ಮೈಸೂರು, ನ.3(ಪಿಎಂ)-ಖಾಸಗಿ ಬಣ್ಣದ ಕಾರ್ಖಾನೆಗೆ (ಏಷಿಯನ್ ಪೇಯಿಂಟ್ಸ್) ಕೆಐಎಡಿಬಿ ಮೂಲಕ ಜಮೀನು ನೀಡಿ ರುವ ರೈತ ಕುಟುಂಬಗಳ ಯುವಕರಿಗೆ ಅದೇ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ತೀರ್ಮಾನ ಕೈಗೊಳ್ಳಲು ನಿಗದಿಯಾಗಿದ್ದ ಸಭೆಯನ್ನು ಪದೇ ಪದೆ ಮುಂದೂಡ ಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿ ಸಿದ ರಾಜ್ಯ ರೈತ ಸಂಘ-ಹಸಿರು ಸೇನೆ ಸದಸ್ಯರು ಮತ್ತು ಉದ್ಯೋಗಾಕಾಂಕ್ಷಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದು ರಿನ ಉದ್ಯಾನವನದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನಂಜನಗೂಡು ತಾಲೂಕು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 2016ರಲ್ಲಿ ಕಾರ್ಖಾನೆ ಆರಂಭಿಸಲು ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಜಮೀನು ನೀಡಿದ ರೈತ ಕುಟುಂಬಗಳ 61 ಮಂದಿಗೆ ಉದ್ಯೋಗ ಕೊಡಬೇಕು ಎಂಬ ಕರಾರು ಆಯಿತು. ಆದರೆ ಕಾರ್ಖಾನೆಯವರು ಈಗ ಮೈಸೂ ರಿನ ಹೆಬ್ಬಾಳಿನಲ್ಲಿರುವ ನಮ್ಮದೇ ಸ್ಯಾನಿಟೈಸರ್ ಘಟಕದಲ್ಲಿ ಕೆಲಸ ಕೊಡುವುದಾಗಿ ಹೇಳು ತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ಅ.20ರಂದು ಡಿಸಿ ಕಚೇರಿ ಬಳಿ ಸಭೆ ನಡೆಸಿದೆವು. ಬಳಿಕ ನ.2ರಂದು ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸುವ ಭರ ವಸೆ ನೀಡಿದ್ದ ಜಿಲ್ಲಾಡಳಿತ, ನ.3ಕ್ಕೆ ಸಭೆ ಮುಂದೂಡಿತು. ಅದಕ್ಕೂ ನಾವು ಸಮ್ಮತಿ ಸಿದೆವು. ಈಗ ಮತ್ತೆ ಸಭೆ ಮುಂದೂಡುವ ಮಾತ ನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು ಉಪವಿಭಾಗಾಧಿಕಾರಿಗಳು ಇಂದು ಬೆಳಗ್ಗೆ ಕರೆ ಮಾಡಿ ಇಂದು ಸಭೆ ನಡೆಸಲಾಗದು ಎನ್ನುವ ದನಿಯಲ್ಲೇ ಮಾತ ನಾಡಿದರು. ಜಿಲ್ಲಾಡಳಿತ ರೈತರ ವಿಚಾರ ದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ರೈತ ಮುಖಂಡ ಹೊಸಕೋಟೆ ಬಸವರಾಜು, ಕೊನೆಗೂ ಇಂದು ಸಂಜೆ ಸಭೆ ನಡೆಯಿತು. ಜಿಲ್ಲಾಧಿಕಾರಿಗಳು, ಮೈಸೂರು ಉಪವಿಭಾಗಾಧಿಕಾರಿ, ಕಾರ್ಖಾನೆ ಪ್ರತಿನಿಧಿ ಗಳು, ಕೆಐಎಡಿಬಿ ಅಧಿಕಾರಿಗಳು ಹಾಗೂ ರೈತ ಮುಖಂಡರು ಸಭೆಯಲ್ಲಿದ್ದೆವು. ರೈತರು ಜಮೀನು ನೀಡಿರುವ ಜಾಗದಲ್ಲಿ ಸ್ಥಾಪನೆ ಯಾದ ಕಾರ್ಖಾನೆಯಲ್ಲೇ ಕೆಲಸ ಕೊಡ ಬೇಕು ಎಂಬುದು ನಮ್ಮ ಆಗ್ರಹವಾದರೆ, ಕಾರ್ಖಾನೆ ಪ್ರತಿನಿಧಿಗಳು ಸ್ಯಾನಿಟೈಸರ್ ಘಟಕದಲ್ಲಿ ಕೆಲಸ ಕೊಡುವುದಾಗಿ ತಿಳಿಸಿ ಹಳೇ ತೀರ್ಮಾನಕ್ಕೆ ಅಂಟಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಖಾನೆ ಪ್ರತಿನಿಧಿಗಳ ತೀರ್ಮಾನಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಬಳಿಕ ಒಂದು ತೀರ್ಮಾನ ತಿಳಿಸುವುದಾಗಿ ಕಾರ್ಖಾನೆಯವರು ಹೇಳಿ ದ್ದಾರೆ. ಇದಕ್ಕೂ ನಮ್ಮ ಆಕ್ಷೇಪ ವ್ಯಕ್ತಪಡಿ ಸಿದ್ದೇವೆ. ಜಿಲ್ಲಾಡಳಿತ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಡಿಸಿ ಹೇಳುತ್ತಿದ್ದಾರೆ. ಹೀಗಾಗಿ ಅವರು ರೈತರ ಪರವೋ, ಬಂಡವಾಳಶಾಹಿಗಳ ಪರವೋ ಎಂಬ ಅನುಮಾನ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ರೈತ ಮುಖಂಡ ರಾದ ಪ್ರಸನ್ನಗೌಡ, ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ ಸೇರಿದಂತೆ ಉದ್ಯೋ ಗಾಂಕ್ಷಿಗಳು ಪ್ರತಿಭಟನೆಯಲ್ಲಿದ್ದರು.