ನೀಮ್ ಯೋಜನೆಯಡಿ ಆಯ್ಕೆಯಾಗಿದ್ದ ಟ್ರೈನಿಗಳ ಸೇವೆ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ನೀಮ್ ಯೋಜನೆಯಡಿ ಆಯ್ಕೆಯಾಗಿದ್ದ ಟ್ರೈನಿಗಳ ಸೇವೆ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ

June 16, 2020

ಸೂರು, ಜೂ.15(ಎಂಟಿವೈ)- ನೀಮ್ ಯೋಜನೆಯಡಿ ಕಾರ್ಯನಿರ್ವ ಹಿಸುತ್ತಿರುವ ಟ್ರೈನಿಗಳು ಮತ್ತು ಅಪ್ರೆಂಟಿಸ್ ಗಳ ತರಬೇತಿ ಮುಂದುವರಿಸಿ, ಗೌರವಧÀನ ಪಾವತಿಸಬೇಕು ಎಂದು ಆಗ್ರಹಿಸಿ ಸ್ಟ್ರಗ ಲಿಂಗ್ ನೀಮ್ ಟ್ರೈನಿಸ್ ಸಂಘಟನೆಯ ಸದಸ್ಯರು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ಲಾಕ್‍ಡೌನ್ ನಂತರ ನೀಮ್ ಟ್ರೈನಿಗಳು ಮತ್ತು ಅಪ್ರೆಂಟಿಸ್ ಟ್ರೈನಿಗಳ ಸಮಸ್ಯೆ ಹೆಚ್ಚಾ ಗಿದೆ. ಮತ್ತೆ ಪುನರಾರಂಭವಾದ ಕಾರ್ಖಾನೆ ಗಳು ಮೂರು ವರ್ಷಗಳ ಗುತ್ತಿಗೆ ಇದ್ದರೂ ಸಹ ನಮ್ಮನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಲಾಕ್‍ಡೌನ್ ಸಮಯದಲ್ಲಿ ಸ್ಟೈಫಂಡ್ ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇ ಶನ ವನ್ನೂ ಪಾಲನೆ ಮಾಡಿಲ್ಲ. ಕೆಲವರಿಗೆ ಸಂಬಳ ನೀಡದೇ ತಾರತಮ್ಯ ಮಾಡ ಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ವರು ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡುವಂತೆ ಕೇಳದರೆ ಕಂಪನಿ ಮುಖ್ಯ ಸ್ಥರು ಫೆಸಿಲಿಟೇಟರ್‍ಗಳ ಕಡೆ ಬೊಟ್ಟು ಮಾಡಿ ಸುಮ್ಮನಾಗುತ್ತಿದ್ದಾರೆ. ಇದರಿಂದ ನೂರಾರು ನೀಮ್ ಟ್ರೈನಿಗಳು ಪರಿಸ್ಥಿತಿ ಅತಂತ್ರವಾಗಿದೆ. ಇವರನ್ನೇ ಅವಲಂಬಿತ ವಾಗಿರುವ ಕುಟುಂಬಕ್ಕೂ ಆತಂಕ ಮನೆ ಮಾಡಿದೆ. ಟ್ರೈನಿಗಳ ಫೆಸಿಲಿಟೇಟರ್ ಬಿಎಸ್‍ಎ ವಹಿಸಿಕೊಂಡಿರುವ ಕಂಪನಿ ಗಳಲ್ಲಿ ಸುಮಾರು 250 ಟ್ರೈನಿಗಳು 3 ವರ್ಷ ಗಳ ಆದೇಶ ಪ್ರತಿ ನೀಡಿಯೂ ಕೆಲಸಕ್ಕೆ ಕರೆಯುತ್ತಿಲ್ಲ. ಇವರೆಲ್ಲ ಒಂದು ವರ್ಷ ಮಾತ್ರ ಕೆಲಸ ಮಾಡಿದ್ದಾರೆ. ಆದ್ದ ರಿಂದ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಬಾಕಿ ಇರುವ ಲಾಕ್‍ಡೌನ್ ಸಮಯದ ಹಣ ಪಾವತಿಸಬೇಕು, ತರಬೇತಿ ಮುಗಿದ ಬಳಿಕ ಎಐಸಿಟಿಐ ನಿರ್ದೇಶನದಂತೆ ಪ್ರಮಾಣಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡ ರಾದ ಎಸ್.ಹರೀಶ್, ಶಿವಮೂರ್ತಿ ಇನ್ನಿತರರು ಪಾಲ್ಗೊಂಡಿದ್ದರು.

Translate »