ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿ ಆರಂಭ
ಮೈಸೂರು

ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿ ಆರಂಭ

June 16, 2020

ಮೈಸೂರು, ಜೂ.15- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ಪಾಲಿಕೆಯ ಆಸ್ತಿ ತೆರಿಗೆ ಯನ್ನು ಕರ್ನಾಟಕ ಒನ್ ಕೇಂದ್ರಗಳ ಅಥವಾ ವೈಬ್ ಸೈಟ್ ಮೂಲಕ ಪಾವತಿ ಸಲು ಸೇವೆ ಆರಂಭವಾಗಿದೆ.

ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಗೋಕುಲಂ, ರಾಮಕೃಷ್ಣನಗರ, ನೂ ಶೇಷಾದ್ರಿ ಅಯ್ಯರ್ ರೋಡ್, ಜಯನಗರ (ಕೃಷ್ಣಮೂರ್ತಿಪುರಂ) ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರದ ನಾಗರಿಕರ ಅನುಕೂಲಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಪಾವತಿ ಜೂ.9ರಿಂದ ಪ್ರಾರಂಭಿಸಲಾಗಿದೆ.

ಕರ್ನಾಟಕದ ಒನ್ ಇನ್ ಕೇಂದ್ರಗಳು ವರ್ಷದ ಗಾಂಧಿ ಜಯಂತಿ, ಕಾರ್ಮಿಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಚುನಾವಣೆ ಮತ ಚಲಾಯಿಸುವ ದಿನ ಹೊರತುಪಡಿಸಿ ಉಳಿದ ದಿನಗಳಂದು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7ರವರೆಗೆ ಕಾರ್ಯ ನಿರ್ವಹಿಸುತ್ತದೆ. ನಾಗರಿಕರು ನಗದು, ಚೆಕ್, ಡಿಡಿ, ಕ್ರೆಡಿಟ್, ಡೆಬಿಟ್ ಕಾರ್ಡ್, ಪೇಟಿಯಂ, ಯುಪಿಐ ಮೂಲಕ ಪಾವತಿಸಬಹು ದಾಗಿದೆ ಹಾಗೂ ಕರ್ನಾಟಕ ಒನ್ ಇನ್ ಕೇಂದ್ರಗಳ ವೆಬ್‍ಸೈಟ್ www.karnatakaone.gov.in ಮೂಲಕ ಪಾಲಿಕೆಯ ಆಸ್ತಿ ತೆರಿಗೆ ಪಾವತಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗೋಕುಲಂ- 0821- 2411490, ರಾಮಕೃಷ್ಣನಗರ- 0821- 2460727, ನಜರ್‍ಬಾದ್-0821-2430103, ನ್ಯೂ ಶೇಷಾದ್ರಿ ಅಯ್ಯರ್ ರೋಡ್- 8021-2421042, ಜಯನಗರ (ಕೃಷ್ಣ ಮೂರ್ತಿಪುರಂ)- 0821-2330042, ಸಿದ್ದಾರ್ಥ ಬಡಾವಣೆ- 0821-2470046 ಅನ್ನು ಸಂಪರ್ಕಿಸುವಂತೆ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »