀರಿನ ಸಮಸ್ಯೆ ಇದ್ದು, ಸಮರ್ಪ ಕವಾಗಿ ಕಾವೇರಿ ನೀರು ಪೂರೈಸಬೇಕು. ಅಪೂರ್ಣಗೊಂಡಿರುವ ಒಳಚರಂಡಿ ಕಾಮಗಾರಿ ಹಾಗೂ ಹದಗೆಟ್ಟಿರುವ ರಸ್ತೆ ಹಾಗೂ ಚರಂಡಿ ದುರಸ್ತಿಪಡಿಸಬೇಕು. ತುರ್ತಾಗಿ ಕಸವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಹದೇವಸ್ವಾಮಿ, ಶ್ರೀನಿವಾಸ್, ಗೋವಿಂದ ರಾಜು, ಶಿವಣ್ಣ, ಮಹೇಶ್, ನಾಗೇಶ್‍ನಾಯಕ, ಮಣಿ, ಚಂದ್ರು, ಶಂಕರ, ಕೇಶವ, ಬಸª Àರಾಜು, ಮಂಜು, ರಾಜು, ಕೃಷ್ಣ, ಸಿದ್ದರಾಜು, ಶಿವಕುಮಾರ್, ರವಿ ಇತರರಿದ್ದರು.

 

 

 

Translate »