ಪೂರ್ಣ ಪ್ರಮಾಣದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಪೂರ್ಣ ಪ್ರಮಾಣದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

January 28, 2021

ಮೈಸೂರು,ಜ.27(ಪಿಎಂ)-ಕಳೆದ ಶೈಕ್ಷ ಣಿಕ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಸಾಲಿ ನಲ್ಲೂ ಮುಂದುವರೆಸುವಂತೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿ ತಿಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 2020 -21ರ ಶೈಕ್ಷಣಿಕ ಸಾಲಿಗೆ ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿದ್ದ 14,183 ಅತಿಥಿ ಉಪ ನ್ಯಾಸಕರ ಪೈಕಿ ಶೇ.50ರಷ್ಟು ಮಂದಿಯನ್ನು ಮಾತ್ರವೇ ಮಾರ್ಚ್‍ವರೆಗೆ ಆಯ್ಕೆ ಮಾಡಿ ಕೊಳ್ಳುವ ನಿರ್ಧಾರ ಅವೈಜ್ಞಾನಿಕ. ಇದನ್ನು ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಾಲಿಗೆ ಪೂರ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಸಾಲಿನ ಶೇ.50ರಷ್ಟು ಅತಿಥಿ ಉಪ ನ್ಯಾಸಕರನ್ನು ಮುಂದಿನ ಮಾರ್ಚ್‍ವರೆಗೆ ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕೆಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಇದೇ ಜ.19ರಂದು ಆದೇಶ ಮಾಡಿದ್ದಾರೆ. ಈ ಆದೇಶ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೋವಿಡ್-19 ಮಾರ್ಗಸೂಚಿಗೆ ವಿರುದ್ಧ ವಾಗಿದೆ ಎಂದು ಆರೋಪಿಸಿದರು. ಯಾವುದೇ ನೌಕರರನ್ನು ಕೆಲಸದಿಂದ ಕೈಬಿಡದೇ ಮುಂದುವರೆಸಬೇಕೆಂಬುದು ಸರ್ಕಾರದ ಮಾರ್ಗಸೂಚಿ ಇದೆ. ಆದರೆ ಅತಿಥಿ ಉಪ ನ್ಯಾಸಕರ ನೇಮಕದಲ್ಲಿ ಇದನ್ನು ಉಲ್ಲಂಘಿ ಸಲಾಗಿದೆ. 2020ರ ನ.11ರಂದು ಉನ್ನತ ಶಿಕ್ಷಣ ಸಚಿವರು ಎಲ್ಲಾ ಅತಿಥಿ ಉಪನ್ಯಾಸ ಕರನ್ನು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮುಂದುವರೆಸಲು ಸೂಚನೆ ನೀಡಿದ್ದಾರೆ. ಸಚಿವರ ಸೂಚನೆ ಪಾಲಿಸದೇ ಶೇ.50 ರಷ್ಟು ಅತಿಥಿ ಉಪನ್ಯಾಸಕರ ನೇಮಕ ಮಾಡಲು ನಿರ್ಧರಿಸಿ, ಉಳಿದವರನ್ನು ನಿರುದ್ಯೋಗಿ ಗಳಾಗಿ ಮಾಡಲು ಹೊರಟಿದ್ದಾರೆ ಎಂದು ಖಂಡಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಹನು ಮಂತೇಶ್, ಉಪಾಧ್ಯಕ್ಷೆ ಡಾ.ಶ್ಯಾಮಲಾ, ಸಹ ಕಾರ್ಯದರ್ಶಿ ಡಾ.ದೀಪಶ್ರೀ, ಮಾಧ್ಯಮ ಪ್ರತಿನಿಧಿ ಡಾ.ಜೆ.ಸಿ.ರವೀಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

Translate »