ಮೈಸೂರಿನ ಕುಪ್ಪಣ್ಣ ಪಾರ್ಕ್ ವರ್ಷವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ಚಿಂತನೆ
ಮೈಸೂರು

ಮೈಸೂರಿನ ಕುಪ್ಪಣ್ಣ ಪಾರ್ಕ್ ವರ್ಷವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ಚಿಂತನೆ

June 16, 2020

ಮೈಸೂರು,ಜೂ.15(ಆರ್‍ಕೆ)- ಮೈಸೂ ರಿನ ಹೃದಯ ಭಾಗದ ಅತ್ಯಾಕರ್ಷಕ ಪುಷ್ಪ, ಸಸ್ಯಕಾಶಿ ಕುಪ್ಪಣ್ಣ ಪಾರ್ಕ್ ಅನ್ನು ವರ್ಷ ವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಪೌರಾಡ ಳಿತ, ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಪ್ರಕಟಿಸಿದ್ದಾರೆ.

ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಪ್ರಾದೇಶಿಕ ಕಚೇರಿ ಚಾಮುಂಡೇ ಶ್ವರಿ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಮೂರು ಇಲಾಖೆಗಳ ಪ್ರಗತಿ ಕುರಿ ತಂತೆ ಪರಿಶೀಲನೆ ನಡೆಸಿದ ಸಚಿವರಿಗೆ ಗಾಜಿನ ಮನೆ, ಕಾರಂಜಿ ನಿರ್ಮಿಸಿರುವ ಮೈಸೂರಿನ ಕುಪ್ಪಣ್ಣ ಉದ್ಯಾನವನವನ್ನು ವರ್ಷಪೂರ್ತಿ ಸಾರ್ವ ಜನಿಕರ ವೀಕ್ಷಣೆಗೆ ತೆರೆಯಲು ವಿಫುಲ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ತಿಳಿಸಿದರು. ಮೈಸೂರು ಮಹಾ ಪಾಲಿಕೆಯು ಪಾರ್ಕ್ ಅನ್ನು ನಿರ್ವ ಹಣೆ ಮಾಡುತ್ತಿದ್ದು, ವರ್ಷಕ್ಕೊಮ್ಮೆ ದಸರಾ ಸಂದರ್ಭದಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಕ್ಕಾಗಿ ಕೇವಲ 15 ದಿನ ತೆರೆಯಲಾಗುತ್ತದೆ. ಆ ವೇಳೆ ಸುಮಾರು 5ರಿಂದ 6 ಲಕ್ಷ ಮಂದಿ ಭೇಟಿ ನೀಡುತ್ತಾರೆ ಎಂದು ಮಾಹಿತಿ ನೀಡಿ ದರು. ಅದಕ್ಕೆ ಪುಷ್ಠಿ ನೀಡುವಂತೆ ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡರು, ದಸರಾ ವೇಳೆ ಕೇವಲ 15 ದಿನದಲ್ಲಿ ಕುಪ್ಪಣ್ಣ ಪಾರ್ಕ್‍ಗೆ ಭೇಟಿ ನೀಡುವವರಿಂದ ಸುಮಾರು 45 ಲಕ್ಷ ರೂ. ಪ್ರವೇಶ ಶುಲ್ಕ ದಿಂದ ಆದಾಯ ಬರುತ್ತದೆ.

ಉದ್ಯಾನವನವನ್ನು ವರ್ಷವಿಡೀ ತೆರೆದು ಮನರಂಜನಾ ಕಾರ್ಯಕ್ರಮ ಏರ್ಪಡಿಸಿ ಕನಿಷ್ಟ 5 ರೂ. ಪ್ರವೇಶ ಶುಲ್ಕ ನಿಗದಿ ಮಾಡಿ ದರೂ ಪಾಲಿಕೆಗೆ ಸಾಕಷ್ಟು ಆದಾಯ ಬರುತ್ತದೆ, ಪಾರ್ಕ್ ಸಹ ನಿರಂತರ ಚಟು ವಟಿಕೆಯಲ್ಲಿರುತ್ತದೆ ಎಂದು ಸಲಹೆ ನೀಡಿ ದರು. ವರ್ಷವಿಡೀ ಖಾಯಂ ಆಗಿ ತೆರೆದು ನಿರ್ವಹಿಸಿದಲ್ಲಿ ಸ್ಥಳೀಯರೂ ಸಂಜೆ ವೇಳೆ ಭೇಟಿ ನೀಡುವರಲ್ಲದೆ, ಪ್ರವಾಸೋದ್ಯಮವೂ ಅಭಿವೃದ್ಧಿಯಾಗುವ ಜತೆಗೆ ಸದಾ ಚಟು ವಟಿಕೆ ಕೇಂದ್ರವಾಗಿ ಉಳಿಯಲಿದೆ ಎಂದು ಸಂಸದ ಪ್ರತಾಪ್‍ಸಿಂಹ ಸಹ ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಸಚಿವ ನಾರಾ ಯಣಗೌಡರು, ಈಗಾಗಲೇ ಗಾಜಿನ ಮನೆ ನಿರ್ಮಿಸಿರುವುದರಿಂದ ಬೆಂಗಳೂರಿನ ಲಾಲ್ ಬಾಗ್ ರೀತಿಯಲ್ಲಿ ಮೈಸೂರಿನ ವಿಶಾಲ ವಾದ ಕುಪ್ಪಣ್ಣ ಪಾರ್ಕ್ ಅನ್ನು ವರ್ಷ ವಿಡೀ ಸಾರ್ವಜನಿಕರ ವೀಕ್ಷಣೆಗೆ ತೆರೆದು ಸದಾ ಚಟುವಟಿಕೆಯಿಂದಿರಿಸುವ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸರ್ಕಾರದ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಆ ಬಗ್ಗೆ ರೂಪು-ರೇಷೆಗಳನ್ನು ನಿರ್ಧ ರಿಸಿ, ಕ್ರಿಯಾ ಯೋಜನೆಯೊಂದಿಗೆ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವರು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ವಿಜಯನಗರದಲ್ಲಿ ಹೈಟೆನ್ ಷನ್ ವಿದ್ಯುತ್ ಲೈನ್ ಹಾದು ಹೋಗಿ ರುವ ಮಾರ್ಗ ಆದರ ಕೆಳಗೆ ಇರುವ ಪಾರ್ಕ್‍ಗಳನ್ನು ನರ್ಮ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ತೋಟಗಾರಿಕೆ ಇಲಾಖೆಯವರು ನಿರ್ವ ಹಣೆ ಮಾಡುವ ಜವಾಬ್ದಾರಿ ವಹಿಸಿ ಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಇದೇ ಸಂದರ್ಭ ಸಲಹೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಬಿ.ಹರ್ಷವರ್ಧನ್, ಹೆಚ್.ಪಿ.ಮಂಜು ನಾಥ್, ವಿಧಾನ ಪರಿಷತ್ ಸದಸ್ಯರಾದ ಸಂದೇಶ್‍ನಾಗರಾಜು, ಆರ್.ಧರ್ಮ ಸೇನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಓ ಪ್ರಶಾಂತಕುಮಾರ್ ಮಿಶ್ರಾ ಸೇರಿದಂತೆ ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »